ಹಣ ಮಾಡುವ ಈ ಜಾಣ್ಮೆ ತಿಳಿದಿರಿ...
25 Feb 2025
Pic: ChatGPT
Vijayasarathy SN
ನಿಮ್ಮ ಆದಾಯ ಮತ್ತು ವೆಚ್ಚಗಳೆಷ್ಟು ಎಂದು ಇಂಚಿಂಚು ಮಾಹಿತಿ ಪತ್ತೆ ಮಾಡಿ. ಸರಾಸರಿ ಮಾಸಿಕ ವೆಚ್ಚ ಕಂಡುಕೊಳ್ಳಿ. ಇದರಿಂದ ಹಣ ಉಳಿತಾಯ ಸುಲಭವಾಗುತ್ತದೆ.
ಬಜೆಟ್ ಮಾಡಿ
Pic: ChatGPT
ನೀವು ಹೂಡಿಕೆಗೆ ತೊಡಗಲು ಯಾವತ್ತೂ ತಡ ಮಾಡಬಾರದು. ಷೇರು ಮಾರುಕಟ್ಟೆ, ಚಿನ್ನ, ಮ್ಯುಚುವಲ್ ಫಂಡ್, ಬಾಂಡ್ ಇತ್ಯಾದಿ ಬಗ್ಗೆ ತಿಳಿಯಿರಿ. ಎಲ್ಲೆಡೆ ನಿಮ್ಮ ಹೂಡಿಕೆ ಹರಡಿರಲಿ.
ಹೂಡಿಕೆಗೆ ಕಾತರ
Pic: ChatGPT
ಸಾಲ ಶೂಲವಾಗಬಲ್ಲುದು, ವರದಾನವೂ ಆಗಬಲ್ಲುದು. ಅತ್ಯಗತ್ಯ ಇದ್ದರಷ್ಟೇ ಸಾಲ ಮಾಡಿ. ಶೇ. 12ಕ್ಕಿಂತ ಹೆಚ್ಚು ವಾರ್ಷಿಕ ಬಡ್ಡಿ ಇರುವ ಸಾಲ ತೀರಿಸಲು ಆದ್ಯತೆ ಕೊಡಿ.
ಸಾಲ ನಿರ್ವಹಣೆ
Pic: ChatGPT
ಕ್ರೆಡಿಟ್ ಕಾರ್ಡ್ ಬಿಲ್, ಲೋನ್ ಇಎಂಐ ಇವುಗಳನ್ನು ಯಾವತ್ತೂ ತಪ್ಪಿಸದಿರಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಬೆಳೆಯುತ್ತದೆ. ಈ ಸ್ಕೋರ್ ಚೆನ್ನಾಗಿದ್ದರೆ ಸುಲಭ ಸಾಲ ಸಿಗುತ್ತದೆ.
ಕ್ರೆಡಿಟ್ ಸ್ಕೋರ್
Pic: ChatGPT
ವೃತ್ತಿಯಲ್ಲಿ ಏಳ್ಗೆ ಕಾಣಲು ಬೇಕಾದ ಹೆಚ್ಚುವರಿ ಕೌಶಲ್ಯಗಳನ್ನು ಕಲಿಯಿರಿ. ಹೊಸ ಆದಾಯ ಮೂಲಗಳನ್ನು ಹುಡುಕಿರಿ. ಜನಸಂಪರ್ಕ ಹೆಚ್ಚಿಸಿಕೊಂಡರೆ ಹೊಸ ಮಾರ್ಗ ಸಿಗಬಹುದು.
ಆದಾಯ ಹೆಚ್ಚಳ
Pic: ChatGPT
ಹಣಕಾಸು ಅರಿವು ಮುಖ್ಯ. ಆನ್ಲೈನ್ನಲ್ಲಿ ಮಾಹಿತಿ ಸಂಗ್ರಹಿಸಬಹುದು. ಉತ್ತಮ ಪುಸ್ತಕ ಓದಬಹುದು. ಆನ್ಲೈನ್ ಕೋರ್ಸ್ ಕಲಿಯಬಹುದು. ಹಣಕಾಸು ಸಲಹೆಗಾರರ ನೆರವೂ ಪಡೆಯಬಹುದು.
ಹಣಕಾಸು ಶಿಕ್ಷಣ
Pic: ChatGPT
ಜೀವನದಲ್ಲಿ ಹಣಕಾಸು ಶಿಸ್ತು ಮುಖ್ಯ. ಹಣ ಉಳಿಸುವುದು ಹಣ ಗಳಿಕೆಗೆ ಸಮ ಎಂದು ತಿಳಿದರೆ ಹಣದ ಮಹತ್ವ ತಿಳಿಯುತ್ತದೆ. ಮುಂದಾಲೋಚನೆ ಮಾಡಿ ಹಣಕಾಸು ಗುರಿ ಇಟ್ಟುಕೊಳ್ಳಿ.
ಬುದ್ಧಿ ನೆಟ್ಟಗಿರಲಿ
Pic: ChatGPT
Next: ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು
ಇನ್ನಷ್ಟು ನೋಡಿ