ಬಿಸಿನೆಸ್ ಮ್ಯಾನ್ ಆಗಲು ನಿಮ್ಮಲ್ಲಿ ಈ ಗುಣ ಇದೆಯಾ?

09 Nov 2023

By: Vijayasarathy SN

ಅಂಬಾನಿ, ಅದಾನಿಯಂತೆ ಉದ್ಯಮಿ ಆಗಿ ಹೇರಳ ಹಣ ಸಂಪಾದನೆ ಮಾಡಬೇಕೆನ್ನುವುದು ಎಲ್ಲರ ಕನಸು. ಆದರೆ, ಅದನ್ನು ಸಾಕಾರಗೊಳಿಸಲು ಈ ಕೌಶಲಗಳು ಬೇಕು.

ಉದ್ಯಮಿಯಾಗಲು...

Pic credit: Google

ಸಂವಹನ ಕಲೆ. ನಿಮಗೆ ಸಾಂದರ್ಭಿಕವಾಗಿ ಮತ್ತು ವ್ಯಾವಹಾರಿಕವಾಗಿ ಮಾತನಾಡುವ ಕಲೆ ಸಿದ್ಧಿಸಿರಬೇಕು. ಎದುರಿಗಿದ್ದವರನ್ನು ಒಪ್ಪಿಸುವ ಮಾತಿನ ಶಕ್ತಿ ಇರಬೇಕು.

ಸ್ಕಿಲ್ ನಂಬರ್ 1

Pic credit: Google

ಹಣಕಾಸು ವಿದ್ಯೆ. ನೀವು ಉದ್ಯಮಿಯಾಗಿದ್ದರೆ ಹಣಕಾಸುಗಳನ್ನು ವ್ಯವಸ್ಥಿತವಾಗಿ ಹೊಂದಿಸುವ ಬ್ಯಾಲೆನ್ಸ್ ಶೀಟ್, ಇನ್ಕಮ್ ಸ್ಟೇಟ್ಮೆಂಟ್ ಇತ್ಯಾದಿ ಜ್ಞಾನವಾದರೂ ಇರಬೇಕು.

ಸ್ಕಿಲ್ ನಂಬರ್ 2

Pic credit: Google

ಸಮಯ ಪಾಲನೆ. ಸ್ವಂತ ಉದ್ದಿಮೆಗೆ ದಿನದ 24 ಗಂಟೆಯೂ ಜೀಕುತ್ತಾ ಕೂರಬೇಕಿಲ್ಲ. ಪ್ರಮುಖ ಕೆಲಸ ಮುಗಿಸಲು ಆದ್ಯತೆ ಕೊಡುವ ಟೈಮ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.

ಸ್ಕಿಲ್ ನಂಬರ್ 3

Pic credit: Google

ಡಿಜಿಟಲ್ ಮಾರ್ಕೆಟಿಂಗ್. ಇವತ್ತಿನ ಬಿಸಿನೆಸ್​ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮುಖ್ಯ. ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಆನ್ಲೈನ್ ಆ್ಯಡ್ ಸಮರ್ಪಕವಾಗಿ ಬಳಸಲು ಇದು ಬೇಕು.

ಸ್ಕಿಲ್ ನಂಬರ್ 4

Pic credit: Google

ನೆಟ್ವರ್ಕ್. ಇದು ಬಹಳ ಮುಖ್ಯ. ಹಳೆ ಸಹಪಾಠಿಗಳಿಂದ ಹಿಡಿದು ವಿವಿಧ ಸಹೋದ್ಯೋಗಿವರೆಗೆ ಎಲ್ಲರೊಂದಿಗೆ ಸಂಬಂಧ ಉತ್ತಮ ಇರಬೇಕು. ಎಲ್ಲಾ ಸ್ತರದಲ್ಲೂ ಪರಿಚಿತರಿರಬೇಕು.

ಸ್ಕಿಲ್ ನಂಬರ್ 5

Pic credit: Google

ಬಿಸಿನೆಸ್ ಮ್ಯಾನೇಜ್ಮೆಂಟ್. ನಿಮ್ಮ ವ್ಯವಹಾರವನ್ನು ಒಂದು ಹಂತಕ್ಕೆ ಒಯ್ಯಲು ಪ್ರತಿಭೆ ಸಾಕು. ಇನ್ನೂ ಮೇಲೆ ಹೋಗಲು ಬೇರೆ ಪ್ಲಾನಿಂಗ್ ಬೇಕು. ಅದೇ ಬಿಸಿನೆಸ್ ಮ್ಯಾನೇಜ್ಮೆಂಟ್.

ಸ್ಕಿಲ್ ನಂಬರ್ 6

Pic credit: Google

ಈ ಮುಂಚೆ ವಿವರಿಸಿದ ಗುಣವೆಲ್ಲವೂ ನಿಮ್ಮಲ್ಲಿದ್ದರೂ ಅದನ್ನು ಜಾರಿಗೆ ತರುವ ಮಾನಸಿಕ ಸ್ಥಿರತೆ ಬೇಕು. ಉದ್ಯಮಿಗಳಾಗಲು ಮನಸು ಮಾಡಿರುವ ನಿಮಗೆ ಆಲ್ ದಿ ಬೆಸ್ಟ್.

ಅಂತಿಮವಾಗಿ...

Pic credit: Google