ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವುವು?

12 July 2024

Pic credit: Google

Vijayasarathy SN

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ವಿಶ್ವದ ಅತಿಶ್ರೀಮಂತ ಕ್ರಿಕೆಟ್ ಮಂಡಳಿ. ಇದರ ಮೌಲ್ಯ ಬರೋಬ್ಬರಿ 18,700 ಕೋಟಿ ರೂ ಇದೆ.

ಭಾರತೀಯ ಕ್ರಿಕೆಟ್

Pic credit: Google

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೆಸರು ಕ್ರಿಕೆಟ್ ಆಸ್ಟ್ರೇಲಿಯಾ ಎಂದಿದೆ. ಇದರ ನಿವ್ವಳ ಮೌಲ್ಯ 660 ಕೋಟಿ ರೂ ಇದೆ. ಬಿಸಿಸಿಐ ಬಿಟ್ಟರೆ ಇದೇ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿ.

ಆಸ್ಟ್ರೇಲಿಯಾ ಕ್ರಿಕೆಟ್

Pic credit: Google

ಕ್ರಿಕೆಟ್​ನ ಜನಕರೆಂದೇ ಹೆಸರಾಗಿರುವ ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಮಂಡಳಿಯಾಗಿ ಇಸಿಬಿ ಇದೆ. ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್​ನ ನಿವ್ವಳ ಮೌಲ್ಯ 492 ಕೋಟಿ ರೂ ಇದೆ.

ಇಂಗ್ಲೆಂಡ್ ಕ್ರಿಕೆಟ್

Pic credit: Google

ಭಾರತದಂತೆ ಕ್ರಿಕೆಟ್ ಕ್ರೇಜ್ ಹೆಚ್ಚಿರುವ ಪಾಕಿಸ್ತಾನದಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿವ್ವಳ ಮೌಲ್ಯ 459 ಕೋಟಿ ರೂ ಇದೆ. ವಿಶ್ವದ ನಾಲ್ಕನೇ ಶ್ರೀಮಂತ ಮಂಡಳಿ ಪಿಸಿಬಿ.

ಪಾಕಿಸ್ತಾನ್ ಕ್ರಿಕೆಟ್

Pic credit: Google

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿವ್ವಳ ಮೌಲ್ಯ 51 ಮಿಲಿಯನ್ ಡಾಲರ್, ಅಥವಾ 426 ಕೋಟಿ ರೂಪಾಯಿ ಇದೆ. ಶ್ರೀಮಂತ ಮಂಡಳಿಗಳಲ್ಲಿ 5ನೇ ಸ್ಥಾನದಲ್ಲಿದೆ.

ಬಾಂಗ್ಲಾ ಕ್ರಿಕೆಟ್

Pic credit: Google

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್​ಎ) ವಿಶ್ವದ ಆರನೇ ಅತಿಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಇದರ ಆಸ್ತಿಮೌಲ್ಯ 392 ಕೋಟಿ ರೂ ಇದೆ.

ದಕ್ಷಿಣ ಆಫ್ರಿಕಾ

Pic credit: Google

ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಆಸ್ತಿಮೌಲ್ಯ 317 ಕೋಟಿ ರೂ ಇದೆ. ಶ್ರೀಲಂಕಾ, ವಿಂಡೀಸ್, ನ್ಯೂಜಿಲೆಂಡ್ ಮಂಡಳಿಗಳಿಗಿಂತಲೂ ಇದು ಶ್ರೀಮಂತ ಎನಿಸಿದೆ.

ಜಿಂಬಾಬ್ವೆ ಕ್ರಿಕೆಟ್

Pic credit: Google