25 Aug 2024
Pic credit: Google
Vijayasarathy SN
ಆದಾಯ ತೆರಿಗೆಯೇ ಇಲ್ಲದ ದೇಶಗಳಿವು
ಕೆರಿಬಿಯನ್ ಪ್ರದೇಶದಲ್ಲಿರುವ ದಿ ಬಹಾಮಾಸ್ ಒಂದು ದ್ವೀಪ ದೇಶವಾಗಿದ್ದು, ಆಕರ್ಷಕ ಬೀಚ್ಗಳಿಗೆ ಹೆಸರುವಾಸಿ. ಇಲ್ಲಿ ಆದಾಯ ತೆರಿಗೆಯೇ ಇಲ್ಲ. ಅಮೆರಿಕಕ್ಕೆ ಸಮೀಪ ಇರುವುದರಿಂದ ಶ್ರೀಮಂತರು, ಉದ್ಯಮಿಗಳನ್ನು ಆಕರ್ಷಿಸುತ್ತದೆ.
Pic credit: Google
ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಬರ್ಮುಡಾದಲ್ಲೂ ಆದಾಯ ತೆರಿಗೆ ವ್ಯವಸ್ಥೆ ಇಲ್ಲ. ಆದರೆ, ಕಾರ್ಮಿಕರ ಬದಲು ಸಂಸ್ಥೆಗಳ ಮೆಲೆ ಪೇರೋಲ್ ಟ್ಯಾಕ್ಸ್ ಅನ್ನು ವಿಧಿಸುತ್ತದೆ.
Pic credit: Google
ಯೂರೋಪ್ಗೆ ಸೇರಿದ ಮೊನಾಕೊ ಈ ಭೂಮಿಯಲ್ಲಿರುವ ಎರಡನೇ ಅತಿ ಪುಟ್ಟ ದೇಶವಾಗಿದೆ. ಇಲ್ಲಿಯ ಬಹುತೇಕ ನಿವಾಸಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಶ್ರೀಮಂತರಿಗೆ ಇಷ್ಟವಾದ ಜಾಗ ಇದು.
Pic credit: Google
ಮಲೇಷ್ಯಾ ಮತ್ತು ಇಂಡೋನೇಷ್ಯಾ ಪಕ್ಕದಲ್ಲಿರುವ ಬ್ರೂನೇ ತೈಲ ಸಂಪದ್ಭರಿತ ದೇಶವಾಗಿದೆ. ಇದರಿಂದ ಬಹಳಷ್ಟು ಆದಾಯ ಬರುತ್ತದೆ. ಹೀಗಾಗಿ, ನಾಗರಿಕರಿಗೆ ಆದಾಯ ತೆರಿಗೆ ವಿಧಿಸುತ್ತಿಲ್ಲ.
Pic credit: Google
ಆಸ್ಟ್ರೇಲಿಯಾಗೆ ಸಮೀಪ ಇರುವ ಒಂದು ಪುಟ್ಟ ದ್ವೀಪ ದೇಶ ನಾವುರು (Nauru). ಇದು ಆರ್ಥಿಕವಾಗಿ ಬಲ ಇರುವ ರಾಷ್ಟ್ರವಲ್ಲ. ಆದರೂ ಕೂಡ ಇನ್ಕಮ್ ಟ್ಯಾಕ್ಸ್ ಇಲ್ಲ. ಆದರೆ, ಬೇರೆ ರೀತಿಯಲ್ಲಿ ತೆರಿಗೆಗಳಿವೆ.
Pic credit: Google
ಏಷ್ಯಾದ ಕೊಲ್ಲಿ ದ್ವೀಪ ರಾಷ್ಟ್ರವಾದ ಬಹ್ರೇನ್ ಬಹಳ ಶ್ರೀಮಂತಿಕೆ ಹೊಂದಿದೆ. ತನ್ನ ನಾಗರಿಕರಿಗೆ ಯಾವ ಆದಾಯ ತೆರಿಗೆಯನ್ನು ಇದು ವಿಧಿಸುವುದಿಲ್ಲ.
Pic credit: Google
ದುಬೈ, ಶಾರ್ಜಾ, ಆಬುಧಾಬಿ ನಗರಗಳನ್ನು ಹೊಂದಿರುವ ಯುಎಇ ಆರ್ಥಿಕವಾಗಿ ಸಂದ್ಭರಿತ ದೇಶವಾಗಿದೆ. ಇಲ್ಲಿ ಇನ್ಕಮ್ ಟ್ಯಾಕ್ಸ್ ಇಲ್ಲ. ಜಾಗತಿಕವಾಗಿ ಪ್ರಮುಖ ಬಿಸಿನೆಸ್ಗಳು ಮತ್ತು ಶ್ರೀಮಂತರನ್ನು ಆಕರ್ಷಿಸುತ್ತದೆ.
Pic credit: Google