ಭಾರತದಲ್ಲಿ ‘ಮದುವೆ’ ಬಿಸಿನೆಸ್ ಎಷ್ಟು ದೊಡ್ಡದು ಗೊತ್ತಾ?

2 July 2024

Pic credit: Getty

BVijayasarathy SN

ಅಮೂಲ್ಯ ಕ್ಷಣಗಳು...

(Pic credit: Google)

ಭಾರತದಲ್ಲಿ ಮದುವೆ ಎಂದರೆ ಒಬ್ಬರ ಜೀವನದಲ್ಲಿ ಬರುವ ಅತ್ಯಮೂಲ್ಯ ಸಂದರ್ಭ. ಇದಕ್ಕೆ ಸಾಂಪ್ರದಾಯಿಕ ಸ್ಥಾನಮಾನವೂ ಇರುವುದರಿಂದ ಜನರು ಶಕ್ತಿಮೀರಿ ವೆಚ್ಚ ಮಾಡುತ್ತಾರೆ.

ಭಾರತದಲ್ಲಿ ಎಷ್ಟು ಮದುವೆ?

(Pic credit: Google)

ಭಾರತದಲ್ಲಿ ವರ್ಷಕ್ಕೆ 80 ಲಕ್ಷದಿಂದ 1 ಕೋಟಿ ಸಂಖ್ಯೆಯಷ್ಟು ಮದುವೆ ನಡೆಯುತ್ತವೆ ಎಂದು ಜೆಫರೀಸ್ ಸಂಸ್ಥೆ ಹೇಳುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮದುವೆ ಸಂಖ್ಯೆಯಲ್ಲಿ ಭಾರತವೇ ಮುಂದು.

ಚೀನಾದಲ್ಲಿ 80 ಲಕ್ಷ ಮದುವೆ

(Pic credit: Google)

ಜೆಫರೀಸ್ ಪ್ರಕಾರ ಚೀನಾ ದೇಶದಲ್ಲಿ ಒಂದು ವರ್ಷದಲ್ಲಿ 70 ಲಕ್ಷದಿಂದ 80 ಲಕ್ಷದಷ್ಟು ಮದುವೆಗಳು ನಡೆಯಬಹುದು. ಅಮೆರಿಕದಲ್ಲಿ 20ರಿಂದ 25 ಲಕ್ಷ ವಿವಾಹ ಜರುಗುತ್ತವೆ.

ದೊಡ್ಡ ಉದ್ಯಮ

(Pic credit: Google)

ಮದುವೆ ಸಮಾರಂಭ ನಡೆದರೆ ಬಟ್ಟೆಬರೆ, ಹೂವು, ಹಣ್ಣು, ಅಡುಗೆ, ಪೂಜಾ ಸಾಮಗ್ರಿ, ಫರ್ನಿಚರ್ ಇತ್ಯಾದಿ ನಾನಾ ಖರ್ಚುವೆಚ್ಚಗಳಿದ್ದು ದೊಡ್ಡ ಬಿಸಿನೆಸ್ ಸೃಷ್ಟಿಯಾಗುತ್ತದೆ. ಹಲವು ಸಣ್ಣ ಪುಟ್ಟ ಉದ್ದಿಮೆಗಳಿಗೆ ಪೋಷಣೆ ಸಿಗುತ್ತದೆ.

ಎಷ್ಟು ದೊಡ್ಡದು?

(Pic credit: Google)

ಭಾರತದಲ್ಲಿ ವಿವಾಹವನ್ನು ಒಂದು ಉದ್ಯಮವಾಗಿ ಪರಿಗಣಿಸಿ ನೋಡಿದಾಗ ಅದರ ಗಾತ್ರ 130 ಬಿಲಿಯನ್ ಡಾಲರ್ ಎನ್ನುತ್ತದೆ ಜೆಫರೀಸ್. ಅಂದರೆ ಬರೋಬ್ಬರಿ 10 ಲಕ್ಷ ಕೋಟಿ ರೂ ಮೊತ್ತದ ಉದ್ಯಮ ಇದು.

ಚೀನಾ ನಂತರ ಭಾರತ

(Pic credit: Google)

ವಿವಾಹ ಉದ್ಯಮ ಭಾರತದಲ್ಲಿ 130 ಬಿಲಿಯನ್ ಡಾಲರ್ ಇದ್ದರೆ, ಚೀನಾದಲ್ಲಿ 170 ಬಿಲಿಯನ್ ಡಾಲರ್, ಮತ್ತು ಅಮೆರಿಕದಲ್ಲಿ 70 ಬಿಲಿಯನ್ ಡಾಲರ್ ಗಾತ್ರದ ಉದ್ಯಮವಾಗಿದೆ ಮದುವೆ.

ರೀಟೇಲ್ ಕೆಟಗರಿಯಲ್ಲಿ...

(Pic credit: Google)

ಮದುವೆಯನ್ನು ದೊಡ್ಡ ಉದ್ಯಮವಾಗಿ ಪರಿಗಣಿಸಬಹುದು. ಇದನ್ನು ರೀಟೇಲ್ ಕೆಟಗರಿಯ ಗುಂಪಿಗೆ ಸೇರಿಸಿದರೆ ಅಲ್ಲಿ ಆಹಾರ ಮತ್ತು ದಿನಸಿ ಉದ್ಯಮದ ಬಳಿಕದ ಸ್ಥಾನ ವಿವಾಹ ಉದ್ಯಮಕ್ಕೆ ಸಿಗುತ್ತದೆ.