By: Vijayasarathy SN
13 June 2024
ಮುಂದಿನ ವರ್ಷ (2025) ಅಮೆರಿಕದ ಷೇರು ಮಾರುಕಟ್ಟೆಯ ಕುಸಿತ ಆರಂಭವಾಗಲಿದೆ ಎಂದು ಅಮೆರಿಕದ ಖ್ಯಾತ ಆರ್ಥಿಕ ತಜ್ಞ ಹ್ಯಾರಿ ಡೆಂಟ್ ಕರಾಳ ಭವಿಷ್ಯ ನುಡಿದಿದ್ದಾರೆ.
(Pic credit: Google)
2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಸಾಕಷ್ಟು ಆತಂಕ ಸೃಷ್ಟಿಸಿತ್ತು. ಈ ಬಾರಿ ಅದಕ್ಕಿಂತಲೂ ಬಹಳ ಹೆಚ್ಚು ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ ಹ್ಯಾರಿ ಡೆಂಟ್.
(Pic credit: Google)
ಅಮೆರಿಕದ ಆರ್ಥಿಕತೆಯೊಳಗೆ ವರ್ಷಗಳಿಂದಲೂ ಕೃತಕವಾಗಿ ಹಣ ತುಂಬಿಸಲಾಗುತ್ತಿದೆ. 14 ವರ್ಷಗಳಿಂದ ಉಬ್ಬರ ನಿರ್ಮಾಣವಾಗಿದೆ ಎನ್ನುತ್ತಾರೆ ಡೆಂಟ್.
(Pic credit: Google)
ಯಾವುದೇ ಉಬ್ಬರ ಅಥವಾ ಗುಳ್ಳೆಯಾದರೂ ಒಂದಲ್ಲ ಒಂದು ಹಂತದಲ್ಲಿ ಒಡೆಯಲೇ ಬೇಕು. ಅದು ಪ್ರಕೃತಿ ಸಹಜ ಕ್ರಮ. ಈಗ ಷೇರು ಮಾರುಕಟ್ಟೆ ಗುಳ್ಳೆಯೂ ಒಡೆಯಲಿದೆ.
(Pic credit: Google)
ಹಿಂದೆ ಹಲವು ಬಾರಿ ಷೇರು ಮಾರುಕಟ್ಟೆ ಕೃತಕವಾಗಿ ಉಬ್ಬಿದ್ದಿದೆ. ಆದರೆ, ಈಗ ನಿರ್ಮಾಣ ಆಗಿರುವ ಬಬಲ್ ಹಿಂದೆಂದಿಗಿಂತಲೂ ಬಹಳ ದೊಡ್ಡದು ಎಂದು ಹ್ಯಾರಿ ಡೆಂಟ್ ಹೇಳುತ್ತಾರೆ.
(Pic credit: Google)
ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಉಬ್ಬರ ಸೃಷ್ಟಿಯಾಗಿರುವುದು ಐದಾರು ವರ್ಷದವರೆಗೆ ಗೊತ್ತಾಗುವುದಿಲ್ಲ. ಈ ಬಾರಿ 14 ವರ್ಷಗಳಿಂದ ಕೃತಕವಾಗಿ ಉಬ್ಬರ ಹಿಗ್ಗುತ್ತಿದೆಯಂತೆ.
(Pic credit: Google)
ಅಮೆರಿಕದ ಷೇರು ಮಾರುಕಟ್ಟೆಯ ಎಸ್ ಅಂಡ್ ಪಿ ಶೇ. 80ರಷ್ಟು, ನಾಸ್ಡಾಕ್ ಶೇ. 90ರಷ್ಟು ಕುಸಿಯಬಹುದು. 2025ರಲ್ಲಿ ಪತನ ಆರಂಭವಾಗಬಹುದು ಎಂದು ಹ್ಯಾರಿ ಡೆಂಟ್ ತಿಳಿಸಿದ್ದಾರೆ.
(Pic credit: Google)
ಅಮೆರಿಕದಲ್ಲಿ ಷೇರು ಮಾರುಕಟ್ಟೆ ಅಥವಾ ಹಣಕಾಸು ಮಾರುಕಟ್ಟೆ ಅಲುಗಾಡಿದರೆ ಅದರ ಪರಿಣಾಮ ಏಷ್ಯನ್ ಮಾರುಕಟ್ಟೆಯ ಮೇಲೂ ಆಗುತ್ತದೆ. ಭಾರತಕ್ಕೂ ಕಂಟಕ ತಪ್ಪಿದ್ದಲ್ಲ.
(Pic credit: Google)
ಭಾರತದ ಷೇರು ಮಾರುಕಟ್ಟೆ ಕಳೆದ ಕೆಲ ವರ್ಷಗಳಿಂದ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಹೂಡಿಕೆದಾರರ ಹಲವು ಲಕ್ಷ ಕೋಟಿ ರೂ ಹಣವನ್ನು ಹೊತ್ತು ಸಾಗುತ್ತಿದೆ. ಇದು ಕುಸಿದರೆ ಕಷ್ಟ..!
(Pic credit: Google)