By: Vijayasarathy SN

ಬಜೆಟ್ ಬಗ್ಗೆ ಕುತೂಹಲ ಎನಿಸುವ ವಿಚಾರಗಳು

23 Jan 2023

ಬಜೆಟ್ ಎಂಬುದು Bougette ಎಂಬ ಫ್ರೆಂಚ್ ಪದದಿಂದ ಉದ್ಭವವಾದುದು. ಇದರ ಅರ್ಥ ಪುಟ್ಟ ಚೀಲ. ಆ ಮೂಲಾರ್ಥ ಮರೆತು ಈಗ ಬೇರೆಯೇ ಅರ್ಥ ಪಡೆದಿದೆ.

ಬಜೆಟ್ ಮೂಲ

(Pic credit: Google)

ಭಾರತದ ಮೊತ್ತಮೊದಲ ಬಜೆಟ್ ಮಂಡನೆ ಆಗಿದ್ದು 1860ರ ಏಪ್ರಿಲ್ 7ರಂದು. ಈಸ್ಟ್ ಇಂಡಿಯಾ ಕಂಪನಿಯ ಆರ್ಥಿಕ ತಜ್ಞ ಜೇಮ್ಸ್ ವಿಲ್ಸನ್ ಬಜೆಟ್ ಮಂಡಿಸಿದ್ದರು.

ಮೊದಲ ಬಜೆಟ್

(Pic credit: Google)

ಸ್ಕಾಟ್​ಲ್ಯಾಂಡ್ ಮೂಲದ ಜೇಮ್ಸ್ ವಿಲ್ಸನ್ 1860ರಲ್ಲಿ ಮಂಡಿಸಿದ ಬಜೆಟ್​ನಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ಕ್ರಮವನ್ನು ಜಾರಿಗೆ ತರಲಾಗಿತ್ತು.

ಆದಾಯ ತೆರಿಗೆ

(Pic credit: Google)

ಆದಾಯ ತೆರಿಗೆಯು ಬ್ರಿಟನ್ ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿತ್ತು. ಇದು ಈಗಲೂ ಸರ್ಕಾರಗಳಿಗೆ ಪ್ರಮುಖ ಆದಾಯ ಮೂಲವಾಗಿದೆ.

ಪ್ರಮುಖ ಆದಾಯ ಮೂಲ

(Pic credit: Google)

ಸ್ವತಂತ್ರ ಭಾರತದಲ್ಲಿ ಮೊದಲ ಬಜೆಟ್ ಮಂಡನೆ ಆಗಿದ್ದು 1947ರ ನವೆಂಬರ್ 26ರಂದು. ಅಂದಿನ ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಬಜೆಟ್ ಮಂಡಿಸಿದ್ದರು.

1947ರಲ್ಲಿ...

(Pic credit: Google)

ಸಾಮಾನ್ಯವಾಗಿ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ. ಆದರೆ, ಪ್ರಧಾನಿ ಹುದ್ದೆಯಲ್ಲಿದ್ದು ಬಜೆಟ್ ಮಂಡಿಸಿದವರು ನಾಲ್ವರು ಮಾತ್ರವೇ.

ಪ್ರಧಾನಿಯಿಂದ ಬಜೆಟ್

(Pic credit: Google)

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರು ಬಜೆಟ್ ಮಂಡನೆ ಮಾಡಿದ್ದರು.

ನೆಹರೂ ಕುಟುಂಬ

(Pic credit: Google)

ಭಾರತದಲ್ಲಿ ಇಬ್ಬರು ಮಹಿಳೆಯರು ಬಜೆಟ್ ಮಂಡನೆ ಮಾಡಿದ್ದಾರೆ. ಇಂದಿರಾ ಗಾಂಧಿ ಮತ್ತು ನಿರ್ಮಲಾ ಸೀತಾರಾಮನ್ ಈ ಇಬ್ಬರು ಮಹಿಳೆಯರು.

ಇಬ್ಬರು ಮಹಿಳೆಯರು

(Pic credit: Google)