ಬ್ರಿಟನ್ ರಾಜನಿಗಿಂತಲೂ ಶ್ರೀಮಂತ ಈ ನಿರ್ಗಮಿತ ಪ್ರಧಾನಿ ರಿಷಿ ಸುನಕ್
05 July 2024
Vijayasarathy SN
ಬ್ರಿಟನ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ಪ್ರಧಾನಿಯಾಗಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ ರಿಷಿ ಸುನಕ್ ಈಗ ಅಧಿಕಾರ ಕಳೆದುಕೊಂಡಿದ್ದಾರೆ. ಕೇರ್ ಸ್ಟಾರ್ಮರ್ ಎಂಬುವವರು ನೂತನ ಪ್ರಧಾನಿ.
ರಿಷಿ ಸುನಕ್ ಔಟ್
Pic credit: Google
ಭಾರತ ಮೂಲದ ಕುಟುಂಬದ ರಿಷಿ ಸುನಕ್ ಅವರು ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ. ಅಕ್ಷತಾ ಮೂರ್ತಿಯನ್ನು ವರಿಸಿದ್ದಾರೆ. ಬ್ರಿಟನ್ನ ಅತ್ಯಂತ ಶ್ರೀಮಂತರಲ್ಲಿ ಈ ಕುಟುಂಬವೂ ಇದೆ.
ಶ್ರೀಮಂತ ರಿಷಿ ಕುಟುಂಬ
Pic credit: Google
ಬ್ರಿಟನ್ನಲ್ಲಿ ಈವರೆಗೆ ಪ್ರಧಾನಿಯಾದವರ ಪೈಕಿ ರಿಷಿ ಸುನಕ್ ಅತ್ಯಂತ ಶ್ರೀಮಂತ. ಯುಕೆ ಮಹಾರಾಜ ಕಿಂಗ್ ಚಾರ್ಲ್ಸ್-3 ಗಿಂತಲೂ ಹೆಚ್ಚು ಶ್ರೀಮಂತ ಈ ದಂಪತಿ.
ರಾಜನಿಗಿಂತಲೂ ಶ್ರೀಮಂತ
Pic credit: Google
ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಇಬ್ಬರದೂ ಸೇರಿ ಇರುವ ಒಟ್ಟು ಆಸ್ತಿ ಸುಮಾರು 7,000 ಓಟಿ ರೂ. ಇದರಲ್ಲಿ ಹೆಚ್ಚಿನ ಪಾಲು ಅಕ್ಷತಾ ಮೂರ್ತಿಯದ್ದಾಗಿದೆ.
ಪತ್ನಿ ಪಾಲು ಹೆಚ್ಚು
Pic credit: Google
ರಿಷಿ ಸುನಕ್ 2022-23ರ ತೆರಿಗೆ ವರ್ಷದಲ್ಲಿ ಸಲ್ಲಿಸಿದ ಮಾಹಿತಿ ಪ್ರಕಾರ 23.40 ಕೋಟಿ ರೂ ಮಾತ್ರವೇ ಆದಾಯ ಗಳಿಸಿದ್ದಾರೆ. ಇವರ ಕುಟುಂಬದ ಶ್ರೀಮಂತಿಕೆಗೆ ಕಾರಣ ಇನ್ಫೋಸಿಸ್ ಸಂಸ್ಥೆ.
ಇನ್ಫೋಸಿಸ್ ಕಾರಣ
Pic credit: Google
ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿ ಇನ್ಫೋಸಿಸ್ನಲ್ಲಿ ಅಧಿಕಾರ ಹೊಂದಿಲ್ಲವಾದರೂ ಶೇ. 0.93ರಷ್ಟು ಷೇರು ಪಾಲು ಹೊಂದಿದ್ದಾರೆ.
ಅಕ್ಷತಾ ಆಸ್ತಿ
Pic credit: Google
ಇನ್ಫೋಸಿಸ್ನಲ್ಲಿ ಅವರು 3,89,57,096 ಷೇರುಗಳನ್ನು ಹೊಂದಿದ್ದಾರೆ. ಇದರ ಈಗಿನ ಒಟ್ಟು ಮೌಲ್ಯ 6,467 ಕೋಟಿ ರೂ ಆಗುತ್ತದೆ. ಡಿವಿಡೆಂಡ್ಗಳಿಂದಲೇ ಅವರು ವರ್ಷಕ್ಕೆ 50-100 ಕೋಟಿ ರೂ ಲಾಭ ಗಳಿಸುತ್ತಾರೆ.