ಈ ವಾರ ಷೇರುಪೇಟೆ ಪ್ರಭಾವಿಸುವ 7 ವಿಚಾರಗಳು

02 Feb 2025

Pic credit: Google

Vijayasarathy SN

ಬಜೆಟ್ ಪ್ರತಿಕ್ರಿಯೆ

ಬಜೆಟ್ ಮಂಡನೆ ದಿನ ಷೇರು ಮಾರುಕಟ್ಟೆ ಪ್ರತಿಕ್ರಿಯೆ ಮಿಶ್ರವಾಗಿತ್ತು. ಈ ವಾರ ನಿಜ ಪರಿಣಾಮ ಕಾಣಬಹುದು. ನಿರ್ದಿಷ್ಟ ವಲಯಗಳ ಮೇಲೆ ಪರಿಣಾಮ ನಿರೀಕ್ಷಿಸಬಹುದು.

Pic credit: Google

ಆರ್​ಬಿಐ ದರ

ಭಾರತೀಯ ರಿಸರ್ವ್ ಬ್ಯಾಂಕ್​ನ ಎಂಪಿಸಿ ಇದೇ ಫೆಬ್ರುವರಿ 5ರಿಂದ 7ರವರೆಗೆ ಸಭೆ ನಡೆಸಲಿದೆ. ರಿಪೋ ದರ ಇತ್ಯಾದಿ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.

Pic credit: Google

ತ್ರೈಮಾಸಿಕ ವರದಿ

ಈ ವಾರ (ಫೆ. 3ರಿಂದ) ಬರೋಬ್ಬರಿ 748 ಕಂಪನಿಗಳು 3ನೇ ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಏಷ್ಯನ್ ಪೇಂಟ್ಸ್, ಏರ್​ಟೆಲ್, ಇತ್ಯಾದಿ ಕಂಪನಿಗಳು ಈ ಸಾಲಿನಲ್ಲಿವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಸಂಚಲನ ನಿರೀಕ್ಷಿಸಬಹುದು.

Pic credit: Google

ಎಫ್​ಐಐ, ಡಿಐಐ

ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಎಷ್ಟು ಷೇರುಗಳನ್ನು ಖರೀದಿಸುತ್ತಾರೆ, ಮಾರುತ್ತಾರೆ ಎಂಬುದು ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುತ್ತದೆ.

Pic credit: Google

ರುಪಾಯಿ ಮೌಲ್ಯ

ಡಾಲರ್ ಎದುರು ರುಪಾಯಿ ಮೌಲ್ಯ ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎಂಬುದು ಮಾರುಕಟ್ಟೆಯನ್ನು ಪ್ರಭಾವಿಸಬಹುದು. ಅಮೆರಿಕದಿಂದ ಭಾರತದ ಮೇಲೆ ಆಮದು ತೆರಿಗೆ ಹೇರಿಕೆ ಆದರೆ ಪರಿಸ್ಥಿತಿ ಬಿಗಡಾಯಿಸಬಹುದು.

Pic credit: Google

ಜಾಗತಿಕ ಮಾರುಕಟ್ಟೆ

ಜಾಗತಿಕವಾಗಿ ಇರುವ ಷೇರು ಮಾರುಕಟ್ಟೆಗಳಲ್ಲಿ, ಅದರಲ್ಲೂ ಅಮೆರಿಕದ ಮಾರುಕಟ್ಟೆಗಳಲ್ಲಿ ಆಗುವ ಏರಿಳಿತವು ಭಾರತದ ಪೇಟೆಯ ಮೇಲೂ ಪರಿಣಾಮ ಬೀರುತ್ತದೆ. ಟ್ರಂಪ್ ಅವರ ಮುಂದಿನ ನಡೆಗಳು ಮುಖ್ಯ ಎನಿಸುತ್ತವೆ.

Pic credit: Google

ಟೆಕ್ನಿಕಲ್ ಸಪೋರ್ಟ್

ಬಜೆಟ್ ಸೆಷನ್​ನಲ್ಲಿ ನಿಫ್ಟಿ ಉತ್ತಮ ಓಟ ಕಂಡಿತ್ತು. ತಾಂತ್ರಿಕವಾಗಿ ನಿಫ್ಟಿಗೆ 23,280 ಅಂಕಗಳ ಮಟ್ಟದಲ್ಲಿ ಸಪೋರ್ಟ್ ಇದೆ. ಇದಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದರೆ ದೊಡ್ಡ ಕುಸಿತದ ಅಪಾಯ ಇದೆ.

Pic credit: Google