30 July 2024
Pic credit: Google
Vijayasarathy SN
ಜಿಯೋ, ಏರ್ಟೆಲ್, ವೊಡಾಫೋನ್ನಿಂದ ದರ ಏರಿಕೆಯ ಬಿಸಿ ನಡುವೆ ಗ್ರಾಹಕರಿಗೆ ಬಿಎಸ್ಎನ್ಎಲ್ ಪರ್ಯಾಯ ಕಲ್ಪಿಸಿದೆ. ಈ ನಾಲ್ಕು ಕಂಪನಿಗಳಲ್ಲಿನ ಪೋಸ್ಟ್ ಪೇಯ್ಡ್ ಪ್ಲಾನ್ಗಳತ್ತ ಒಂದು ನೋಟ...
Pic credit - Freepik
ರಿಲಾಯನ್ಸ್ ಜಿಯೋದ ಪೋಸ್ಟ್ ಪೇಯ್ಡ್ ಪ್ಲಾನ್ಗಳು 349 ರೂನಿಂದ ಆರಂಭವಾಗುತ್ತದೆ. ಈ 349 ರೂ ಪ್ಲಾನ್ನಲ್ಲಿ ಒಂದು ತಿಂಗಳಲ್ಲಿ 30ಜಿಬಿ ಡಾಟಾ ಬಳಸಬಹುದು. ಅದು ಮೀರಿದರೆ ಪ್ರತೀ ಹೆಚ್ಚುವರಿ ಜಿಬಿ ಡಾಟಾಗೆ 10 ರೂ ದರ ವಿಧಿಸಲಾಗುತ್ತದೆ.
Pic credit - Freepik
ಜಿಯೋ 449 ರೂ, 649 ರೂ, 749 ರೂ ಮತ್ತು 1,549 ರೂ ಪೋಸ್ಟ್ ಪೇಯ್ಡ್ ಪ್ಲಾನ್ಸ್ ಹೊಂದಿದೆ. ಈ ಗರಿಷ್ಠ ಪ್ಲಾನ್ನಲ್ಲಿ 300 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ ಡಾಟಾ ರೋಲೋವರ್ ಅವಕಾಶವೂ ಇರುತ್ತದೆ.
Pic credit - Freepik
ಏರ್ಟೆಲ್ನ ಪೋಸ್ಟ್ ಪೇಯ್ಡ್ ಪ್ಲಾನ್ಗಳು 449 ರೂನಿಂದ 1,749 ರೂವರೆಗೂ ಇವೆ. 50ಜಿಬಿ ಹಿಡಿದು 200 ಜಿಬಿವರೆಗೆ ಡಾಟಾ ಬಳಕೆಗೆ ಅವಕಾಶ ಇದೆ. ಈ ಎಲ್ಲಾ ಪ್ಲಾನ್ಗಳಲ್ಲೂ ಡಾಟಾ ರೋಲೋವರ್ ಅವಕಾಶ ಇದೆ.
Pic credit - Freepik
ವೊಡಾಫೋನ್ ಐಡಿಯಾದಲ್ಲಿ ಪೋಸ್ಟ್ ಪೇಯ್ಡ್ ಪ್ಲಾನ್ಸ್ 451 ರೂನಿಂದ ಆರಂಭವಾಗಿ 1,201 ರೂವರೆಗೆ ಇವೆ. 451 ರೂಗೆ 50 ಜಿಬಿ ಡಾಟಾ ಸಿಗುತ್ತದೆ. 200 ಜಿಬಿವರೆಗೆ ರೋಲೋವರ್ ಇರುತ್ತದೆ. 1,201 ರೂ ಪ್ಲಾನ್ನಲ್ಲಿ ಅನ್ಲಿಮಿಟೆಡ್ ಡಾಟಾ ಸಿಗುತ್ತದೆ.
Pic credit - Freepik
ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಪ್ಲಾನ್ಸ್ 199 ರೂನಿಂದ ಶುರುವಾಗುತ್ತದೆ. 999 ರೂವರೆಗೆ ಐದು ಪ್ಲಾನ್ಗಳಿವೆ. 199 ರೂ ಪ್ಲಾನ್ನಲ್ಲಿ 25ಜಿಬಿ ಡಾಟಾ, 75ಜಿಬಿವರೆಗೂ ಡಾಟಾ ರೋಲೋವರ್ ಸಿಗುತ್ತದೆ.
Pic credit - Freepik
ಬಿಎಸ್ಎನ್ಎಲ್ನಲ್ಲಿ 199 ರೂ ಜೊತೆಗೆ 399 ರೂ, 525 ರೂ, 798 ರೂ ಮತ್ತು 999 ರೂ ಪೋಸ್ಟ್ ಪೇಯ್ಡ್ ಪ್ಲಾನ್ಗಳಿವೆ. 999 ರೂ ಪ್ಲಾನ್ನಲ್ಲಿ 75 ಜಿಬಿವರೆಗೆ ಡಾಟಾ ಸಿಗುತ್ತದೆ. ಗರಿಷ್ಠ 225 ಜಿಬಿ ಡಾಟಾ ರೋಲೋವರ್ ಅವಕಾಶ ಇರುತ್ತದೆ.
Pic credit - Freepik