ಬೆಂಗಳೂರು ಏರ್ ಶೋ ವಿಶೇಷತೆಗಳೇನು?

10 February 2025

Author: Ganapathi Sharma

ಏಷ್ಯಾದ ಅತಿದೊಡ್ಡ ಏರ್​ಶೋ ಬೆಂಗಳೂರಿನಲ್ಲಿ ಆರಂಭಗೊಂಡಿದೆ.

ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಅತಿದೊಡ್ಡ ಏರ್​ಶೋವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ಇಂದಿನಿಂದ ಫೆಬ್ರವರಿ 14ರವರೆಗೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಲಿದೆ.

ಮೊದಲ 3 ದಿನ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರಗಳ ದಿನಗಳಾಗಿರುತ್ತವೆ. ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ.

ಈ ಬಾರಿ ರಷ್ಯಾ ಹಾಗೂ ಅಮೆರಿಕದ ಫೈಟರ್ ಏರ್‌ಕ್ರಾಫ್ಟ್​ಗಳು​ ಭಾಗಿಯಾಗುತ್ತಿವೆ.

ಎಐ, ಡ್ರೋನ್ಸ್, ಸೈಬರ್ ಸೆಕ್ಯುರಿಟಿ, ಡ್ರೋನ್, ಗ್ಲೋಬರ್ ಏರೋಸ್ಪೇಸ್, ಆತ್ಮನಿರ್ಭರ ಭಾರತ ಉತ್ಪತ್ನಗಳ ಪ್ರದರ್ಶನವೂ ಈ ಬಾರಿಯ ಏರ್​ಶೋನಲ್ಲಿ ಇರಲಿದೆ.

27 ದೇಶಗಳ ರಕ್ಷಣಾ ಇಲಾಖೆಯ ಸಚಿವರು ಕೂಡ ಏರ್ ಶೋನಲ್ಲಿ ಭಾಗಿಯಾಗುತ್ತಿದ್ದಾರೆ. ಏರ್​ಶೋ ವೀಕ್ಷಣೆಗೆ 7 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ.

NEXT - ಮಹಾಕುಂಭ: ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯಸ್ನಾನ