ಬಹಳ ದಿನಗಳಿಂದ ಹಿನ್ನಡೆಯಲ್ಲಿದ್ದ ಷೇರು ಮಾರುಕಟ್ಟೆ ನವೆಂಬರ್ 25ರಂದು ಫೀನಿಕ್ಸ್ನಂತೆ ಮೇಲೇರಿದೆ. ಸೋಮವಾರ ಹೂಡಿಕೆದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.
Pic: Getty images
ಇಂದು ಸೋಮವಾರ ಎನ್ಎಸ್ಇ, ಬಿಎಸ್ಇನ ಎಲ್ಲಾ ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕಗಳೂ ಹಸಿರು ಬಣ್ಣಕ್ಕೆ ತಿರುಗಿದ್ದು ಗಮನಾರ್ಹ ಸಂಗತಿ. ನಿಫ್ಟಿ50 ಶೇ. 1.32ರಷ್ಟು ಹೆಚ್ಚಿದೆ.
Pic: Getty images
ಷೇರು ಮಾರುಕಟ್ಟೆ ಇನ್ನಷ್ಟು ಕುಸಿದರೆ ಪೂರ್ಣವಾಗಿ ಕರಡಿ ಹಿಡಿತಕ್ಕೆ ಸಿಲುಕಿ ಇಳಿಕೆಯ ವೇಗ ಇನ್ನಷ್ಟು ಹೆಚ್ಚಬಹುದ ಎಂದು ಕೆಲ ತಜ್ಞರು ಅಂದಾಜಿಸಿದ್ದರು. ಸದ್ಯಕ್ಕೆ ಅದು ತಪ್ಪಿದೆ.
Pic: Getty images
ನಿಫ್ಟಿ, ಸೆನ್ಸೆಕ್ಸ್ ಗರಿಗೆದರಲು ಪ್ರಮುಖ ಕಾರಣಗಳಲ್ಲಿ ಚುನಾವಣಾ ಫಲಿತಾಂಶವೂ ಒಂದು ಕಾರಣ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭೆಯನ್ನು ಎನ್ಡಿಎ ಮೈತ್ರಿಕೂಟ ಮರಳಿಗೆದ್ದಿದೆ.
Pic: Getty images
ಮಹಾರಾಷ್ಟ್ರದಲ್ಲಿ ಮತ್ತೆ ಗೆದ್ದಿರುವುದು ಕೇಂದ್ರದ ಎನ್ಡಿಎ ಸರ್ಕಾರಕ್ಕೆ ಸಮಾಧಾನ ತಂದಿದೆ. ಹೂಡಿಕೆ ಹೆಚ್ಚಿಸುವ ತನ್ನ ನಿರ್ಧಾರದಲ್ಲಿ ಇನ್ನಷ್ಟು ಗಟ್ಟಿಯಾಗಿ ಹೆಜ್ಜೆ ಊರುವ ಆತ್ಮವಿಶ್ವಾಸ ಸಿಗಬಹುದು.
Pic: Getty images
ಈ ಕಾರಣಕ್ಕೆ ಮಾರುಕಟ್ಟೆಯು ಫಲಿತಾಂಶಕ್ಕೆ ಸಕಾರಾತ್ಮಕವಾಗಿ ವರ್ತಿಸುತ್ತಿರಬಹುದು. ಸರ್ಕಾರದ ನೀತಿಯಲ್ಲಿ ಸ್ಥಿರತೆ ಬರುವುದರಿಂದ ಬಂಡವಾಳ ವೆಚ್ಚವೂ ಸಮರ್ಪಕವಾಗಬಹುದು ಎನ್ನುವ ನಿರೀಕ್ಷೆ ಹೂಡಿಕೆದಾರರದ್ದು.
Pic: Getty images
ಮಾರ್ಕೆಟ್ ಕರೆಕ್ಷನ್ ಹಂತ ಪೂರ್ಣಗೊಂಡಿರುವ ಸಾಧ್ಯತೆ ಕಾಣುತ್ತಿದೆ. ಉತ್ತಮ ಷೇರುಗಳು ಉತ್ತಮ ಬೆಲೆಗೆ ಸಿಗುತ್ತಿವೆ. ಇವತ್ತು ಮಾರುಕಟ್ಟೆ ಉಬ್ಬಲು ಇದೂ ಒಂದು ಕಾರಣ ಇರಬಹುದು.