ಅಷ್ಟಲಕ್ಷ್ಮಿಯರು ಮತ್ತು 8 ಹಣಕಾಸು ಪಾಠಗಳು

13 Nov 2023

By: Vijayasarathy SN

ಲಕ್ಷ್ಮೀ ಎಂದರೆ ಅಷ್ಟೈಷ್ವರ್ಯವನ್ನೂ ಕರುಣಿಸುವ ದೇವತೆ. ಅಂತೆಯೇ ಅಷ್ಟ ಲಕ್ಷ್ಮೀಯರನ್ನು ಹಿಂದೂ ಧಾರ್ಮಿಕರು ಪೂಜಿಸುತ್ತಾರೆ. ಧನ, ಧಾನ್ಯ, ಸಮೃದ್ಧಿ ನೆಲಸುವಂತೆ ಕೋರುತ್ತಾರೆ.

ಅಷ್ಟಲಕ್ಷ್ಮೀಯರು

Pic credit: Google

ಹಿಡಿಯುವ ಕೆಲಸದಲ್ಲಿ ಗೆಲುವು ತಂದುಕೊಡುತ್ತಾಳೆ ವಿಜಯಲಕ್ಷ್ಮೀ. ಹಣಕಾಸು ಹೂಡಿಕೆ ಮಾಡಲು ಹುರಿದುಂಬಿಸುವ ಶಕ್ತಿಯನ್ನು ಈ ದೇವಿ ಕರುಣಿಸುತ್ತಾಳೆ.

1. ವಿಜಯಲಕ್ಷ್ಮೀ

Pic credit: Google

ಧನದ ಜೊತೆ ಧಾನ್ಯಗಳನ್ನೂ ಹೊತ್ತವಳು ಈ ಧಾನ್ಯಲಕ್ಷ್ಮೀ. ಹೂಡಿಕೆಗೆ ಅರಿವು ಮುಖ್ಯ. ನಿಮ್ಮ ಅರಿವಿನ ಹಸಿವನ್ನು ನೀಗಿಸಲು ಬೇಕಾದ ಧಾನ್ಯವನ್ನು ಒದಗಿಸುತ್ತಾಳೆ ಈಕೆ.

2. ಧಾನ್ಯಲಕ್ಷ್ಮೀ

Pic credit: Google

ಶತ್ರುಗಳನ್ನು ಎದುರಿಸಲು, ಸಮಸ್ಯೆ ನಿವಾರಿಸಲು ಧೈರ್ಯಬೇಕು. ನಿಮ್ಮ ಹಣಕಾಸು ತೊಡಕುಗಳನ್ನು ನೀಗಿಸಿ ಮುನ್ನುಗ್ಗುವ ಶಕ್ತಿ ಕೊಡುತ್ತಾಳೆ ಈ ಲಕ್ಷ್ಮೀ.

3. ಧೈರ್ಯಲಕ್ಷ್ಮೀ

Pic credit: Google

ವಿದ್ಯಾಲಕ್ಷ್ಮೀ ಅಥವಾ ಐಶ್ವರ್ಯ ಲಕ್ಷ್ಮೀ ನಮಗೆ ಜ್ಞಾನ ಕರುಣಿಸುತ್ತಾಳೆ. ಹೂಡಿಕೆಗೆ ಬೇಕಾದ ಜ್ಞಾನ ಹಾಗೂ ಧರ್ಮದ ಹಾದಿಯಲ್ಲಿ ಹಣ ಮಾಡುವ ಬುದ್ಧಿ ಬೇಕು.

4. ಐಶ್ವರ್ಯ ಲಕ್ಷ್ಮೀ

Pic credit: Google

ಸಂತಾನ ಲಕ್ಷ್ಮೀ ನಮ್ಮ ಸಂತಾನ ಮುಂದುವರಿಸುತ್ತಾಳೆ. ನಾವು ಮಾಡಿದ ಸಂಪಾದನೆ ನಮ್ಮ ಮುಂದಿನ ಪೀಳಿಗೆಗೆ ಉಳಿಯುವಂತಾಗಬೇಕು. ಸಮೃದ್ಧಿ ನಮಗೇ ಅಂತ್ಯವಾಗಬಾರದು.

5. ಸಂತಾನ ಲಕ್ಷ್ಮೀ

Pic credit: Google

ನಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸುವ ದೇವಿ. ಭಯ, ಭಕ್ತಿ, ಶ್ರಮ ಪಡುವ ಜನರಿಗೆ ಈ ಲಕ್ಷ್ಮೀ ಒಲಿಯುತ್ತಾಳೆ. ದುಡ್ಡಿನ ಹಿಂದೆ ಹೋಗುವುದಕ್ಕಿಂತ ಪ್ರಾಮಾಣಿಕತೆ ಮುಖ್ಯ.

6. ಆದಿಲಕ್ಷ್ಮೀ

ಇದು ಸಂಪತ್ತಿನ ದೇವತೆ. ಸಮೃದ್ಧತೆ ನೆಲಸಲು ವಿವಿಧ ಮೂಲಗಳಿಂದ ಸಂಪತ್ತು ಬರಬೇಕು. ಅಂತೆಯೇ ನಮ್ಮ ಹೂಡಿಕೆಗಳು ವಿವಿಧ ಕ್ಷೇತ್ರಗಳಲ್ಲಿರಬೇಕು. ಆಗ ಸಮೃದ್ಧಿ ಸಿಗುತ್ತದೆ.

7. ಧನಲಕ್ಷ್ಮೀ

ಈ ಲಕ್ಷ್ಮೀ ಎರಡು ಬದಿಯಲ್ಲಿ ಆನೆಗಳಿವೆ. ದೇವೇಂದ್ರನ ಸಂಪತ್ತನ್ನು ಮರಳಿಪಡೆಯಲು ಈ ಆನೆಗಳು ನೆರವಾಗದ್ದವು. ಅಂತೆಯೇ ನಾವು ಗಳಿಸಿದ ಸಂಪತ್ತು ಉಳಿಸಬಲ್ಲುಳು ಗಜಲಕ್ಷ್ಮೀ.

8. ಗಜಲಕ್ಷ್ಮೀ