ಷೇರುಗಳ ಮೇಲೆ ಹೂಡಿಕೆ ಮಾಡುವ ಮುನ್ನ ಈ ವಿಚಾರ ಗೊತ್ತಿರಲಿ

06 Nov 2023

By: Vijayasarathy SN

ಮ್ಯುಚುವಲ್ ಫಂಡ್ ಮೇಲೆ ಸುಮ್ಮನೆ ಹೂಡಿಕೆ ಬೇಡ. ಯಾವ ಉದ್ದೇಶಕ್ಕೆ ಹಣ ಬೇಕು ಎಂಬುದರ ಮೇಲೆ ಯಾವುದಕ್ಕೆ ಹೂಡಿಕೆ ಮಾಡಬೇಕೆಂದು ನಿರ್ಧರಿಸಿ.

ಗೊತ್ತುಗುರಿ ಬೇಕು

Pic credit: Google

ನಿಮ್ಮಲ್ಲಿ ಅಲ್ಪ ಉಳಿತಾಯ ಮಾತ್ರ ಇದ್ದರೆ ಅಷ್ಟನ್ನೂ ಹೈರಿಸ್ಕ್ ಈಕ್ವಿಟಿಗಳ ಮೇಲೆ ಹೂಡಿಕೆ ಮಾಡಬಾರದು. ಡೆಟ್ ಫಂಡ್​ಗಳಲ್ಲೂ ಹಣ ಹಾಕಿ.

ಬ್ಯಾಕಪ್ ಎಷ್ಟಿದೆ?

Pic credit: Google

ಯಾವುದೋ ಷೇರು ಚೆನ್ನಾಗಿ ಲಾಭ ತಂದಿದೆ ಎಂದು ಅಷ್ಟೂ ಹೂಡಿಕೆಯನ್ನು ಅದರ ಮೇಲೆ ಹಾಕಿದರೆ ಬಹಳ ರಿಸ್ಕಿಯಾಗುತ್ತದೆ. ಬೇರೆ ಬೇರೆ ಉದ್ಯಮಗಳ ಷೇರು ಖರೀದಿಸಿ.

ಒಂದೇ ಷೇರು ಬೇಡ

(Pic credit: Google)

ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಕೆಲವನ್ನು ಟ್ರೆಂಡಿಂಗ್ ಮತ್ತು ಹಾಟ್ ಸ್ಟಾಕ್​ಗಳೆಂದು ಶಿಫಾರಸು ಮಾಡಲಾಗುತ್ತದೆ. ದೂರಗಾಮಿ ಯೋಚನೆ ಇರಲಿ.

ಟ್ರೆಂಡ್ ಹಿಂದೆ ಬೇಡ

(Pic credit: Google)

ತುರ್ತು ಹಣಕಾಸು ಸ್ಥಿತಿ ಬಂದಾಗ ಹಲವರು ತಮ್ಮ ಹೂಡಿಕೆಗಳಿಂದ ಹಣ ಹಿಂಪಡೆದು ಬಳಸುತ್ತಾರೆ. ಇದು ತಪ್ಪು. ಎಮರ್ಜೆನ್ಸಿಗೆಂದು ಪ್ರತ್ಯೇಕವಾಗಿ ಹಣ ಇಡಿ.

ತುರ್ತು ಸ್ಥಿತಿಗೆ?

(Pic credit: Google)

ಮಾರುಕಟ್ಟೆಯ ಅಲ್ಪ ಏರಿಳಿತವಾದರೂ ಕೆಲವರು ಷೇರು ಮಾರಲು ಮುಂದಾಗುತ್ತಾರೆ. ಇದರಿಂದ ಲಾಭ ಇಲ್ಲ ಎನ್ನುತ್ತಾರೆ ತಜ್ಞರು. ನಿಮ್ಮ ಹೂಡಿಕೆ ದೀರ್ಘಕಾಲದ್ದಿರಲಿ.

ಅತಿ ಟ್ರೇಡಿಂಗ್ ಬೇಡ

(Pic credit: Google)

ನಿಮ್ಮ ಹೂಡಿಕೆಗಳಿಂದ ಬರುವ ಲಾಭಕ್ಕೆ ತೆರಿಗೆಗಳು ಅನ್ವಯ ಆಗಬಹುದು. ಇಎಲ್​ಎಸ್​ಎಸ್, ಪಿಪಿಎಫ್ ಇತ್ಯಾದಿ ತೆರಿಗೆ ವಿನಾಯಿತಿಯ ಹೂಡಿಕೆಗಳಿಗೂ ಹಣ ಇಡಿ.

ತೆರಿಗೆಯತ್ತ ಕಣ್ಣಿರಲಿ

(Pic credit: Google)

ಇವಿಷ್ಟೂ ನೀವು ಹೂಡಿಕೆ ಮಾಡುವ ಮುನ್ನ ಆಲೋಚಿಸಬೇಕಾದ ಸಂಗತಿಗಳು. ನಿಶ್ಚಿತ ಆದಾಯ ತರುವ ಎಫ್​ಡಿ, ಪಿಪಿಎಫ್ ಇತ್ಯಾದಿಗಳೂ ಹೂಡಿಕೆಯ ಭಾಗವಾಗಿರಲಿ.

ಯೋಚಿಸಿ ನಿರ್ಧರಿಸಿ

(Pic credit: Google)