ಬ್ಯಾಂಕುಗಳಲ್ಲಿ ನೀವು ಎಫ್ಡಿ ಇಟ್ಟರೆ ನಿಗದಿತ ಅವಧಿಗಿಂತ ಮುಂಚಿತವಾಗಿ ಹಿಂಪಡೆದರೆ ಪ್ರೀಪೇಮೆಂಟ್ ಪೆನಾಲ್ಟಿ ವಿಧಿಸಲಾಗುತ್ತದೆ. ಹೀಗಾಗಿ, ಹೆಚ್ಚಿನ ಅವಧಿಗೆ ಎಫ್ಡಿ ಇಡಲು ಕಷ್ಟವಾಗಬಹುದು.
Pic credit: Google
ಬ್ಯಾಂಕ್ ಆಫ್ ಬರೋಡಾದಲ್ಲಿ ವಿಶೇಷ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಅನ್ನು ಆರಂಭಿಸಲಾಗಿದೆ. ಇದರಲ್ಲಿ ಪ್ರೀಮೆಚ್ಯೂರ್ ಪೇಮೆಂಟ್, ಪಾರ್ಷಿಯಲ್ ವಿತ್ಡ್ರಾಯಲ್ ಫೆಸಿಲಿಟಿ ಒದಗಿಸಲಾಗಿದೆ.
Pic credit: Google
ಐದು ಲಕ್ಷ ರೂವರೆಗಿನ ಎಫ್ಡಿಗೆ ಪ್ರೀಪೇಮೆಂಟ್ ಪೆನಾಲ್ಟಿ ಇರುವುದಿಲ್ಲ. ಆದರೆ, ಈ ಠೇವಣಿ ಕನಿಷ್ಠ 12 ತಿಂಗಳು ಅವಧಿ ದಾಟಿರಬೇಕು. ನೀವು 5 ವರ್ಷಕ್ಕೆ ಎಫ್ಡಿ ಇಟ್ಟರೂ ಒಂದು ವರ್ಷದ ಬಳಿಕ ದಂಡರಹಿತವಾಗಿ ವಿತ್ಡ್ರಾ ಸಾಧ್ಯ.
Pic credit: Google
ಐದು ಲಕ್ಷ ರೂ ಮೇಲ್ಪಟ್ಟ, ಹಾಗೂ ಒಂದು ಕೋಟಿ ರೂ ಒಳಗಿನ ಎಫ್ಡಿಯಿಂದ ನೀವು ಅವಧಿಗೆ ಮುನ್ನ ಠೇವಣಿ ಹಿಂಪಡೆದರೆ ಶೇ 1ರಷ್ಟು ಬಡ್ಡಿ ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ.
Pic credit: Google
ಒಂದು ಕೋಟಿ ರೂಗಿಂತ ಹೆಚ್ಚಿನ ಮೊತ್ತದ ಠೇವಣಿ ಇಟ್ಟಿದ್ದರೆ ಅವಧಿಗೆ ಮುನ್ನ ವಿತ್ಡ್ರಾ ಮಾಡುವುದಾದರೆ ಶೇ. 1.5ರಷ್ಟು ಬಡ್ಡಿಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ.
Pic credit: Google
ಬಿಒಬಿಯ ಈ ಸ್ಪೆಷಲ್ ಎಫ್ಡಿಯಲ್ಲಿ ನೀವು ಸ್ವಲ್ಪ ಮೊತ್ತವನ್ನು ಅವಧಿಗೆ ಮುನ್ನ ವಿತ್ಡ್ರಾ ಮಾಡಲು ಅವಕಾಶ ಇದೆ. ನೀವು ವಿತ್ಡ್ರಾ ಮಾಡುವ ಮೊತ್ತಕ್ಕೆ ಮಾತ್ರವೇ ದಂಡ ಹಾಕಲಾಗುತ್ತದೆ.
Pic credit: Google
ಬ್ಯಾಂಕ್ ಆಫ್ ಬರೋಡಾದ ಈ ಎಫ್ಡಿ ಸ್ಕೀಮ್ನಲ್ಲಿ ಕನಿಷ್ಠ ಠೇವಣಿ ಐದು ಸಾವಿರ ರೂ; ಕನಿಷ್ಠ ಅವಧಿ 12 ತಿಂಗಳು, ಗರಿಷ್ಠ ಅವಧಿ 60 ತಿಂಗಳು ಇದೆ.