ಡಿಜಿಪಾಸ್ಬುಕ್: ಎಲ್ಲಾ ಸೇವಿಂಗ್ಸ್, ಇನ್ವೆಸ್ಟ್ಮೆಂಟ್ ಡಾಟಾ ಒಂದೇ ಕಡೆ
01 Sep 2024
Pic credit: Google
Vijayasarathy SN
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಸ್ಮಾರ್ಟ್ ವೆಲ್ತ್ ಆ್ಯಪ್ನಲ್ಲಿ ಡಿಜಿಪಾಸ್ಬುಕ್ ಎನ್ನೋ ಹೊಸ ಫೀಚರ್ ಆರಂಭಿಸಿದೆ. ಇದು ಒಬ್ಬ ವ್ಯಕ್ತಿಯ ಎಲ್ಲಾ ಹೂಡಿಕೆ, ಉಳಿತಾಯಗಳ ದತ್ತಾಂಶ ನೀಡುತ್ತದೆ.
Pic credit: Google
ನೀವು ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀರಿ, ಯಾವ್ಯಾವ ಬ್ಯಾಂಕ್ಗಳಲ್ಲಿ ಎಷ್ಟೆಷ್ಟು ಬ್ಯಾಲನ್ಸ್ ಹೊಂದಿದ್ದೀರಿ, ಸಾಲ ಎಷ್ಟಿದೆ, ಷೇರುಗಳೆಷ್ಟಿವೆ, ಮ್ಯೂಚುವಲ್ ಫಂಡ್ ಹೂಡಿಕೆ ಎಲ್ಲ ಮಾಹಿತಿ ಇಲ್ಲಿರುತ್ತದೆ.
Pic credit: Google
ಎಲ್ಲಾ ಹೂಡಿಕೆಗಳು, ಸೇವಿಂಗ್ಸ್ಗಳ ಮಾಹಿತಿಯನ್ನು ಇದು ಪಡೆಯಲು ಪ್ಯಾನ್ ಕಾರ್ಡ್ ಅನ್ನು ಬಳಸುತ್ತದೆ. ಪ್ಯಾನ್ ಕಾರ್ಡ್ ಇಲ್ಲದೇ ನಡೆಯುವ ವ್ಯವಹಾರಗಳು, ಹೂಡಿಕೆಗಳ ಮಾಹಿತಿ ಇಲ್ಲಿ ಸಿಗುವುದಿಲ್ಲ.
Pic credit: Google
ಉದಾಹರಣೆಗೆ, ನೀವು ಹಿಂದೆ ಯಾವುದಾದರೂ ಇನ್ಷೂರೆನ್ಸ್ ಮಾಡಿಸಿದ್ದಾಗ ಪ್ಯಾನ್ ಕಾರ್ಡ್ ನೀಡದೇ ಇದ್ದಿರಬಹುದು. ಆ ಇನ್ಷೂರೆನ್ಸ್ನ ಮಾಹಿತಿ ಡಿಜಿ ಪಾಸ್ಬುಕ್ನಲ್ಲಿ ಸಿಗದೇ ಹೋಗಬಹುದು.
Pic credit: Google
ಪರ್ಸನಲ್ ಲೋನ್, ಹೋಮ್ ಲೋನ್ ಇತ್ಯಾದಿಯ ಮಾಹಿತಿಯನ್ನು ಇದು ಕ್ರೋಢೀಕರಿಸುತ್ತದೆ. ಆದರೆ, ಗೋಲ್ಡ್ ಲೋನ್, ಸಣ್ಣ ಪುಟ್ಟ ಕೈಸಾಲ ಇವುಗಳ ಮಾಹಿತಿ ಈ ಆ್ಯಪ್ನಲ್ಲಿ ತೋರದೇ ಹೋಗಬಹುದು.
Pic credit: Google
ಉಳಿತಾಯ ಎಷ್ಟು, ಹೂಡಿಕೆಗಳೆಷ್ಟು, ಅವುಗಳ ಈಗಿನ ಮೌಲ್ಯವೆಷ್ಟು, ಸಾಲಗಳೆಷ್ಟು, ನಿಮ್ಮ ನೆಟ್ ಇನ್ಕಮ್ ಎಷ್ಟು ಎನ್ನುವ ಒಂದು ಅಂದಾಜು ಚಿತ್ರಣ ಸ್ಮಾರ್ಟ್ವೆಲ್ತ್ನ ಡಿಜಿಪಾಸ್ಬುಕ್ನಲ್ಲಿ ಕಾಣುತ್ತದೆ.
Pic credit: Google
ಇದೇ ಎಚ್ಡಿಎಫ್ಸಿ ಬ್ಯಾಂಕ್ನ ಸ್ಮಾರ್ಟ್ವೆಲ್ತ್ ಆ್ಯಪ್ನಲ್ಲಿ ನೀವು ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ ಹೂಡಿಕೆ ಮಾಡಬಹುದು. ಎಫ್ಡಿಗಳಲ್ಲಿ ಠೇವಣಿ ಇಡಬಹುದು.