ಬಜೆಟ್ ಮಂಡಿಸುವವರು ಬಜೆಟ್ ಪುಸ್ತಕ ಇರುವ ಬ್ರೀಫ್ಕೇಸ್ ಕೈಯಲ್ಲಿ ಇಟ್ಟುಕೊಂಡು ಬರುವ ಪರಿಪಾಠ ಇತ್ತು. ಕೆಲ ವರ್ಷಗಳ ಹಿಂದಿನವರೆಗೂ ಈ ರೂಢಿ ಇತ್ತು.
ಸೂಟ್ಕೇಸ್ ರೂಢಿ
(Pic credit: Google)
ಸೂಟ್ಕೇಸ್ನಲ್ಲಿ ಬಜೆಟ್ ದಾಖಲೆಗಳನ್ನು ಹೊತ್ತು ತರುವ ಸಂಪ್ರದಾಯ ಬ್ರಿಟಿಷರ ಆಡಳಿತದಿಂದಲೂ ಇತ್ತು. ಬ್ರಿಟಿಷರಿಂದ ಬಂದ ಬಹಳಷ್ಟು ಬಳುವಳಿಗಳಲ್ಲಿ ಇದೂ ಒಂದು.
ಬ್ರಿಟಿಷ್ ಬಳುವಳಿ
(Pic credit: Google)
ಬ್ರಿಟನ್ನಲ್ಲಿ ಬಜೆಟ್ ಮಂಡಿಸುವಾಗ ಗ್ಲ್ಯಾಡ್ಸ್ಟೋನ್ ಬಾಕ್ಸ್ ಅನ್ನು ತರಲಾಗುತ್ತಿತ್ತು. ಅದೊಂದು ರೀತಿಯ ಬ್ರೀಫ್ಕೇಸ್ನಂತಹ ಪೆಟ್ಟಿಗೆ. ಭಾರತದ ಬಜೆಟ್ ಬ್ರೀಫ್ಕೇಸ್ ಕೂಡ ಅದೇ ರೀತಿಯದ್ದು.
ಗ್ಲಾಡ್ಸ್ಟೋನ್ ಬಾಕ್ಸ್
(Pic credit: Google)
1860ರಲ್ಲಿ ಬ್ರಿಟಿಷ್ ಬಜೆಟ್ ಮುಖ್ಯಸ್ಥ ವಿಲಿಯಮ್ ಗ್ಲಾಡ್ಸ್ಟೋನ್ ಬಜೆಟ್ ಮಂಡಿಸುವಾಗ ಕೆಂಪು ಬಣ್ಣದ ಸೂಟ್ಕೇಸ್ನಲ್ಲಿ ತರುತ್ತಿದ್ದರು. ಅದೇ ಗ್ಲ್ಯಾಡ್ಸ್ಟೋನ್ ಬಾಕ್ಸ್ ಎಂದು ಹೆಸರಾಯಿತು.
ವಿಲಿಯಂ ಗ್ಲಾಡ್ಸ್ಟೋನ್
(Pic credit: Google)
ವಿಲಿಯಮ್ ಗ್ಲಾಡ್ಸ್ಟೋನ್ ಮಾಡುತ್ತಿದ್ದ ಬಜೆಟ್ ಭಾಷಣ ಬಹಳ ಸುದೀರ್ಘವಾದ್ದರಿಂದ ಕಾಗದಪತ್ರಗಳು ಹೆಚ್ಚಿರುತ್ತಿದ್ದವು. ಅದಕ್ಕಾಗಿ ಸೂಟ್ಕೇಸ್ ಬಳಸಲಾಗುತ್ತಿತ್ತು.
ಉದ್ದೇಶ ಬೇರೆ ಇತ್ತು
(Pic credit: Google)
ವಿಚಿತ್ರ ಹೇಗಿದೆ ನೋಡಿ..! ವಿಲಿಯಮ್ ಗ್ಲಾಡ್ಸ್ಟೋನ್ ಇಹಲೋಕ ತ್ಯಜಿಸಿದರೂ ಅವರ ಸೂಟ್ಕೇಸ್ 2010ರವರೆಗೂ ಬಳಕೆಯಲ್ಲಿತ್ತು. ತೀರಾ ಹಾಳಾಯಿತೆಂದು ಹೊಸ ಬ್ರೀಫ್ಕೇಸ್ ಬಳಲಾಗುತ್ತಿದೆ.
ಮುಂದುವರಿದ ರೂಢಿ
(Pic credit: Google)
ಬ್ರಿಟಿಷರಿಂದ ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಬಜೆಟ್ ಪುಸ್ತಕವನ್ನು ಬ್ರೀಫ್ಕೇಸ್ನಲ್ಲಿ ತರುವ ಸಂಪ್ರದಾಯ ಹಾಗೇ ಉಳಿಯಿತು. ಆದರೆ, ಬಣ್ಣ ಮಾತ್ರ ಬದಲಾಗುತ್ತಾ ಬಂದಿದೆ.
ಭಾರತಕ್ಕೂ ಅಂಟು
(Pic credit: Google)
2019ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಬ್ರೀಫ್ಕೇಸ್ ಬಿಟ್ಟು ಬಹೀ ಖಾತಾ ಅಥವಾ ಸಾಂಪ್ರದಾಯಿಕ ಲೆಡ್ಜರ್ನಲ್ಲಿ ಬಜೆಟ್ ಪತ್ರ ತಂದಿದ್ದರು.
ಕೈಬಿಟ್ಟ ದಾಸ್ಯ
(Pic credit: Google)
2019ರದ್ದು ಬ್ರಿಟಿಷ್ ದಾಸತ್ವ ತ್ಯಜಿಸುವ ಸಂಕೇತವಾದರೆ, 2021ರ ಬಜೆಟ್ ಡಿಜಿಟಲ್ ಆಗಿತ್ತು. ಟ್ಯಾಬ್ಲೆಟ್ನಲ್ಲಿ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಓದಿದ್ದರು.