28 Aug 2024
Pic credit: Google
ಪಿಎಂ ಜನ್ ಧನ್ ಖಾತೆಗಳಿಂದ ಅನುಕೂಲವೇನು?
Vijayasarathy SN
2014ರ ಆಗಸ್ಟ್ 28ರಂದು ಕೇಂದ್ರ ಸರ್ಕಾರ ಪಿಎಂ ಜನ್ ಧನ್ ಯೋಜನೆ ಘೋಷಿಸಿತು. ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾದ ಜನರಿಗೆ ಬ್ಯಾಂಕ್ ಖಾತೆ ತೆರೆಸುವುದು ಈ ಸ್ಕೀಮ್ ಉದ್ದೇಶ.
Pic credit: Google
10 ವರ್ಷದ ಹಿಂದೆ
ಹತ್ತು ವರ್ಷದಲ್ಲಿ ಇಲ್ಲಿಯವರೆಗೆ 53 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳು ಆರಂಭಗೊಂಡಿವೆ. ಎರಡು ಲಕ್ಷ ಕೋಟಿ ರೂಗೂ ಹೆಚ್ಚು ಹಣದ ಡೆಪಾಸಿಟ್ ಈ ಖಾತೆಗಳಿಗೆ ಆಗಿದೆ.
Pic credit: Google
53 ಕೋಟಿ ಖಾತೆ
ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ ಪಡೆಯುವವರು ಈಗಾಗಲೇ ಬೇರೆ ಬ್ಯಾಂಕ್ ಖಾತೆ ಹೊಂದಿರುವಂತಿಲ್ಲ. ಯೋಜನೆ ಉದ್ದೇಶವೇ ಬ್ಯಾಂಕ್ ವ್ಯಾಪ್ತಿಗೆ ಹೊಸಬರನ್ನು ತರುವುದಾಗಿದೆ.
Pic credit: Google
ಬೇರೆ ಖಾತೆ ಇರುವಂತಿಲ್ಲ
ಜನ್ ಧನ್ ಖಾತೆಯನ್ನು ಆರ್ಬಿಐ ನಿಯಂತ್ರಣಕ್ಕೊಳಪಟ್ಟ ಯಾವುದೇ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಆರಂಭಿಸಬಹುದು. ಇಂಥದ್ದೇ ಬ್ಯಾಂಕ್ ಎಂಬ ಸೀಮಿತತೆ ಇರುವುದಿಲ್ಲ.
Pic credit: Google
ಯಾವುದೇ ಬ್ಯಾಂಕ್...
ಜನ್ ಧನ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಪಾಲಿಸಬೇಕೆಂಬ ನಿಯಮ ಇಲ್ಲ. ಖಾತೆಯಲ್ಲಿ ಯಾವುದೇ ಹಣ ಇರದೇ ಹೋದರೂ ಯಾವ ದಂಡ ಕಟ್ಟಬೇಕಿಲ್ಲ. ಇದು ಬೇಸಿಕ್ ಎಸ್ಬಿ ಖಾತೆಯಾಗಿರುತ್ತದೆ.
Pic credit: Google
ಶೂನ್ಯ ಬ್ಯಾಲನ್ಸ್
ಜನ್ ಧನ್ ಖಾತೆ ಮಾಡಿಸಿದರೆ ಅದರೊಟ್ಟಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ ಎರಡು ಲಕ್ಷ ರೂವರೆಗೆ ಅಪಘಾತ ವಿಮೆ ಸೌಲಭ್ಯ ಸಿಗುತ್ತದೆ.
Pic credit: Google
ಅಪಘಾತ ವಿಮೆ
ಜನ್ ಧನ್ ಖಾತೆಗಳನ್ನು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಬಳಸಬಹುದು. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ಗೆ ಈ ಖಾತೆಗಳು ಅರ್ಹವಾಗಿರುತ್ತವೆ.
Pic credit: Google
ಡಿಬಿಟಿ ಸೌಲಭ್ಯ
Next: ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸುವುದು ಹೇಗೆ?
ಇನ್ನಷ್ಟು ನೋಡಿ