1 Aug 2024
Pic credit: Google
Vijayasarathy SN
ಇಪಿಎಫ್ ಎಂಬುದು ಉದ್ಯೋಗಿಗಳ ನಿವೃತ್ತಿ ನಂತರಕ್ಕೆ ಉಪಯೋಗವಾಗಲೆಂದು ಸರ್ಕಾರ ರೂಪಿಸಿರುವ ಉಳಿತಾಯ ಯೋಜನೆಯಾಗಿದೆ. ಇಪಿಎಫ್ಒ ಸಂಸ್ಥೆ ಇದನ್ನು ನಿರ್ವಹಿಸುತ್ತದೆ.
Pic credit: Google
ಉದ್ಯೋಗಿಗೆ ಪ್ರತ್ಯೇಕ ಇಪಿಎಫ್ ಖಾತೆ ತೆರೆಯಲಾಗುತ್ತದೆ. ಅದರಲ್ಲಿ ಅವರ ಸಂಬಳದ ಶೇ. 12ರಷ್ಟು ಭಾಗವು ಖಾತೆಗೆ ಜಮೆಯಾಗುತ್ತದೆ. ಸಂಸ್ಥೆ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ತುಂಬಿಸುತ್ತದೆ.
Pic credit: Google
ನಿಮ್ಮ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಹಣ ಇದೆ ಎಂದು ಪರಿಶೀಲಿಸಲು ಹಲವು ವಿಧಾನಗಳಿವೆ. ಎಸ್ಸೆಮ್ಮೆಸ್, ಮಿಸ್ಡ್ ಕಾಲ್, ವೆಬ್ಸೈಟ್, ಆ್ಯಪ್ ಇತ್ಯಾದಿ ಮೂಲಕ ಪಿಎಫ್ ಬ್ಯಾಲನ್ಸ್ ವೀಕ್ಷಿಸಬಹುದು.
Pic credit: Google
ಇಪಿಎಫ್ ಖಾತೆಗೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ನಿಂದ "EPFO <UAN number> ENG" ಎಂದು ಟೈಪಿಸಿ 7738299899 ನಂಬರ್ಗೆ ಎಸ್ಎಂಎಸ್ ಕಳುಹಿಸಿದರೆ, ಪಿಎಫ್ ಬ್ಯಾಲನ್ಸ್ ವಿವರ ಸಿಗುತ್ತದೆ.
Pic credit: Google
ಪಿಎಫ್ ಖಾತೆಯಲ್ಲಿರುವ ಹಣದ ಮೊತ್ತ ತಿಳಿಯಲು ಇದಕ್ಕೂ ಸುಲಭವಾದ ವಿಧಾನವಿದೆ. ಅದೇ ಮಿಸ್ಡ್ ಕಾಲ್. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ 9966044425 ಗೆ ಕರೆ ಮಾಡಿರಿ ಸಾಕು.
Pic credit: Google
ಇಪಿಎಫ್ಒ ವೆಬ್ಸೈಟ್ಗೆ (epfindia.gov.in) ಹೋಗಿ ಅಲ್ಲಿ ಸರ್ವಿಸಸ್ ಅಡಿಯಲ್ಲಿ ‘ಫಾರ್ ಎಂಪ್ಲಾಯೀಸ್’ ಕ್ಲಿಕ್ ಮಾಡಿ. ಬಳಿಕ ‘ಮೆಂಬರ್ಸ್ ಪಾಸ್ಬುಕ್’ ಕ್ಲಿಕ್ ಮಾಡಿ. ಯುಎಎನ್, ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.
Pic credit: Google
ನೀವು ಉಮಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಅದರಲ್ಲಿ ಇಪಿಎಫ್ ಖಾತೆಯನ್ನು ಪ್ರವೇಶಿಸಬಹುದು. ನಿಮ್ಮ ಬಳಿ ಯುಎಎನ್ ನಂಬರ್ ಇದ್ದರೆ ಒಟಿಪಿ ಮೂಲಕ ಲಾಗಿನ್ ಆಗಬಹುದು.
Pic credit: Google