ದುಬೈ, ಸಿಂಗಾಪುರ್​ಗಿಂತಲೂ ಭಾರತದಲ್ಲಿ ಚಿನ್ನದ ದರ ಕಡಿಮೆ

17 Nov 2024

Pic: Getty images

Vijayasarathy SN

ಭಾರತದಲ್ಲಿ ಚಿನ್ನದ ಬೆಲೆ ಕಳೆದ ಎರಡು ವಾರಗಳಿಂದ ನಿರಂತರವಾಗಿ ಇಳಿಕೆ ಆಗುತ್ತಿದೆ. ಅಮೆರಿಕ ಮೊದಲಾದೆಡೆಯೂ ಚಿನ್ನ ಅಗ್ಗವಾಗುತ್ತಿರುವ ಟ್ರೆಂಡ್ ಇದೆ.

Pic: Getty images

ಆದರೆ, ಭಾರತೀಯ ಸಮುದಾಯದವರು ಹಲವರಿರುವ ದುಬೈ, ಅಬುಧಾಬಿ, ಶಾರ್ಜಾ ನಗರಗಳಿರುವ ಯುಎಇ, ಓಮನ್, ಕತಾರ್, ಸಿಂಗಾಪುರ್ ದೇಶಗಳಲ್ಲಿ ಚಿನ್ನದ ಬೆಲೆ ಏರುತ್ತಿದೆ.

Pic: Getty images

ಜಾಗತಿಕವಾಗಿ ಚಿನ್ನದ ಬೆಲೆ ಇಳಿಕೆಯ ಟ್ರೆಂಡ್ ಇದ್ದರೆ, ಯುಎಇ, ಓಮನ್, ಕತಾರ್ ಮತ್ತು ಸಿಂಗಾಪುರದಲ್ಲಿ ಮಾತ್ರ ಏರಿಕೆ ಟ್ರೆಂಡ್ ಇರುವುದು ಕುತೂಹಲ ಮೂಡಿಸಿದೆ.

Pic: Getty images

ಇಸ್ರೇಲ್ ಜೊತೆಗೆ ಮಧ್ಯಪ್ರಾಚ್ಯ ದೇಶಗಳು ಸಂಘರ್ಷಕ್ಕೆ ಇಳಿದಿರುವುದರಿಂದ ಈ ಭಾಗದಲ್ಲಿ ಸೂಕ್ಷ್ಮ ವಾತಾವರಣ ನೆಲಸಿದೆ. ಈ ಕಾರಣಕ್ಕೆ ಇಲ್ಲಿಯ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ.

Pic: Getty images

ಸೂಕ್ಷ್ಮ ವಾತಾವರಣದಂತಹ ಸಂದರ್ಭಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಚಿನ್ನವನ್ನು ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಅಲ್ಲಿ ಚಿನ್ನಕ್ಕೆ ಈಗ ಬೇಡಿಕೆ ಹೆಚ್ಚಿದೆ.

Pic: Getty images

ಗಲ್ಫ್ ದೇಶಗಳಲ್ಲಿ ಅಧಿಕ ಆಮದು ಬೆಲೆ ಇರುವುದು, ಹಾಗೂ ವಿನಿಮಯ ದರಗಳಲ್ಲಿನ ವ್ಯತ್ಯಾಸ, ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ಇವೆಲ್ಲವೂ ಚಿನ್ನದ ಬೆಲೆ ಹೆಚ್ಚಿಸುವಂತೆ ಮಾಡಿದೆ.

Pic: Getty images

ಜಾಗತಿಕವಾಗಿ ಚಿನ್ನದ ಬೆಲೆ ಎರಡು ವಾರದಿಂದ ಇಳಿಕೆಯಾದರೂ ಈ ವರ್ಷ ಒಟ್ಟಾರೆಯಾಗಿ ಚಿನ್ನದ ಬೆಲೆ ಶೇ. 24ರಷ್ಟು ಹೆಚ್ಚಳದಲ್ಲಿದೆ. ಆರ್​ಬಿಐ ಇತ್ಯಾದಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಭರಾಟೆಯಲ್ಲಿರುವುದು ಇದಕ್ಕೆ ಕಾರಣ.

Pic: Getty images