11 Feb 2025
Pic credit: DD
ಬೆಂಗಳೂರು ಏರೋ ಶೋ; ವೈಮಾನಿಕ ವೈಭವ
Vijayasarathy SN
ಬೆಂಗಳೂರಿನಲ್ಲಿ ಫೆಬ್ರುವರಿ 10ರಂದು ಆರಂಭಗೊಂಡು 14ರವರೆಗೂ ಏರೋ ಶೋ ನಡೆಯುತ್ತಿದೆ. ಯಲಹಂಕ ವಾಯು ನಿಲ್ದಾಣದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಪ್ರದರ್ಶನ ಇರುತ್ತದೆ.
Pic credit: DD
ಭಾರತದ ವಾಯುಸೇನೆಯ ಸೂರ್ಯಕಿರಣ್ ತಂಡದಿಂದ ಆಗಸದಲ್ಲಿ ವಿಮಾನಗಳು ಚಿತ್ತಾರ ಮೂಡಿತು. 9 ಹಾಕ್ ವಿಮಾನಗಳ ಸಂಯೋಜಿತ ಹಾರಾಟ ನೋಡುಗರನ್ನು ಸೋಜಿಗರನ್ನಾಗಿಸಿತು.
Pic credit: DD
ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್ ಎನ್ನಲಾದ ಅಮೆರಿಕದ ಎಫ್-35 ಲೈಟ್ನಿಂಗ್ನ ಗಾಂಭೀರ್ಯ ಹಾರಾಟ ಅಬ್ಬಬ್ಬಾ ಎನ್ನುವಂತಿತ್ತು...
Pic credit: DD
ಪೈಲಟ್ ತರಬೇತಿಗೆಂದು ಭಾರತದಲ್ಲೇ ನಿರ್ಮಿಸಲಾದ ಅತ್ಯಾಧುನಿಕ ಹನ್ಸಾ ಎನ್ (ವಿಟಿ ಎಚ್ಎನ್ಜಿ) ಯುದ್ಧ ಟ್ರೈನಿಂಗ್ ಏರ್ಕ್ರಾಫ್ಟ್ ಇದು... ನೆಕ್ಸ್ಟ್ ಜನರೇಶನ್ ಟೆಕ್ನಾಲಜಿ ಹೊಂದಿದೆ.
Pic credit: DD
ರಷ್ಯಾದ ಪ್ರಬಲ ಯುದ್ಧವಿಮಾನವಾದ ಸುಖೋಯ್ ಎಸ್ಯು-30 ಎಂಕೆಐ ಭಾರತದ ಬತ್ತಳಿಕೆಯ ಪ್ರಬಲ ಅಸ್ತ್ರವಾಗಿದೆ. ಇದು ಮಲ್ಟಿರೋಲ್ ಫೈಟರ್ ಜೆಟ್ ಆಗಿದೆ.
Pic credit: DD
ಬೆಂಗಳೂರಿನ ಎಚ್ಎಎಲ್ ನಿರ್ಮಿಸಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಇದು... ಮಿಲಿಟರಿಯಲ್ಲಿ ಬಹುವಿಧದ ಕಾರ್ಯಗಳಿಗೆ ಇದನ್ನು ಉಪಯೋಗಿಸಲಾಗುತ್ತದೆ.
Pic credit: DD
ಭಾರತದಲ್ಲಿ ದೇಶೀಯವಾಗಿ ನಿರ್ಮಿಸಲಾಗಿರುವ ಹಗುರ ಫೈಟರ್ ವಿಮಾನ ತೇಜಸ್ ಮಾರ್ಕ್ 1ಎ. ಇದು ಭಾರತದ ಮಿಲಿಟರಿ ಸ್ವಾವಲಂಬನೆಯ ಸಂಕೇತವಾಗಿದೆ.
Pic credit: DD
ಎಚ್ಎಎಲ್ ಸ್ವಂತವಾಗಿ ಅಭಿವೃದ್ಧಿಪಡಿಸಿದ ವಿಮಾನ ಎಚ್ಟಿಟಿ-40. ಇದು ಕೂಡ ಮಿಲಿಟರಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆಯ ಹೆಜ್ಜೆಗೆ ಸಾಕ್ಷಿಯಾಗಿದೆ.
Pic credit: DD
Next: ಬೆಂಗಳೂರು ಏರೋ ಶೋ: ವಿಶೇಷತೆಗಳೇನು?
ಇನ್ನಷ್ಟು ನೋಡಿ