ಖ್ಯಾತ ಉದ್ಯಮಿಗಳು ಪುರುಸೊತ್ತಿನಲ್ಲಿ ಏನ್ಮಾಡ್ತಾರೆ?

By: Vijayasarathy SN

03 June 2024

ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ ಪುಸ್ತಕ, ಪ್ರವಾಸ, ಲಕ್ಷುರಿ ಕಾರುಗಳ ಪ್ರೇಮಿ. ಬ್ರಿಡ್ಜ್, ಟೆನಿಸ್ ಆಡುತ್ತಾರೆ. ಕುಟುಂಬ ಸದಸ್ಯರ ಜೊತೆ ಕಾಲಕ್ಷೇಪ ಮಾಡ ಬಯಸುತ್ತಾರೆ.

(Pic credit: Google)

ಇಲಾನ್ ಮಸ್ಕ್

ವಿಶ್ವ ಶ್ರೀಮಂತ ಇಲಾನ್ ಮಸ್ಕ್ ಅವರು ವಿಡಿಯೋ ಗೇಮ್ಸ್ ಪ್ರಿಯರು. ಎಲ್ಡನ್ ರಿಂಗ್, ಡಿಯಾಬ್ಲೋ 6 ಗೇಮ್ಸ್ ಇಷ್ಟ. ಗೇಮ್​ನಲ್ಲಿ ರಾಕ್ಷಸರನ್ನು ಕೊಲ್ಲುವುದೆಂದರೆ ಅವರಿಗೆ ಇಷ್ಟ.

(Pic credit: Google)

ಸುಂದರ್ ಪಿಚೈ

ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಫುಟ್ಬಾಲ್ ಮತ್ತು ಕ್ರಿಕೆಟ್ ಆಟ ಇಷ್ಟ. ಸ್ಕೂಲ್ ಕ್ರಿಕೆಟ್ ಟೀಮ್​ಗೆ ಕ್ಯಾಪ್ಟನ್ ಆಗಿದ್ರು. 2017ರಲ್ಲಿ ಬಾರ್ಸಿಲೋನ ಫುಟ್ಬಾಲ್ ಕ್ಲಬ್​ಗೆ ಹೋಗಿ ಮೆಸ್ಸಿ ಮಾತಾಡಿಸಿದ್ದರು.

(Pic credit: Google)

ಜೆಫ್ ಬೇಜೋಸ್

ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರಿಗೆ ಸಾಕಷ್ಟು ಹವ್ಯಾಸಗಳಿವೆ. ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಹೊಂದಿದ್ದಾರೆ. ಕುದುರೆ ಸವಾರಿ, ಗಗನಯಾನ, ಗುಹೆ ಅನ್ವೇಷಣೆ ಇತ್ಯಾದಿ ಸಾಹಸಗಳಲ್ಲಿ ತೊಡಗುತ್ತಾರೆ.

(Pic credit: Google)

ಮಾರ್ಕ್ ಜುಕರ್ಬರ್ಗ್

ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರಿಗೆ ಮಾರ್ಷಲ್ ಆರ್ಟ್ಸ್, ಎಕ್ಸ್​ಟ್ರೀಮ್ ಸ್ಪೋರ್ಟ್ಸ್ ಎಂದರೆ ಇಷ್ಟ. ಏವಿಯೇಶನ್ ಸ್ಪೋರ್ಟ್ಸ್ ಕೂಡ ಇಷ್ಟ. ಹಾಗೆಯೇ, ಗಿಟಾರ್ ನುಡಿಸುವ ಅಭ್ಯಾಸ ಇದೆ.

(Pic credit: Google)

ಟಿಮ್ ಕುಕ್

ಆ್ಯಪಲ್ ಕಂಪನಿ ಮುಖ್ಯಸ್ಥ ಟಿಮ್ ಕುಕ್ ಸಾಹಸ ಪ್ರಿಯರು. ಈಗಲೂ ಫಿಟ್ ಅಂಡ್ ಫೈನ್ ಇದ್ದಾರೆ. ರಾಕ್ ಕ್ಲೈಂಬಿಂಗ್, ಸೈಕ್ಲಿಂಗ್, ಹೈಕಿಂಗ್ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

(Pic credit: Google)

ಸ್ಯಾಮ್ ಆಲ್ಟ್​ಮನ್

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮನ್ ಅವರಿಗೆ ರೇಸಿಂಗ್ ಕಾರ್ ಓಡಿಸುವುದು, ವಿಮಾನ ಹಾರಾಡಿಸುವುದು ಇಷ್ಟ. ಎರಡು ಮೆಕ್ಲೇರನ್ಸ್ ಸೇರಿ ಐದಾರು ರೇಸಿಂಗ್ ಕಾರ್ ಹೊಂದಿದ್ದಾರೆ.

(Pic credit: Google)

ಲ್ಯಾರಿ ಎಲಿಸನ್

ಒರೇಕಲ್ ಕಂಪನಿಯ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಅವರಿಗೆ ಸೇಲಿಂಗ್ ಕ್ರೀಡೆಯಲ್ಲಿ ವೃತ್ತಿಪರನಾಗುವಷ್ಟು ಪರಿಣಿತಿ ಹೊಂದಿದ್ದಾರೆ. ಐದು ಮ್ಯಾಕ್ಸಿ ವರ್ಲ್ಡ್ ಚಾಂಪಿಯನ್​ಶಿಪ್ ಗೆದ್ದಿದ್ದಾರೆ.

(Pic credit: Google)

ವಾರನ್ ಬಫೆಟ್

ವಿಶ್ವ ಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರಿಗೆ ಎರಡು ಪ್ರಮುಖ ಹವ್ಯಾಸಗಳಿವೆ. ಒಂದು ಉಕುಲೆಲೆ, ಮತ್ತೊಂದು ಬ್ರಿಡ್ಜ್. ಉಕುಲೆಲೆ ಎಂಬುದು ಗಿಟಾರ್ ರೀತಿಯ ಒಂದು ವಾದನ.

(Pic credit: Google)