ಟೀಚರ್​ನಿಂದ ಫಿಲಾಂತ್ರೋಪಿವರೆಗೆ; ನೀತಾ ಅಂಬಾನಿ ಪ್ರಯಾಣ

By: Vijayasarathy SN

10 November 2023

ಅಂಬಾನಿ ಪತ್ನಿ

ರಿಲಾಯನ್ಸ್ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಭಾರತದ ಅತಿಶ್ರೀಮಂತ ಮಹಿಳೆಯರಲ್ಲಿ ಒಬ್ಬರು. 25,000 ಕೋಟಿ ರೂ ಆಸ್ತಿಯ ಒಡತಿ.

Pic credit: Google

ಟೀಚರ್ ನೀತಾ

ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು 1963ರಲ್ಲಿ ಮುಂಬೈನಲ್ಲಿ ಹುಟ್ಟಿದ ನೀತಾ ಅಂಬಾನಿ ಮೂಲತಃ ಟೀಚರ್. ಭರತನಾಟ್ಯ ಪ್ರವೀಣೆ.

Pic credit: Google

ಫೌಂಡೇಶನ್

ನೀತಾ ಅಂಬಾನಿ ರಿಲಾಯನ್ಸ್ ಫೌಂಡೇಶನ್​ನ ಮುಖ್ಯಸ್ಥೆಯಾಗಿದ್ದಾರೆ. ಫೌಂಡೇಶನ್ ವತಿಯಿಂದ ಸಾಕಷ್ಟು ಸಮಾಜಸೇವೆ ಚಟುವಟಿಕೆಗಳು ನಡೆಯುತ್ತವೆ.

Pic credit: Google

ಷೇರುಪಾಲು

ನೀತಾ ಅಂಬಾನಿಯ 25,000 ಕೋಟಿ ರೂ ಸಂಪತ್ತಿನಲ್ಲಿ ಹೆಚ್ಚಿನ ಭಾಗವು ರಿಲಾಯನ್ಸ್ ಇಂಡಸ್ಟ್ರೀಸ್​ನಲ್ಲಿ ಹೊಂದಿರುವ ಅವರ ಷೇರುಪಾಲಿನಿಂದ ಬಂದವು.

Pic credit: Google

ಆದಾಯಮೂಲ?

ಷೇರುಗಳನ್ನು ಹೊಂದಿರುವವರಿಗೆ ಡಿವಿಡೆಂಡ್​ಗಳು ಸಿಗುತ್ತವೆ. ಹೆಚ್ಚಿನ ಶ್ರೀಮಂತರಿಗೆ ಇದು ಒಂದು ಆದಾಯಮೂಲ. ನೀತಾ ಅಂಬಾನಿಗೂ ಸಾಕಷ್ಟು ಡಿವಿಡೆಂಡ್ ಸಿಗುತ್ತದೆ.

Pic credit: Google

90 ಕೋಟಿ ಕಾರು

ನೀತಾ ಅಂಬಾನಿ ಬಳಿ ಆಡಿ ಎ9 ಚಮಿಲಿಯಾನ್ ಕಾರು ಇದೆ. ಇದರ ಬೆಲೆ ಅಂದಾಜು 90 ಕೋಟಿ ರೂ. ಒಂದು ಬಟನ್ ಒತ್ತಿದರೆ ಕಾರಿನ ಬಣ್ಣ ಬದಲಾಗುತ್ತದೆ.

Pic credit: Google

ಆಭರಣಪ್ರಿಯೆ

ನೀತಾ ಅಂಬಾನಿ ಬಳಿ ಸಾಕಷ್ಟು ಚಿನ್ನ, ವಜ್ರ, ಹರಳು ಮತ್ತಿತರ ಅಮೂಲ್ಯ ಲೋಹಗಳ ಆಭರಣಗಳ ಕಲೆಕ್ಷನ್ ಇದೆ. ಅವರ ಒಂದು ಸೀರೆ 40 ಲಕ್ಷ ರೂ ಬೆಲೆ ಇದೆ. ಅತಿದುಬಾರಿ ಲಿಪ್​ಸ್ಟಿಕ್ ಸೆಟ್​ಗಳಿವೆ.

Pic credit: Google

ಚಹಾ ಸೆಟ್

ನೀತಾ ಅಂಬಾನಿಗೆ ಟೀ ಎಂದರೆ ಬಹಳ ಇಷ್ಟ. ಜಪಾನ್​ನ ನೋರಿಟಾಕೆ ಕಂಪನಿಯ 1.5 ಕೋಟಿ ರೂ ಮೌಲ್ಯದ ಗ್ಲಾಸ್, ಪ್ಲೇಟ್ ಇತ್ಯಾದಿ ಟೀ ಸೆಟ್ ಇವರ ಬಳಿ ಇದೆ.

Pic credit: Google