ಬಡವರಾಗಿಸುವ  11 ಹಣಕಾಸು ತಪ್ಪುಗಳು

30 May 2024

By: Vijayasarathy SN

ಹೆಚ್ಚಿನ ಜನರು ತಮ್ಮ ಸಂಪಾದನೆ ಮತ್ತು ವೆಚ್ಚದ ಬಗ್ಗೆ ಕಣ್ಣಿಟ್ಟಿರುವುದಿಲ್ಲ. ಇದರಿಂದಾಗಿ ಹಣ ಉಳಿಸಲು ಮತ್ತು ಭವಿಷ್ಯಕ್ಕೆ ಎತ್ತಿಡಲು ಕಷ್ಟವಾಗುತ್ತದೆ.

ವೆಚ್ಚದ ಮೇಲೆ ಕಣ್ಣಿಲ್ಲ

(Pic credit: Google)

ಇನ್ನೊಬ್ಬರನ್ನು ನೋಡಿ ಜೀವನ ಶೈಲಿ ರೂಪಿಸುವುದು ತಪ್ಪು. ಇದರಿಂದ ಅನಗತ್ಯ ವೆಚ್ಚಕ್ಕೆ ದಾರಿಯಾಗುತ್ತದೆ. ನಿಮಗೆ ಸೂಕ್ತ ದಾರಿ ಯಾವುದು ಕಂಡುಕೊಳ್ಳಿ.

ಅನುಕರಣೆ ಮಾಡುವುದು

(Pic credit: Google)

ಇವತ್ತಿನದು ಇವತ್ತಿಗೆ ಎನ್ನುವ ಧೋರಣೆ ಬೇಡ. ಈಗ ಜೀವನ ಚೆನ್ನಾಗಿರುತ್ತೆ. ಆದರೆ ಅನಾರೋಗ್ಯ, ಉದ್ಯೋಗನಷ್ಟ ಇತ್ಯಾದಿ ಅನಿರೀಕ್ಷಿತ ವೆಚ್ಚ ಬಂದಾಗ ಕಷ್ಟವಾಗುತ್ತೆ.

ಅನಿರೀಕ್ಷಿತ ವೆಚ್ಚಕ್ಕೆ ಸಿದ್ಧವಿಲ್ಲ

(Pic credit: Google)

ಆರು ತಿಂಗಳ ವೆಚ್ಚವನ್ನು ಎಮರ್ಜೆನ್ಸಿ ಖರ್ಚಿಗೆಂದು ಎತ್ತಿ ಇಟ್ಟಿರಿ. ತಿಂಗಳಿಗೆ ನಿಮ್ಮ ಖರ್ಚು 50,000 ರೂ ಇದ್ದರೆ ತುರ್ತು ನಿಧಿಯಾಗಿ 3 ಲಕ್ಷ ರೂ ತೆಗೆದಿಡಿ.

ಎಮರ್ಜೆನ್ಸಿ ನಿಧಿ

(Pic credit: Google)

ಸಂಬಳವೊಂದೇ ನಿಮಗೆ ಆದಾಯ ಮೂಲ ಆಗಿದ್ದರೆ ಕಷ್ಟವಾಗುತ್ತದೆ. ಬೇಗನೇ ಸಾಲಕ್ಕೆ ಸಿಲುಕಬೇಕಾದೀತು. ನಿಮ್ಮ ಆದಾಯ ಮೂಲ ಹೆಚ್ಚಿಸಿ, ವೆಚ್ಚ ಕಡಿತಗೊಳಿಸಿ.

ಸಂಬಳ ಜೀವನ

(Pic credit: Google)

ಸುಲಭವಾಗಿ ಸಿಗುತ್ತದೆಂದು ಸಾಲ ಪಡೆಯುವುದು, ಅನಗತ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಸಾಲ ಹೊರೆಯಾಗುತ್ತದೆ. ನಿಮ್ಮ ವೆಚ್ಚದ ಮೇಲೆ ಸದಾ ಕಣ್ಣಿರಲಿ.

ಸಾಲದ ಹೊರೆ

(Pic credit: Google)

ಹಣದುಬ್ಬರ ಪರಿಣಾಮವಾಗಿ ಈಗಿರುವ ರುಪಾಯಿ ಮೌಲ್ಯ ಮುಂದೆ ಇರುವುದಿಲ್ಲ. ಅದಕ್ಕೆ ಅನುಗುಣವಾಗಿ ನೀವು ನಿಮ್ಮ ಉಳಿತಾಯ ಹಣ ಹೂಡಿಕೆ ಮಾಡಿರಿ.

ಭವಿಷ್ಯ ಗಮನದಲ್ಲಿರಲಿ

(Pic credit: Google)

ನೀವು ವೃತ್ತಿ ಆರಂಭದ ದಿನದಿಂದಲೇ ನಿವೃತ್ತಿ ಕಾಲದ ನಿಧಿಗೆ ಆಲೋಚನೆ ಮಾಡಬೇಕು. ವಯಸ್ಸಾದ ಕಾಲದಲ್ಲಿ ಹಣಕಾಸು ಸಮಸ್ಯೆ ಇದ್ದರೆ ಅದಕ್ಕಿಂತ ಹಿಂಸೆ ಮತ್ತೊಂದಿಲ್ಲ.

ನಿವೃತ್ತಿ ಪ್ಲಾನಿಂಗ್

(Pic credit: Google)

ಯಾರಿಗೆ ಯಾವಾಗ ಅನಾರೋಗ್ಯ ಸಂಭವಿಸುತ್ತದೋ ಗೊತ್ತಿಲ್ಲ. ಗಂಭೀರ ಕಾಯಿಲೆಗೆ ಹಲವು ಲಕ್ಷಗಳೇ ಬೇಕಾಗುತ್ತದೆ. ಹೀಗಾಗಿ, ನೀವು ಹೆಲ್ತ್ ಇನ್ಷೂರೆನ್ಸ್ ಹೊಂದಿರುವುದು ಮುಖ್ಯ.

ಇನ್ಷೂರೆನ್ಸ್ ಕವರೇಜ್

(Pic credit: Google)

ನಿಮ್ಮ ಹೂಡಿಕೆಯನ್ನು ಒಂದು ವರ್ಷದಲ್ಲಿ ಡಬಲ್ ಮಾಡಿಕೊಡುತ್ತೇವೆ ಎಂಬಿತ್ಯಾದಿ ಪ್ರಲೋಬನೆ ಒಡ್ಡುವ ಕಂಪನಿಗಳ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳದಿರಿ. ವಿಶ್ವಾಸಾರ್ಹ ಸ್ಥಳದಲ್ಲಿ ಹೂಡಿಕೆ ಇರಲಿ.

ಮರುಳಾಗದಿರಿ

(Pic credit: Google)

ಯಾವ ರೀತಿ ಹಣ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಗೊಂದಲವಾಗಿದ್ದಲ್ಲಿ ವೃತ್ತಿಪರ ಸಲಹೆಗಾರರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಿ.

ಸಲಹೆಗಾರರ ಸಹಾಯ

(Pic credit: Google)