500 ರೂ ನಕಲಿ ನೋಟುಗಳು ಬಿಹಾರದಲ್ಲಿ ಬೆಳಕಿಗೆ ಬಂದಿವೆ. ನಮ್ಮ ನಿಮ್ಮ ಊರುಗಳಲ್ಲೂ ನಕಲಿಗಳಿರಬಹುದು. ಮೂಲ ನೋಟುಗಳ ವಿಶೇಷತೆ ತಿಳಿದರೆ ನಕಲಿ ನೋಟು ಪತ್ತೆ ಮಾಡಬಹುದು.
Pic credit: RBI
1) 500 ಸಂಖ್ಯೆಯ ರಿಜಿಸ್ಟರ್; 2) 500 ಸಂಖ್ಯೆಯ ಲೇಟೆಂಟ್ ಇಮೇಜ್ ಗಮನಿಸಿ. 3) ದೇವನಾಗರಿ ಭಾಷೆಯ ५००
(500) ಅಂಕಿ ಇರುತ್ತದೆ; 4) ಮಧ್ಯದಲ್ಲಿ ಮಹಾತ್ಮಗಾಂಧಿ ಚಿತ್ರ ಇರುತ್ತದೆ. 5) ಬಹಳ ಚಿಕ್ಕದಾಗಿ ‘भारत’ ಮತ್ತು ‘India’ ಎಂದು ಬರೆದಿರುತ್ತದೆ.
Pic credit: RBI
6) ಇಲ್ಲಿ ಒಂದು ಚಿಕ್ಕ ಪಟ್ಟಿ ಗಮನಿಸಬಹುದು. ‘भारत’ ಮತ್ತು ‘RBI’ ಬರೆದಿರಲಾಗುತ್ತದೆ. ನೋಟು ತಿರುತಿಸಿದಂತೆಲ್ಲಾ ಈ ಅಡ್ಡಪಟ್ಟಿಯ ಬಣ್ಣ ಹಸಿರಿನಿಂದ ನೀಲಿಗೆ, ನೀಲಿಯಿಂದ ಹಸಿರಿಗೆ ಬದಲಾಗುತ್ತದೆ.
Pic credit: RBI
7) ಈ ಕಾಲಂನಲ್ಲಿ ಆರ್ಬಿಐನಿಂದ ಖಾತ್ರಿ, ಗವರ್ನರ್ ಸಹಿ, ಆರ್ಬಿಐ ಎಂಬ್ಲೆಮ್ ಕಾಣಬಹುದು; 8) ನೋಟಿನ ಬಲಭಾಗದಲ್ಲಿ ಖಾಲಿ ಇದ್ದಂತಿರುವ ಜಾಗವನ್ನು ಬೆಳಕಿಗೆ ಹಿಡಿದರೆ ಮಹಾತ್ಮ ಗಾಂಧಿ ಚಿತ್ರ ಕಾಣುತ್ತದೆ. 500 ಅಂಕಿಯ ವಾಟರ್ಮಾರ್ಕ್ ಇರುತ್ತದೆ.
Pic credit: RBI
9) ನೋಟಿನ ಎಡ ಮೇಲ್ಭಾಗ ಹಾಗೂ ಬಲಗಡೆಯ ಕೆಳಭಾಗದಲ್ಲಿ ನೋಟಿನ ಸಂಖ್ಯೆ ಅಸೆಂಡಿಂಗ್ ಆರ್ಡರ್ನಲ್ಲಿ ಇರುತ್ತದೆ. 10) ಖಾಲಿ ಸ್ಥಳದಲ್ಲಿ ₹500 ಇದೆ. ನೋಟು ತಿರುಗಿಸಿದರೆ ಬಣ್ಣ ಬದಲಾಗುತ್ತದೆ; 11) ಬಲಗಡೆಯಲ್ಲಿ ಅಶೋಕ ಪಿಲ್ಲರ್ ಲಾಂಛನ ಇರುತ್ತದೆ.
Pic credit: RBI
12) ನೋಟಿನ ಬಲ ಅಂಚಿನಲ್ಲಿ ಅಂಧ ವ್ಯಕ್ತಿಗಳಿಗೆ ಸಹಾಯವಾಗಬಲ್ಲ ಅಂಶಗಳಿವೆ. ಮಹಾತ್ಮ ಗಾಂಧಿ, ಅಶೋಕಾ ಪಿಲ್ಲರ್, 500 ರೂ ಅಕ್ಷರ ಇತ್ಯಾದಿಯು ಕೈ ಸ್ಪರ್ಶದಿಂದ ಗೊತ್ತಾಗುವ ರೀತಿಯಲ್ಲಿ ಇರುತ್ತದೆ.
Pic credit: RBI
ನೋಟಿನ ಹಿಂಬದಿಯಲ್ಲಿ ನೋಟು ಮುದ್ರಣ ವರ್ಷ, ಸ್ವಚ್ಛ್ ಭಾರತ್ ಲೋಗೋ, ವಿವಿಧ ಭಾಷೆಗಳಲ್ಲಿ 500, ರೆಡ್ ಫೋರ್ಟ್, ದೇವನಾಗರಿಯಲ್ಲಿ 500 ಇರುತ್ತದೆ.