By: Vijayasarathy SN

10 ಅತಿ ಶ್ರೀಮಂತ ಭಾರತೀಯರು

02 June 2024

ಬ್ಲೂಮ್​ಬರ್ಗ್ ಪಟ್ಟಿ ಪ್ರಕಾರ ಗೌತಮ್ ಅದಾನಿ ಆಸ್ತಿಮೌಲ್ಯ ಈಗ 111 ಬಿಲಿಯನ್ ಡಾಲರ್ ಇದೆ. ಏಷ್ಯಾದ ನಂಬರ್ ಒನ್, ಮತ್ತು ವಿಶ್ವದಲ್ಲಿ 11ನೇ ಶ್ರೀಮಂತ ಎನಿಸಿದ್ದಾರೆ.

1. ಗೌತಮ್ ಅದಾನಿ

(Pic credit: Google)

ಹಲವು ವರ್ಷಗಳಿಂದಲೂ ಭಾರತದ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಆಸ್ತಿಮೌಲ್ಯ 109 ಬಿಲಿಯನ್ ಡಾಲರ್. ಜಾಗತಿಕವಾಗಿ 12ನೆ ಸ್ಥಾನದಲ್ಲಿದ್ದಾರೆ.

2. ಮುಕೇಶ್ ಅಂಬಾನಿ

(Pic credit: Google)

ಒಂದೂವರೆ ಶತಮಾನ ಹಿಂದಿನ ಬಿಲ್ಡರ್ ಸಂಸ್ಥೆ ಶಾಪೂರ್​ಜಿ ಪಲ್ಲೋನ್​ಜಿಯ ಮುಖ್ಯಸ್ಥರಾದ ಶಾಪೂರ್ ಮಿಸ್ತ್ರಿ ಬಳಿ 36 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ.

3. ಶಾಪೂರ್ ಮಿಸ್ಟ್ರಿ

(Pic credit: Google)

ಜಿಂದಾಲ್ ಕುಟುಂಬದ ಸದಸ್ಯರಾದ ಸಾವಿತ್ರಿ ಜಿಂದಾಲ್ ಬಳಿ 32 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ. ಜಾಗತಿಕವಾಗಿ ಇವರು 49ನೇ ಸ್ಥಾನದಲ್ಲಿದ್ದಾರೆ. ಭಾರತದ ಅತೀ ಶ್ರೀಮಂತ ಮಹಿಳೆಯೂ ಹೌದು.

4. ಸಾವಿತ್ರಿ ಜಿಂದಾಲ್

(Pic credit: Google)

ಎಚ್​ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕರಾದ ಶಿವ್ ನಾದರ್ ಆಸ್ತಿಮೌಲ್ಯ 31 ಬಿಲಿಯನ್ ಡಾಲರ್. ಜಾಗತಿಕವಾಗಿ ಇವರ ಸ್ಥಾನ 51ನೆಯದು.

5. ಶಿವ್ ನಾದರ್

(Pic credit: Google)

ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್​ಜಿ ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ 68ನೇ ಸ್ಥಾನ ಪಡೆದಿದ್ದಾರೆ. ಇವರ ಬಳಿ 25 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ.

6. ಅಜೀಮ್ ಪ್ರೇಮ್​ಜಿ

(Pic credit: Google)

ಸನ್ ಫಾರ್ಮಸ್ಯೂಟಿಕಲ್ಸ್​ನ ಸಂಸ್ಥಾಪಕ ದಿಲೀಪ್ ಶಾಂಘವಿ ಬಳಿ 23.8 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ. ಬ್ಲೂಮ್​ಬರ್ಗ್ ಪಟ್ಟಿಯಲ್ಲಿ 72ನೇ ಸ್ಥಾನ ಪಡೆದಿದ್ದಾರೆ.

7. ದಿಲೀಪ್ ಶಾಂಘವಿ

(Pic credit: Google)

ಭಾರ್ತಿ ಏರ್ಟೆಲ್ ಸಂಸ್ಥೆಯ ಮುಖ್ಯಸ್ಥ ಸುನೀಲ್ ಮಿಟ್ಟಲ್ ಹೊಂದಿರುವ ಆಸ್ತಿಮೌಲ್ಯ 21.7 ಬಿಲಿಯನ್ ಡಾಲರ್. ಜಾಗತಿಕವಾಗಿ ಇವರು 85ನೇ ಅತಿ ಶ್ರೀಮಂತರು.

8. ಸುನೀಲ್ ಮಿಟ್ಟಲ್

(Pic credit: Google)

ಬಿರ್ಲಾ ಮನೆತನಕ್ಕೆ ಸೇರಿದ ಕುಮಾರಮಂಗಲಂ ಬಿರ್ಲಾ ಜಾಗತಿಕವಾಗಿ 89ನೇ ಅತಿದೊಡ್ಡ ಶ್ರೀಮಂತರು. ಇವರ ಆಸ್ತಿಮೌಲ್ಯ 21 ಬಿಲಿಯನ್ ಡಾಲರ್.

9. ಕುಮಾರ್ ಬಿರ್ಲಾ

(Pic credit: Google)

ವಿಶ್ವದ ಪ್ರಮುಖ ಉಕ್ಕು ಉದ್ಯಮಿಗಳಲ್ಲಿ ಒಬ್ಬರೆನಿಸಿರುವ ಲಕ್ಷ್ಮೀ ಮಿಟ್ಟಲ್ ಆಸ್ತಿ ಮೌಲ್ಯ 20 ಬಿಲಿಯನ್ ಡಾಲರ್. ಇವರು 95ನೇ ಅತಿ ಶ್ರೀಮಂತರು.

10. ಲಕ್ಷ್ಮೀ ಮಿಟ್ಟಲ್

(Pic credit: Google)