20 ವರ್ಷ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್ ಹೇಗೆ ರಿಟರ್ನ್ ಕೊಡುತ್ತೆ ಎಂಬುದು ಅದರ ಸತ್ವವನ್ನು ತೋರಿಸುತ್ತದೆ. ದೀರ್ಘಾವಧಿಯಲ್ಲಿ ಯಶಸ್ವಿಯಾದ ಫಂಡ್ಗಳತ್ತ ಒಂದು ನೋಟ...
ದೀರ್ಘಾವಧಿ ಪರೀಕ್ಷೆ
(Pic credit: Google)
ಲಾರ್ಜ್ ಕ್ಯಾಪ್ ಕೆಟಗರಿಯಲ್ಲಿ ಫ್ರಾಂಕ್ಲಿನ್ ಇಂಡಿಯಾ ಬ್ಲೂಚಿಪ್ ಫಂಡ್ ಎದ್ದುಕಾಣುತ್ತದೆ. 20 ವರ್ಷದಲ್ಲಿ ಇದು ಸರಾಸರಿಯಾಗಿ ವಾರ್ಷಿಕವಾಗಿ ಶೇ 15ರಷ್ಟು ಲಾಭ ತಂದಿದೆ.
1. ಫ್ರಾಂಕ್ಲಿನ್ ಬ್ಲೂಚಿಪ್
(Pic credit: Google)
ಎಚ್ಡಿಎಫ್ಸಿ ಟಾಪ್ 100 ಫಂಡ್ ಕೂಡ ಲಾರ್ಜ್ ಕ್ಯಾಪ್ ಕೆಟಗರಿಯಲ್ಲಿದ್ದು, 20 ವರ್ಷದ ಅವಧಿಯಲ್ಲಿ ಸರಾಸರಿಯಾಗಿ ಶೇ. 17.4ರ ದರದಲ್ಲಿ ಬೆಳೆದಿದೆ.
2. ಎಚ್ಡಿಎಫ್ಸಿ ಟಾಪ್100
(Pic credit: Google)
ಮಿಡ್ ಕ್ಯಾಪ್ ಕೆಟಗರಿ: ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್ 20 ವರ್ಷದಲ್ಲಿ ಶೇ. 18.4ರ ಸಿಎಜಿಆರ್ ದರದಲ್ಲಿ ಲಾಭ ತಂದಿದೆ. ಇಪತ್ತು ವರ್ಷದಲ್ಲಿ 29 ಪಟ್ಟು ಹೆಚ್ಚು ಬೆಳೆದಿದೆ.
3. ಫ್ರಾಂಕ್ಲಿನ್ ಪ್ರೈಮಾ
(Pic credit: Google)
ನಿಪ್ಪೋನ್ ಇಂಡಿಯಾ ಗ್ರೋತ್ ಫಂಡ್ 20 ವರ್ಷದಲ್ಲಿ ಬರೋಬ್ಬರಿ ಶೇ. 20.7ರ ಸಿಎಜಿಆರ್ನಲ್ಲಿ ಲಾಭ ತಂದಿದೆ. ಇಪತ್ತು ವರ್ಷದ ಹಿಂದೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು 43 ಲಕ್ಷ ಆಗತ್ತಿತ್ತು.
4. ನಿಪ್ಪೋನ್ ಗ್ರೋತ್
(Pic credit: Google)
ಫ್ಲೆಕ್ಸಿ ಕ್ಯಾಪ್ ಕೆಟಗರಿಯಲ್ಲಿ ಆದಿತ್ಯ ಬಿರ್ಲಾ ಸನ್ ಲೈಫ್ ಫ್ಲೆಕ್ಸಿ ಕ್ಯಾಪ್ ಫಂಡ್ ಕಳೆದ 20 ವರ್ಷದಲ್ಲಿ ಸರಾಸರಿಯಾಗಿ ಶೇ 17.5ರ ವಾರ್ಷಿಕ ದರದಲ್ಲಿ ಬೆಳೆದಿದೆ. ಇಪತ್ತು ವರ್ಷದಲ್ಲಿ ಹೂಡಿಕೆ 25 ಪಟ್ಟು ಬೆಳೆದಿದೆ.
5. ಬಿರ್ಲಾ ಫ್ಲೆಕ್ಸಿ
(Pic credit: Google)
ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ ಶೇ. 18.1ರ ಸಿಎಜಿಅರ್ನಲ್ಲಿ ಲಾಭ ತಂದಿದೆ. 20 ವರ್ಷದಲ್ಲಿ ಹೂಡಿಕೆ 27.9ರಷ್ಟು ಹೆಚ್ಚಾಗಿದೆ.
6. ಫ್ರಾಂಕ್ಲಿನ್ ಫ್ಲೆಕ್ಸಿ
(Pic credit: Google)
ಫ್ಲೆಕ್ಸಿ ಕ್ಯಾಪ್ ವಿಭಾಗದಲ್ಲಿ ಎಚ್ಡಿಎಫ್ಸಿ ಫ್ಲೆಕ್ಸಿ ಕ್ಯಾಪ್ ಫಂಡ್ ಹೆಚ್ಚು ಯಶಸ್ಸು ಕಂಡಿದೆ. 20 ವರ್ಷದಲ್ಲಿ ಇದು ಶೇ. 18.6ರ ಸಿಎಜಿಆರ್ನಲ್ಲಿ ರಿಟರ್ನ್ಸ್ ಕೊಟ್ಟಿದೆ.
7. ಎಚ್ಡಿಎಫ್ಸಿ ಫ್ಲೆಕ್ಸಿ
(Pic credit: Google)
ಷೇರು ಸಂಪತ್ತಿಗೆ ಅನುಗುಣವಾಗಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಎಂದು ವರ್ಗೀಕರಿಸಲಾಗುತ್ತದೆ. ಈ ಮೂರೂ ರೀತಿಯ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ ಫ್ಲೆಕ್ಸಿ ಕ್ಯಾಪ್ ಫಂಡ್ಗಳು.