31 Dec 2024
2025ಕ್ಕೆ ನಿಮ್ಮ ಹಣಕಾಸು ಗುರಿ ನಿಶ್ಚಯಿಸಿ
Pic credit: Google
Vijayasarathy SN
ವೆಚ್ಚಕ್ಕೆ ಕಡಿವಾಣ
Pic credit: Google
ನೀವು ದಿನನಿತ್ಯ ಮಾಡುವ ಪ್ರತಿಯೊಂದು ಸಣ್ಣ, ದೊಡ್ಡ ಖರ್ಚಿನ ವಿವರ ಬರೆದಿಡಿ. ತಿಂಗಳಿಗೊಮ್ಮೆ ವೆಚ್ಚದ ಪಟ್ಟಿ ಮಾಡಿ. ಯಾವುದಕ್ಕೆಷ್ಟು ಖರ್ಚಾಗುತ್ತೆ ಗಮನಿಸಿ.
ಉಳಿತಾಯ ಮಾಡಿ
Pic credit: Google
ವೆಚ್ಚಗಳ ಪಟ್ಟಿ ಮಾಡಿದ ಬಳಿಕ ಅನಗತ್ಯ ಎನಿಸಿದವುಗಳನ್ನು ಗುರುತಿಸಿ ಅದಕ್ಕೆ ವೆಚ್ಚ ನಿಲ್ಲಿಸಿ. ಒಂದು ತಿಂಗಳಲ್ಲಿ ಸಾಧ್ಯವಾದಷ್ಟನ್ನೂ ಉಳಿಸಲು ಯತ್ನಿಸಿ.
ಹೂಡಿಕೆ ಮಾಡಿ
Pic credit: Google
ಹಣ ಉಳಿಸುವುದು ಎಷ್ಟು ಮುಖ್ಯವೋ ಆ ಹಣವನ್ನು ವಿವಿಧ ಹೂಡಿಕೆಗಳಲ್ಲಿ ವಿನಿಯೋಗಿಸುವುದೂ ಮುಖ್ಯ. ಷೇರು, ಚಿನ್ನ, ಸೈಟು, ಎಫ್ಡಿ, ಆರ್ಡಿ ಇತ್ಯಾದಿ ಆಯ್ಕೆಗಳಿವೆ.
ತುರ್ತು ನಿಧಿ
Pic credit: Google
ನಿತ್ಯ ಜೀವನದಲ್ಲಿ ಅನಿರೀಕ್ಷಿತ ಖರ್ಚುಗಳು ಬರುವುದುಂಟು. ಅದಕ್ಕಾಗಿ ನಿಮ್ಮ ಮಾಸಿಕ ವೆಚ್ಚದ 6-10 ಪಟ್ಟು ಹಣವನ್ನು ಎಮರ್ಜೆನ್ಸಿ ಫಂಡ್ ಆಗಿ ಪ್ರತ್ಯೇಕವಾಗಿ ಇಡಿ.
ನಿವೃತ್ತಿ ಪ್ಲಾನ್
Pic credit: Google
ಇನ್ನೂ ಚಿಕ್ಕ ವಯಸ್ಸು, ನಿವೃತ್ತಿಯಾಗಲೂ ಸಮಯ ಇದೆ. ಮುಂದೆ ನೋಡಿದರಾಯಿತು ಎನ್ನುವ ಉದಾಸೀನತೆ ಬೇಡ. ರಿಟೈರ್ಮೆಂಟ್ಗೆಂದು ಪ್ರತ್ಯೇಕವಾಗಿ ಹೂಡಿಕೆ ಮಾಡಿ.
ಇನ್ಷೂರೆನ್ಸ್
Pic credit: Google
ಕಚೇರಿಯಿಂದ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಇರುತ್ತದಾದರೂ ವೈಯಕ್ತಿಕವಾಗಿಯೂ ಇಡೀ ಕುಟುಂಬಕ್ಕೆ ಆಗುವ ವಿಮೆ ಮಾಡಿಸಿ. ಟರ್ಮ್ ಲೈಫ್ ಇನ್ಷೂರೆನ್ಸ್ ಕೂಡ ಉತ್ತಮ.
ಎಚ್ಚರಿಕೆ ಇರಲಿ...
Pic credit: Google
ಈಗಂತೂ ಬಹಳ ಹೆಚ್ಚು ರಿಟರ್ನ್ಸ್ ಕೊಡುತ್ತೇವೆಂದು ಆಫರ್ ಮಾಡುವ ಸ್ಕ್ಯಾಮರ್ಗಳು ಸಿಕ್ಕಾಪಟ್ಟೆ ಇದ್ದಾರೆ. ಅದಕ್ಕೆ ಮಾರುಹೋಗಿ ಹಣ ಕಳೆದುಕೊಳ್ಳಬೇಡಿ. ಶುಭವಾಗಲಿ...
Next: ಭಾರತದ ಅತ್ಯಂತ ದುಬಾರಿ ಷೇರುಗಳಿವು
ಇನ್ನಷ್ಟು ನೋಡಿ