14 Nov 2024
Pic credit: Google
Vijayasarathy SN
Pic credit: Google
ನವೆಂಬರ್ 14, ಮಕ್ಕಳ ದಿನಾಚರಣೆ; ಸಣ್ಣ ಮಕ್ಕಳಲ್ಲಿ ಹಣಕಾಸು ಅರಿವು ಮೂಡಿಸುವುದು ನಾವು ಮಾಡುವ ಅತ್ಯುತ್ತಮ ಕೆಲಸ. ಜೊತೆಗೆ ಅವರ ಭವಿಷ್ಯ ಭದ್ರತೆ ಸಹಾಯವಾಗುವ ಯೋಜನೆಗಳನ್ನೂ ಆರಂಭಿಸಬಹುದು.
Pic credit: Google
ನಿಮಗೆ ಹೆಣ್ಮಗು ಇದ್ದರೆ ಈ ಸ್ಕೀಮ್ ಖಂಡಿತ ಉಪಯುಕ್ತ. ಸರ್ಕಾರದ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಲ್ಲೇ ಇದು ಗರಿಷ್ಠ ಬಡ್ಡಿ ಕೊಡುವಂಥದ್ದು. 10 ವರ್ಷದೊಳಗಿನ ಮಗುವಿನ ಹೆಸರಿನಲ್ಲಿ ಆರಂಭಿಸಬಹುದು. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.
Pic credit: Google
ಬಿಪಿಎಲ್ ಕುಟುಂಬಗಳಲ್ಲಿನ ಹೆಣ್ಮಕ್ಕಳಿಗೆಂದು ಇರುವ ಯೋಜನೆ ಇದು. ಹತ್ತನೇ ತರಗತಿಯವರೆಗೂ ಬಾಲಕಿಯ ಶಾಲಾ ಶಿಕ್ಷಣದ ವೆಚ್ಚಕ್ಕೆ ಸರ್ಕಾರ 1,000 ರೂವರೆಗೂ ಸಹಾಯ ನೀಡುತ್ತದೆ.
Pic credit: Google
ನಿಮ್ಮ ಮಗುವಿನ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯಬಹುದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. 15 ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಇದನ್ನು ಆರಂಭಿಸಬಹುದು.
Pic credit: Google
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅನ್ನು ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದು. ಕನಿಷ್ಠ ಹೂಡಿಕೆ ವರ್ಷಕ್ಕೆ 1,000 ರೂ ಇದೆ. ಗರಿಷ್ಠಕ್ಕೆ ಮಿತಿ ಇಲ್ಲ. ಐದು ವರ್ಷದವರೆಗೆ ಹೂಡಿಕೆ ಸಾಧ್ಯ. 10 ವರ್ಷ ಮೇಲ್ಪಟ್ಟವರ ಹೆಸರಲ್ಲಿ ಆರಂಭಿಸಬಹುದು.
Pic credit: Google
ಸಣ್ಣ ಉಳಿತಾಯ ಯೋಜನೆಯಾದ ಕಿಸಾನ್ ವಿಕಾಸ್ ಪತ್ರ ಸ್ಕೀಮ್ನಲ್ಲಿ ವರ್ಷಕ್ಕೆ ಕನಿಷ್ಠ 1,000 ರೂ ಇದೆ. 115 ತಿಂಗಳಲ್ಲಿ, ಅಂದರೆ 10 ವರ್ಷಕ್ಕೆ ಮುಂಚೆ ಇದು ಮೆಚ್ಯೂರ್ ಆಗುತ್ತದೆ.
Pic credit: Google
ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ಗಳು ಇನ್ಷೂರೆನ್ಸ್ ಮತ್ತು ಹೂಡಿಕೆ ಹೀಗೆ ಟು ಇನ್ ಒನ್ ಬೆನಿಫಿಟ್ ನೀಡುತ್ತವೆ. ಮಕ್ಕಳು ದೊಡ್ಡವರಾಗುವುದರೊಳಗೆ ಇವು ಸಾಕಷ್ಟು ಸೇವಿಂಗ್ಸ್ ತಂದಿರುತ್ತವೆ.