ಬೆಂಗಳೂರಿನ ಗೂಗಲ್​ನಲ್ಲಿ ಉದ್ಯೋಗಿಯ ದಿನಚರಿ

28 Nov 2024

Pic: youtube sg

Vijayasarathy SN

ಇದು ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ದಿವ್ಯಾಂಶಿ ಶ್ರೀವಾಸ್ತವ ಎನ್ನುವ 21 ವರ್ಷದ ಯುವತಿಯ ದಿನಚರಿಯ ಕಥೆ...

ದಿವ್ಯಾಂಶಿ ದಿನಚರಿ

Pic: youtube sg

ಬಾಗಮನೆ ಟೆಕ್ ಪಾರ್ಕ್​ನಲ್ಲಿ ಗೂಗಲ್ ಆಫೀಸ್ ಇದೆ. ದಿವ್ಯಾಂಶಿ ಈ ಕಚೇರಿಯಲ್ಲಿ ತನ್ನ ದಿನಚರಿ ಹೇಗಿರುತ್ತದೆ ಎಂದು ಪೂರ್ಣವಾಗಿ ವಿಡಿಯೋ ಮಾಡಿ ಯೂಟ್ಯೂಬ್​ಗೆ ಹಾಕಿದ್ದಾರೆ.

ಯೂಟ್ಯೂಬ್ ವಿಡಿಯೋ

Pic: youtube sg

ಗೂಗಲ್​ನಲ್ಲಿ ಜಿ-ಕ್ಯಾಬ್ ಎನ್ನುವ ಸ್ವಂತ ಕ್ಯಾಬ್ ಸರ್ವಿಸ್ ಇರುತ್ತದೆ. ಉದ್ಯೋಗಿ ಬುಕ್ ಮಾಡಿದ ಗಳಿಗೆಗೆ ಮನೆ ಬಾಗಿಲಿಗೆ ಬಂದು ಅವರನ್ನು ಪಿಕ್ ಮಾಡಿ ಆಫೀಸ್​ಗೆ ಡ್ರಾಪ್ ಮಾಡುತ್ತದೆ.

ಜಿ ಕ್ಯಾಬ್

Pic: youtube sg

ಗೂಗಲ್ ಕಚೇರಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಕಿಚನ್ ಇದೆ. ನಾನಾ ತರಹದ ತಿಂಡಿ, ಊಟ, ಸ್ನ್ಯಾಕ್ಸ್, ಡ್ರಿಂಕ್ಸ್ ಎಲ್ಲವೂ ಸಿಗುತ್ತದೆ. ಇದರ ಜೊತೆಗೆ ವಿವಿಧ ತಿಂಡಿ, ಡ್ರಿಂಕ್ಸ್ ಇರುವ ಹಲವು ಮೈಕ್ರೋ ಕಿಚನ್​ಗಳೂ ಇರುತ್ತವೆ.

ಸ್ವಾದಿಷ್ಟ ಆಹಾರ

Pic: youtube sg

ಹತ್ತಿಪ್ಪತ್ತು ಹೆಜ್ಜೆ ಹಾಕಿದಂತೆಲ್ಲಾ ಒಂದೊಂದು ಮೈಕ್ರೋಕಿಚನ್ ಸಿಗುತ್ತದೆ. ದಿನವೆಲ್ಲಾ ನಿಮಗೆ ಬೇಕೆಂದಾಗೆಲ್ಲಾ ತಿಂಡಿ, ಡ್ರಿಂಕ್ಸ್ ಸವಿಯಬಹುದು. ರಿಲ್ಯಾಕ್ಸ್ ಆಗಿರಬಹುದು.

ಮೈಕ್ರೋಕಿಚನ್ಸ್

Pic: youtube sg

ಪ್ರತೀ ಬುಧವಾರ ಉದ್ಯೋಗಿಗಳಿಗೆ ಸ್ಪೆಷಲ್ ಟ್ರೀಟ್ ಇರುತ್ತಂತೆ. ಈ ವಾರ ತಾನು ಬ್ಯಾಸ್ಕಿನ್ ರಾಬಿನ್ಸ್​ನ ಐಸ್ ಕ್ರೀಮ್, ಕುಕೀಸ್ ಸವಿದೆ ಎಂದು ಹೇಳುತ್ತಾರೆ ದಿವ್ಯಾಂಶಿ.

ಬುಧವಾರದ ಟ್ರೀಟ್

Pic: youtube sg

ಗೂಗಲ್ ತಂತ್ರಜ್ಞಾನ ಆವಿಷ್ಕಾರಕ್ಕೆ ಒತ್ತುಕೊಡುತ್ತದೆ. ಅಂತೆಯೇ ಉದ್ಯೋಗಿಗಳಿಗೆ ಡೆಡ್​​ಲೈನ್ ಒತ್ತಡ ಇದ್ದೇ ಇರುತ್ತದೆ. ಆ ನಡುವೆಯೂ ಕೆಲಸದ ವಾತಾವರಣ ಫ್ಲೆಕ್ಸಿಬಲ್ ಆಗಿರುವುದೂ ಹೌದು.

ಫ್ಲೆಕ್ಸಿಬಲ್ ಕೆಲಸ

Pic: youtube sg