ಯಾವ ಷೇರು ಯಾವಾಗ ಖರೀದಿಸಬೇಕು, ಮಾರಬೇಕು?

22 Aug 2024

Pic credit: Google

Vijayasarathy SN

ಷೇರು ಮಾರುಕಟ್ಟೆಯಲ್ಲಿರುವ ಸಾವಿರಾರು ಷೇರುಗಳಲ್ಲಿ ಯಾವುದನ್ನು ಖರೀದಿಸಬೇಕು, ಎಷ್ಟು ದಿನ ಹೂಡಿಕೆ ಮಾಡಬೇಕು, ಯಾವಾಗ ಮಾರಬೇಕು ಎಂಬ ಗೊಂದಲ ಬಹುತೇಕ ಎಲ್ಲರಿಗೂ ಇದ್ದೇ ಇರುತ್ತದೆ.

ಗೊಂದಲ ಗೊಂದಲ

Pic credit: Google

ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಷೇರುಗಳನ್ನು ಅಂದಾಜು ಮಾಡುತ್ತಾರೆ. ಷೇರಿನ ಟೆಕ್ನಿಕಲ್ ಮತ್ತು ಫೈನಾನ್ಷಿಯಲ್ ಮಾನದಂಡಗಳನ್ನು ಗಮನಿಸಲಾಗುತ್ತದೆ. ಕೆಲವರು ಓಡುವ ಷೇರುಗಳಲ್ಲಿ ಹಣ ಹಾಕುತ್ತಾರೆ.

ಮೆಟ್ರಿಕ್ಸ್ ತಿಳಿಯಿರಿ

Pic credit: Google

ಹಲವು ಬಾರಿ ನಾವು ಷೇರು ಖರೀದಿಸಿದ ಬಳಿಕ ಅದು ಸರಿಯಲ್ಲ ಎಂದು ವಿಷಾದ ಮೂಡಿರಬಹುದು. ಇನ್ನೂ ಕೆಲ ಷೇರುಗಳನ್ನು ಖರೀದಿಸಲು ಬಯಸುತ್ತೇವಾದರೂ ಅದರ ಬೆಲೆ ವೇಗವಾಗಿ ಹೆಚ್ಚಾಗಿ ಅಯ್ಯೋ ತಪ್ಪಿತಲ್ಲ ಎನಿಸಬಹುದು.

ಅಯ್ಯೋ, ವಿಷಾದ

Pic credit: Google

ಇಂಥ ಎರಡು ಸಂದರ್ಭಗಳಲ್ಲಿ ನೀವು ಏನು ಮಾಡಬೇಕು, ಬೇಡವಾದ್ದನ್ನು ಹೇಗೆ ಕಳಚಬೇಕು, ಬೇಕಾದ್ದನ್ನು ಹೇಗೆ ಪಡೆಯುವುದು ಎಂಬುದಕ್ಕೆ ಬಹಳ ಸರಳವಾದ ಸೂತ್ರ ನೀಡಿದ್ದಾರೆ.

ತಜ್ಞರ ಸಲಹೆ

Pic credit: Google

ತಪ್ಪಾಗಿ ಖರೀದಿಸಿದ ಬೇಡದ ಷೇರನ್ನು ನೀವು ಬುಲ್ಲಿಶ್ ಮಾರ್ಕೆಟ್​ನಲ್ಲಿ ಮಾರಿಬಿಡಿ. ಅಂದರೆ ಮಾರುಕಟ್ಟೆ ಸಕಾರಾತ್ಮವಾಗಿದ್ದಾಗ ಎಲ್ಲಾ ಷೇರುಗಳು ಹೆಚ್ಚು ಬೆಲೆ ಪಡೆದುಕೊಂಡಿರುತ್ತವೆ. ಆಗ ನಿಮ್ಮ ಅನಗತ್ಯ ಷೇರು ಮಾರಿಬಿಡುವುದು ಸೂಕ್ತ.

ಬೇಡದ್ದು ಮಾರೋದು

Pic credit: Google

ಇನ್ನು, ಅತಿಯಾದ ಬೆಲೆ ಕಾರಣಕ್ಕೆ ನೀವು ಇಷ್ಟಪಟ್ಟ ಷೇರನ್ನು ಖರೀದಿಸಬೇಕೆಂದರೆ ಮಾರುಕಟ್ಟೆ ಬೇರಿಶ್ ಟ್ರೆಂಡ್, ಅಂದರೆ ಕುಸಿತ ಕಂಡ ಸಂದರ್ಭಕ್ಕೆ ಕಾಯಬೇಕು. ಆಗ ಷೇರಿನ ಬೆಲೆ ಇಳಿದಿರುತ್ತದೆ.

ಬೇಕಿದ್ದು ಕೊಳ್ಳೋದು

Pic credit: Google

ಆದರೆ, ಬಹಳ ಮೂಲಭೂತವಾದ ಅಂಶವೆಂದರೆ ಉತ್ತಮ ಆದಾಯಹೆಚ್ಚಳ ಕಾಣುತ್ತಿರುವ ಮತ್ತು ಕಡಿಮೆ ಪಿಇ, ಪಿಬಿ ರೇಶಿಯೋ ಇರುವ ಕಂಪನಿಗಳ ಪಟ್ಟಿ ಮಾಡಿಕೊಳ್ಳುವುದು ಬಹಳ ಮುಖ್ಯ.

ಮೂಲಾಂಶ ತಿಳಿಯಿರಿ

Pic credit: Google