ಭವಿಷ್ಯಕ್ಕೆ ಬುನಾದಿ ಹಾಕುವ ಈ ಹಣಕಾಸು ಧೋರಣೆಗಳು ನಿಮ್ಮದಾಗಲಿ

15 Oct 2023

By: Vijayasarathy SN

ನಾವು ದುಡಿಯುವುದು ನಮ್ಮ ಈಗಿನ ಮತ್ತು ಭವಿಷ್ಯದ ಜೀವನ ಉತ್ತಮವಾಗಿರಲೆಂದು. ಈ ನಿಟ್ಟಿನಲ್ಲಿ ಕೆಲ ಶಿಸ್ತು ಗುಣಗಳನ್ನು ನೀವು ಪಾಲಿಸುವುದು ಉತ್ತಮ.

7 ಸಲಹೆಗಳು

Pic credit: Google

ನೀವು ಉಳಿಸುವ ಪ್ರತೀ ಹಣವೂ ಅಷ್ಟೇ ಗಳಿಕೆಗೆ ಸಮ. ನಿಮ್ಮ ಸಂಪಾದನೆಯಲ್ಲಿ ಸಾಧ್ಯವಾದಷ್ಟೂ ಉಳಿತಾಯ ಮಾಡದೇ ಹೋದಲ್ಲಿ ಭವಿಷ್ಯ ಕಷ್ಟ.

ಹಣ ಉಳಿತಾಯ

Pic credit: Google

ನಿಮಗೆ ಸಂಬಳವೊಂದೇ ವರಮಾನವಾಗಿದ್ದರೆ ಅದು ದುಸ್ತರ. ಸಂಬಳಕ್ಕೆ ತಕ್ಕಂತೆ ವೆಚ್ಚಗಳೂ ಹೆಚ್ಚುತ್ತವೆ. ಹೆಚ್ಚಿನ ಹಣ ಉಳಿಸುವುದು ಕಷ್ಟ. ಭವಿಷ್ಯ ಕಷ್ಟಕಷ್ಟ...

ಸಂಬಳ ಮಾತ್ರವಲ್ಲ

Pic credit: Google

ಸುಲಭಕ್ಕೆ ಸಿಗುತ್ತದೆಂದು ಹಲವು ಕ್ರೆಡಿಟ್ ಕಾರ್ಡ್ ಪಡೆದು ಸಿಕ್ಕಸಿಕ್ಕಂತೆ ಬಳಸುತ್ತಾ ಮಿನಿಮಮ್ ದುಡ್ಡು ಕಟ್ಟಿಕೊಂಡು ಹೋಗುತ್ತೇವೆ. ಅಂತಿಮವಾಗಿ ಅದೇ ದೊಡ್ಡ ಸಾಲವಾಗಿರುತ್ತದೆ.

ಕ್ರೆಡಿಟ್ ಕಾಂಡ

Pic credit: Google

ನಿಮ್ಮನ್ನು ನೀವು ನಿರ್ಲಕ್ಷಿಸಿದರೆ ಬದುಕು ಕಷ್ಟ. ವೃತ್ತಿಜೀವನದಲ್ಲಿ ಉನ್ನತಿ ಗಳಿಸಲು ಅಥವಾ ಬೇರೆ ಆದಾಯ ಸೃಷ್ಟಿಸಿಕೊಳ್ಳಲು ಕೌಶಲ್ಯಗಳನ್ನು ಕಲಿಯದಿದ್ದರೆ ಭವಿಷ್ಯ ಕಷ್ಟ.

ಕೌಶಲ್ಯವೃದ್ಧಿ

Pic credit: Google

ನೀವು ವೃತ್ತಿಯಲ್ಲೋ ಅಥವಾ ಬಿಸಿನೆಸ್​ನಲ್ಲೋ ಏಳಿಗೆ ಗಳಿಸಬೇಕಾದರೆ ಜನಸಂಪರ್ಕ ಬಹಳ ಮುಖ್ಯ. ಎಲ್ಲಾ ಸ್ತರದ ಜನರು ನಿಮ್ಮ ಸಂಪರ್ಕದಲ್ಲಿದ್ದಷ್ಟೂ ಹೊಸ ಐಡಿಯಾ ಸಿಗಬಹುದು.

ನೆಟ್ವರ್ಕ್ ಬೆಳಸಿ

Pic credit: Google

ಬರೀ ಕೆಲಸ ಕೆಲಸ ಎಂದು ಆರೋಗ್ಯ ನಿರ್ಲಕ್ಷಿಸಿದರೆ ಕಷ್ಟ. ನಿಮ್ಮ ಉಳಿತಾಯ ಹಣವೆಲ್ಲಾ ಆಸ್ಪತ್ರೆಗೆಯೇ ವ್ಯಯವಾಗುತ್ತದೆ. ನಿಮಗೆ 40ರ ವಯಸ್ಸು ದಾಟಿದ ಬಳಿಕ ಅರಿವಾಗಬಹುದು.

ಆರೋಗ್ಯಭಾಗ್ಯ

Pic credit: Google

ನಿಮ್ಮ ವೈಯಕ್ತಿಕ ಜೀವನವಾಗಲೀ, ವೃತ್ತಿಜೀವನವಾಗಲೀ, ಹಣಕಾಸು ಯೋಜನೆಯಾಗಲೀ ಗುರಿಗಳಿರಬೇಕು. ಗುರಿಯನ್ನು ಹಂತಹಂತಗಳಾಗಿ ವಿಭಜಿಸಿದರೆ ಗುರಿಮುಟ್ಟುವುದು ಸುಲಭ.

ಗೊತ್ತುಗುರಿ

Pic credit: Google

Next Story: ಒಡೆದ ತೆಂಗಿನಕಾಯಿಯನ್ನು ಕೆಡದಂತೆ ಸಂಗ್ರಹಿಸಿಡುವುದು ಹೇಗೆ?

ಧನ್ಯವಾದಗಳು