ಭಾರತದ ಅತ್ಯಂತ ದುಬಾರಿ ಷೇರುಗಳಿವು...

26 Nov 2024

Pic credit: Google

Vijayasarathy SN

ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಷೇರು ಬೆಲೆ 2,19,621 ರೂ ಇದೆ. ಭಾರತದ ಅತ್ಯಂತ ದುಬಾರಿ ಸ್ಟಾಕ್ ಎನಿಸಿದ್ದ ಎಂಆರ್​ಎಫ್ ಅನ್ನು ಇದು ಕಳೆದ ತಿಂಗಳು ಹಿಂದಿಕ್ಕಿದೆ.

1. ಎಲ್ಸಿಡ್

Pic credit: Google

ಎಲ್ಸಿಡ್ ಷೇರು ತಿಂಗಳ ಹಿಂದಿನವರೆಗೂ ಕೇವಲ 3 ರೂ ಆಸುಪಾಸಿನ ಬೆಲೆಯಲ್ಲಿ ಹೊಯ್ದಾಡುತ್ತಿತ್ತು. ಪ್ರೈಸ್ ಡಿಸ್ಕವರಿ ವಿಧಾನದಲ್ಲಿ ಅದರ ಬೆಲೆ ಎರಡು ಲಕ್ಷ ರೂ ಗಡಿದಾಟಿತ್ತು.

ಪ್ರೈಸ್ ಡಿಸ್ಕವರಿಯಲ್ಲಿ...

Pic credit: Google

ಭಾರತದ ನಂಬರ್ ಒನ್ ಟಯರ್ ಕಂಪನಿಯಾದ ಎಂಆರ್​ಎಫ್​ ಸಾಕಷ್ಟು ವರ್ಷಗಳಿಂದ ಅತ್ಯಂತ ದುಬಾರಿ ಷೇರು ಎನಿಸಿತ್ತು. ಸದ್ಯ ಅದರ ಷೇರುಬೆಲೆ 1,24,206 ರೂ ಇದೆ.

2. ಎಂಆರ್​ಎಫ್

Pic credit: Google

ಜಾಕಿ ಇತ್ಯಾದಿ ಬ್ರ್ಯಾಂಡ್ ಹೊಂದಿರುವ ಒಳ ಉಡುಪು, ಸಾಕ್ಸ್​ಗಳನ್ನು ತಯಾರಿಸುವ ಬೆಂಗಳೂರು ಮೂಲದ ಪೇಜ್ ಇಂಡಸ್ಟ್ರೀಸ್​ನ ಷೇರುಬೆಲೆ 45,369 ಇದೆ. ಸದ್ಯ ಇದು 3ನೇ ಅತಿದುಬಾರಿ ಸ್ಟಾಕ್ ಎನಿಸಿದೆ.

3. ಪೇಜ್ ಇಂಡಸ್ಟ್ರೀಸ್

Pic credit: Google

ಸಾಫ್ಟ್​ವೇರ್ ಮತ್ತು ಆಟೊಮೇಶನ್ ಸಂಸ್ಥೆಯಾದ ಹನಿವೆಲ್ ಆಟೊಮೇಶನ್​ನ ಷೇರುಬೆಲೆ 41,400 ರೂ ಇದೆ. ಭಾರತದ ಅತ್ಯಂತ ದುಬಾರಿ ಷೇರುಗಳಲ್ಲಿ ಇದಕ್ಕೆ 4ನೇ ಸ್ಥಾನ.

4. ಹನಿವೆಲ್

Pic credit: Google

ಜರ್ಮನಿ ಮೂಲದ ಬಾಷ್ ಸಂಸ್ಥೆಯ ಷೇರುಬೆಲೆ 35,050 ರೂ ಇದ್ದು ಇದು 5ನೇ ಅತ್ಯಂತ ದುಬಾರಿ ಭಾರತೀಯ ಸ್ಟಾಕ್ ಆಗಿದೆ. ಇದು ವಾಹನ ಬಿಡಿಭಾಗ ಹಾಗೂ ಗೃಹೋಪಕರಣಗಳನ್ನು ತಯಾರಿಸುತ್ತದೆ.

5. ಬಾಷ್

Pic credit: Google

3ಎಂ ಇಂಡಿಯಾ 32,456 ರೂ; ಅಬಾಟ್ ಇಂಡಿಯಾ 27,564 ರೂ ಮತ್ತು ಶ್ರೀ ಸಿಮೆಂಟ್ 25,021 ರೂ ಷೇರುಬೆಲೆ ಹೊಂದಿವೆ. ಟಾಪ್ 10ನಲ್ಲಿ ಪಿ ಅಂಡ್ ಜಿ, ಝಡ್ ಎಫ್ ಕಮರ್ಷಿಯಲ್ ಷೇರುಗಳೂ ಇವೆ.

ಇತರ ಟಾಪ್ ಷೇರು

Pic credit: Google