2025ರ ಫೆಬ್ರುವರಿ 1ರಂದು 2025-26ರ ಸಾಲಿನ ಬಜೆಟ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿದ್ದಾರೆ. ಮಹಿಳೆಯರಿಗೆ ಈ ಬಜೆಟ್ನಿಂದ ಬಹಳಷ್ಟು ನಿರೀಕ್ಷೆಗಳಿವೆ.
Pic credit: Google
ದೇಶದಲ್ಲಿ ಕೆಲಸಗಾರರ ಬಳಗಕ್ಕೆ ಸೇರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರು ಸ್ವತಂತ್ರವಾಗಿ ಹಣಕಾಸು ನಿರ್ವಹಣೆ ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸಲು ಸರ್ಕಾರ ಗಮನ ಹರಿಸುತ್ತಿದೆ.
Pic credit: Google
2024ರ ಬಜೆಟ್ನಲ್ಲಿ ಮಹಿಳೆಯರಿಗೆ ಪೂರಕವಾದ ವಿವಿಧ ಯೋಜನೆಗಳಿಗೆ 3 ಲಕ್ಷ ಕೋಟಿ ರೂ ಹಣವನ್ನು ನೀಡಲಾಗಿತ್ತು. 2025ರ ಬಜೆಟ್ನಲ್ಲೂ ಅದು ಇನ್ನಷ್ಟು ಹೆಚ್ಚಾಗಬಹುದು.
Pic credit: Google
ಮಹಿಳೆಯರು ನಿರ್ವಹಿಸುವ ಬಿಸಿನೆಸ್ಗಳಿಗೆ ಉತ್ತೇಜನ ನೀಡಲು ಬಜೆಟ್ನಲ್ಲಿ ತೆರಿಗೆ ಹೊರೆ ಇಳಿಸುವುದು ಇತ್ಯಾದಿ ಕ್ರಮಗಳನ್ನು ಘೋಷಿಸಹುದು. ಸ್ಟಾರ್ಟಪ್ಗಳನ್ನು ಆರಂಭಿಸಲು ಮಹಿಳೆಯರಿಗೆ ಉತ್ತೇಜನ ನೀಡುವಂತಹ ಯೋಜನೆಗಳನ್ನು ಘೋಷಿಸಬಹುದು.
Pic credit: Google
ಮಹಿಳೆಯರ ಶಿಕ್ಷಣ ಸಾಲ, ರಿಟೈರ್ಮೆಂಟ್ ಪ್ಲಾನ್, ಹೌಸಿಂಗ್ ಇಟಿಎಫ್ ಇತ್ಯಾದಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಪ್ರಮಾಣ ಹೆಚ್ಚಬಹುದು.
Pic credit: Google
ಮಹಿಳೆಯರು ಸ್ವತಂತ್ರವಾಗಿ ಖಾಸಗಿ ಹಣಕಾಸು ನಿರ್ವಹಣೆ ಮಾಡುತ್ತಿರುವುದರಿಂದ ಮಹಿಳಾ ಕೇಂದ್ರಿತ ಹಣಕಾಸು ಯೋಜನೆಗಳಲ್ಲಿ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆ.
Pic credit: Google
ತೆರಿಗೆ ಹೊರೆ ಇಳಿಕೆ, ಸುಲಭ ಗೃಹ ಸಾಲ, ಸುಲಭ ಶಿಕ್ಷಣ ಸಾಲ, ಇನ್ವೆಸ್ಟ್ಮೆಂಟ್ ಸ್ಕೀಮ್ಗಳಲ್ಲಿ ಹೆಚ್ಚಿನ ಬಡ್ಡಿ ಇತ್ಯಾದಿ ಕ್ರಮಗಳು ದೂರಗಾಮಿಯಾಗಿ ಮಹಿಳೆಯರ ಅಭ್ಯುದಯಕ್ಕೆ ಕಾರಣವಾಗಬಹುದು.