27 Feb 2025
Pic credit: Google
Vijayasarathy SN
ರಿಸರ್ವ್ ಬ್ಯಾಂಕುಗಳು ಫಾರೆಕ್ಸ್ ರಿಸರ್ವ್ಸ್ನಲ್ಲಿ ಚಿನ್ನವನ್ನೂ ಇಟ್ಟಿರುತ್ತವೆ. ಇದು ಆರ್ಥಿಕ ಅನಿಶ್ಚಿತ ಸ್ಥಿತಿ ಎದುರಿಸಲು ತೆಗೆದುಕೊಳ್ಳಲಾಗುವ ಕ್ರಮ. ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಇರುವ ದೇಶಗಳು ಮುಂದಿವೆ...
Pic credit: Google
ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಅಮೆರಿಕ 8,133 ಮೆಟ್ರಿಕ್ ಟನ್ ಚಿನ್ನ ಹೊಂದಿದೆ. ಇದರ ಫಾರೆಕ್ಸ್ ರಿಸರ್ವ್ಸ್ನಲ್ಲಿ ಚಿನ್ನವೇ ಶೇ. 74.9ರಷ್ಟಿದೆ.
Pic credit: Google
ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಜರ್ಮನಿಯ ಸೆಂಟ್ರಲ್ ಬ್ಯಾಂಕ್ 3,3351 ಮೆಟ್ರಿಕ್ ಟನ್ ಚಿನ್ನ ಇಟ್ಟಿದೆ. ಅದರ ಫಾರೆಕ್ಸ್ನಲ್ಲಿ ಚಿನ್ನದ ಪಾಲು ಶೇ. 74.4ರಷ್ಟಿದೆ.
Pic credit: Google
ಇಟಲಿ ದೇಶದ ಸೆಂಟ್ರಲ್ ಬ್ಯಾಂಕ್ನ ಫಾರೆಕ್ಸ್ ನಿಧಿಯಲ್ಲಿ ಶೇ. 70ಕ್ಕಿಂತ ಹೆಚ್ಚು ಚಿನ್ನ ಇದೆ. ಅದು 2,451 ಟನ್ ಗೋಲ್ಡ್ ರಿಸರ್ವ್ಸ್ ಹೊಂದಿದೆ.
Pic credit: Google
ಫ್ರಾನ್ಸ್ ದೇಶದಲ್ಲಿರುವ ಗೋಲ್ಡ್ ರಿಸರ್ವ್ಸ್ 2,437 ಮೆಟ್ರಿಕ್ ಟನ್. ಅದರ ಫಾರೆಕ್ಸ್ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಶೇ. 72ರಷ್ಟಿದೆ.
Pic credit: Google
ರಷ್ಯಾ ಮತ್ತು ಚೀನಾ ಬಳಿ ಕ್ರಮವಾಗಿ 2,332 ಹಾಗು 2,279 ಮೆಟ್ರಿಕ್ ಟನ್ ಚಿನ್ನ ಇದೆ. ಆದರೆ, ಚೀನಾದ ಫಾರೆಕ್ಸ್ ಸಂಪತ್ತಿನಲ್ಲಿ ಚಿನ್ನದ ಪಾಲು ಕೇವಲ ಶೇ. 5.5.
Pic credit: Google
ಫಾರೆಕ್ಸ್ ನಿಧಿಯಲ್ಲಿ 3-4ನೇ ಸ್ಥಾನದಲ್ಲಿರುವ ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತ ದೇಶಗಳು ಗೋಲ್ಡ್ ರಿಸರ್ವ್ಸ್ನಲ್ಲಿ 7-8ನೇ ಸ್ಥಾನದಲ್ಲಿವೆ. ಇಲ್ಲಿ ಕ್ರಮವಾಗಿ 1,039 ಮತ್ತು 876 ಮೆಟ್ರಿಕ್ ಟನ್ ಚಿನ್ನ ಇದೆ.
Pic credit: Google