ಭಾರತದ ಅತಿದೊಡ್ಡ ಟಯರ್ ತಯಾರಕ ಕಂಪನಿಯಾದ ಎಂಆರ್ಎಫ್ನ ಒಂದು ಷೇರುಬೆಲೆ 1,29,742 ರೂ ಇದೆ. ಇಪ್ಪತ್ತು ವರ್ಷದ ಹಿಂದೆ 600 ರೂ ಒಳಗಿದ್ದ ಇದರ ಬೆಲೆ ಫೆಬ್ರುವರಿಯಲ್ಲಿ ಒಂದೂವರೆ ಲಕ್ಷ ರೂ ದಾಟಿತ್ತು.
2. ಹನಿವೆಲ್
Pic credit - Freepik
ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಹನಿವೆಲ್ ಆಟೊಮೇಶನ್ ಇಂಡಿಯಾ ಲಿ ಸಂಸ್ಥೆಯ ಷೇರು ಬೆಲೆ ಜುಲೈ 1ಕ್ಕೆ 57,000 ರೂನಲ್ಲಿ ಅಂತ್ಯವಾಗಿದೆ. ಇದು ಅದರ ಗರಿಷ್ಠ ಮಟ್ಟವಾಗಿದೆ.
3. ಪೇಜ್ ಇಂಡಸ್ಟ್ರೀಸ್
Pic credit - Freepik
ಜಾಕಿ ಅಂಡರ್ವೇರ್ ಸೇರಿದಂತೆ ಪ್ರಮುಖ ಬಟ್ಟೆ ಬ್ರ್ಯಾಂಡ್ಗಳನ್ನು ಹೊಂದಿರುವ ಪೇಜ್ ಇಂಡಸ್ಟ್ರೀಸ್ನ ಒಂದು ಷೇರು ಬೆಲೆ 39,150 ರೂ ಇದೆ. 2022ರ ಅಕ್ಟೋಬರ್ನಲ್ಲಿ ಷೇರುಬೆಲೆ 50,000 ರೂ ಗಡಿ ದಾಟಿತ್ತು.
4. 3ಎಂ ಇಂಡಿಯಾ
Pic credit - Freepik
ಬಿರ್ಲಾ ಗ್ರೂಪ್ ಮತ್ತು 3ಎಂ ಗ್ರೂಪ್ನಿಂದ ಜಂಟಿಯಾಗಿ ನಡೆಸಲಾಗುತ್ತಿರುವ 3ಎಂ ಇಂಡಿಯಾ ಷೇರುಬೆಲೆ ಸದ್ಯ 37,949 ರೂ ಇದೆ. 2001-02ರಲ್ಲಿ ಸುಮಾರು 250 ರೂ ಇದ್ದ ಇದರ ಬೆಲೆ ಅಗಾಧವಾಗಿ ಬೆಳೆದಿದೆ.
5. ಬೋಷ್ ಲಿ
Pic credit - Freepik
ಜರ್ಮನ್ ಮೂಲದ ಬೋಷ್ ಸಂಸ್ಥೆ ಆಟೊಮೊಬೈಲ್ ಬಿಡಿಭಾಗಗಳನ್ನು ತಯಾರಿಸುತ್ತದೆ. ಇದರ ಷೇರುಬೆಲೆ 33,955 ರೂ ಆಗಿದೆ. ಇದೂ ಕೂಡ 2002ರಲ್ಲಿ 250 ರೂ ಆಸುಪಾಸು ಬೆಲೆ ಹೊಂದಿತ್ತು. 20 ವರ್ಷದಲ್ಲಿ ಹಲವು ಪಟ್ಟು ಬೆಳೆದುಹೋಗಿದೆ.
6. ಶ್ರೀ ಸಿಮೆಂಟ್
Pic credit - Freepik
ಭಾರತದ ಮೂರನೇ ಅತಿದೊಡ್ಡ ಸಿಮೆಂಟ್ ತಯಾರಕರಾದ ಶ್ರೀ ಸಿಮೆಂಟ್ಸ್ನ ಷೇರುಬೆಲೆ ಇಂದು 28,250 ರೂನಲ್ಲಿದೆ. 2021ರ ಮಾರ್ಚ್ ಏಪ್ರಿಲ್ನಲ್ಲಿ 30,737 ರೂವರೆಗೂ ಇದರ ಬೆಲೆ ಏರಿತ್ತು.
7. ಅಬಾಟ್ ಇಂಡಿಯಾ
Pic credit - Freepik
ಪ್ರಮುಖ ಫಾರ್ಮಸಿ ಕಂಪನಿಯಾದ ಅಬಾಟ್ ಇಂಡಿಯಾದ ಷೇರುಬೆಲೆ ಬಹುತೇಕ ಸ್ಥಿರವಾಗಿ ಹೆಚ್ಚುತ್ತಿದೆ. ಸದ್ಯ ಇದು 27,619 ರೂ ಬೆಲೆ ಹೊಂದಿದೆ. ಫೆಬ್ರುವರಿಯಲ್ಲಿ 30,000 ರೂ ಗಡಿ ಸಮೀಪದವರೆಗೂ ಹೋಗಿತ್ತು.