By: Vijayasarathy SN

ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್ಸ್

30 April 2024

2024ರ ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಕಿರಿಯ ವಯಸ್ಸಿನ ಕುಬೇರರು ಹಲವರಿದ್ದಾರೆ. ಪಿತ್ರಾರ್ಜಿತವಾಗಿ ಬಂದ ಷೇರು ಆಸ್ತಿಗಳು ಇವರನ್ನು ಬಿಲಿಯನೇರ್ ಆಗಿಸಿವೆ.

ಪಿತ್ರಾರ್ಜಿತ ಆಸ್ತಿ

(pic credit: Google)

Livia Voigt, ಈಕೆಯ ವಯಸ್ಸು 19 ವರ್ಷ. ಆಸ್ತಿ ಇರುವುದು 1.1 ಬಿಲಿಯನ್ ಡಾಲರ್. ಬ್ರೆಜಿಲ್​ನ ಡಬ್ಲ್ಯುಇಜಿ ಎಂಬ ಸಂಸ್ಥೆಯ ಷೇರುಪಾಲು ಈಕೆಗಿದೆ.

ಲಿವಿಯಾ ವೋಯ್ಟ್

(pic credit: Google)

Clemente Del Vecchio, ಈ ಹುಡುಗನ ವಯಸ್ಸು 19 ವರ್ಷ. ಇಟಲಿಯ ಉದ್ಯಮಿ ಲಿಯಾನಾರ್ಡೋ ಡೆಲ್ ವೆಶಿಯೋ ಈತನ ತಂದೆ. ಅಪ್ಪನ ಸಾವಿನ ಬಳಿಕ ಷೇರುಪಾಲು ಸಿಕ್ಕಿದೆ.

ಕ್ಲೆಮೆಂಟೆ ಡೆಲ್ ವೆಶಿಯೋ

(pic credit: Google)

Kim Jung-Youn, 2 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾಳೆ. ಸೌತ್ ಕೊರಿಯಾದ ಈಕೆಗೂ ಕೂಡ ಅಪ್ಪನ ಕಡೆಯಿಂದ ಸಿಕ್ಕ ಷೇರುಪಾಲು ಇವಳನ್ನು ಶ್ರೀಮಂತೆಯಾಗಿಸಿದೆ.

ಕಿಮ್ ಜುಂಗ್ ಯೂನ್

(pic credit: Google)

Kevin David Lehmann, ಜರ್ಮನಿಯ 21 ವರ್ಷದ ಈ ಯುವಕ ಡಿಎಂ ಎಂಬ ಔಷಧ ಮಳಿಗೆ ಕಂಪನಿಯಲ್ಲಿ ಶೇ. 50ರಷ್ಟು ಮಾಲಕತ್ವ ಹೊಂದಿದ್ದಾರೆ. ಇವರ ಆಸ್ತಿ ಮೌಲ್ಯ 3.3 ಬಿಲಿಯನ್ ಡಾಲರ್.

ಕೆವಿನ್ ಡೇವಿಡ್

(pic credit: Google)

Kim Jung-Min, ದಕ್ಷಿಣ ಕೊರಿಯಾದ ಯೂನ್ ಮತ್ತು ಮಿನ್ ಇಬ್ಬರೂ ಸಹೋದರಿಯರು. ಅಪ್ಪನ ಸಾವಿನ ಬಳಿಕ ಸಿಕ್ಕ ಷೇರು ಆಸ್ತಿ ಇವರ ಬಳಿ ಇದೆ.

ಕಿಮ್ ಜುಂಗ್ ಮಿನ್

(pic credit: Google)

Luca Del Vecchio, ಇಟಲಿಯ ಈ ಯುವಕ ಬಳಿ ಇರುವ ಆಸ್ತಿ ಮೌಲ್ಯ 4.6 ಬಿಲಿಯನ್ ಡಾಲರ್. ಅಪ್ಪನ ಸಾವಿನ ಬಳಿಕ ಕುಟುಂಬಕ್ಕೆ ಷೇರುಪಾಲು ಹಂಚಿಕೆ ಆಗಿದೆ.

ಲೂಕಾ ಡೆಲ್ ವೆಶಿಯೋ

(pic credit: Google)

Alexandra Andresen ನಾರ್ವೆ ದೇಶದವಳು. ಈತನ ತಂದೆ ಜೋಹಾನ್ ಆಂಡರ್ಸನ್ ಜೂನಿಯರ್ ಅವರು ಫರ್ಡ್ ಎಎಸ್ ಕಂಪನಿಯ ಮಾಲಕ. ಇವರ ಷೇರುಪಾಲು ಅಲೆಕ್ಸಾಂಡ್ರಾಗೆ ಸಿಕ್ಕಿದೆ.

ಅಲೆಕ್ಸಾಂಡ್ರಾ ಆಂಡರ್ಸನ್

(pic credit: Google)

Katharina Andresen, ಈಕೆ ಮತ್ತು ಅಲೆಕ್ಸಾಂಡ್ರಾ ಇಬ್ಬರೂ ಸಹೋದರಿಯರು. ಅಪ್ಪನ ಷೇರು ಆಸ್ತಿಯಲ್ಲಿ ಇಬ್ಬರೂ ತಲಾ ಶೇ. 42.5ರಷ್ಟು ಪಾಲು ಪಡೆದು ಬಿಲಿಯನೇರ್ ಆಗಿದ್ದಾರೆ.

ಕ್ಯಾತರಿನಾ ಆಂಡರ್ಸನ್

(pic credit: Google)