ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಸಿಇಒಗಳು
By: Vijayasarathy SN
05 Dec 2023
1. ಸುಂದರ್ ಪಿಚೈ
ಗೂಗಲ್ ಮತ್ತು ಆಲ್ಫಬೆಟ್ನ ಸಿಇಒ ಆಗಿರುವ ಸುಂದರ್ ಪಿಚೈ ಒಂದು ವರ್ಷದ ಸಂಬಳ 1,854 ಕೋಟಿ ರೂ. ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಸಿಇಒ ಇವರು.
(Pic credit: Google)
2. ಸತ್ಯ ನಾದೆಲ್ಲ
ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲ ಅವರ ವಾರ್ಷಿಕ ಸಂಬಳ ಸುಮಾರು 415 ಕೋಟಿ ರೂ ಇದೆ. ಕರ್ನಾಟಕದ ಮಣಿಪಾಲದಲ್ಲಿ ಓದಿದವರು ಇವರು.
(Pic credit: Google)
3. ಜೈ ಚೌಧರಿ
ಹಿಮಾಚಲದ ಕುಗ್ರಾಮದಿಂದ ಬೆಳೆದು ಈಗ Zscaler ಸಂಸ್ಥೆಯ ಸಿಇಒ ಆಗಿರುವ ಜೈ ಚೌಧರಿ ಅವರ ಒಂದು ವರ್ಷದ ಸಂಬಳ 346 ಕೋಟಿ ರೂ ಇದೆ.
(Pic credit: Google)
4. ಅನಿರುದ್ಧ್ ದೇವಗನ್
ಕ್ಯಾಡೆನ್ಸ್ ಡಿಸೈನ್ಸಿಸ್ಟಮ್ಸ್ ಸಂಸ್ಥೆಯ ಸಿಇಒ ಆಗಿರುವ ಅನಿರುದ್ಧ್ ದೇವಗನ್ ವಾರ್ಷಿಕ ಸಂಬಳ 268 ಕೋಟಿ ರೂ ಇದೆ. ಇವರು ದೆಹಲಿ ಮೂಲದವರು.
(Pic credit: Google)
5. ಶಾಂತನು ನಾರಾಯಣ್
ಅಡೋಬ್ ಸಂಸ್ಥೆಯ ಸಿಇಒ ಆಗಿರುವ ಹೈದರಾಬಾದ್ ಮೂಲದ ಶಾಂತನು ನಾರಾಯಣ್ ಅವರ ಒಂದು ವರ್ಷದ ಸಂಬಳ 300 ಕೋಟಿ ರೂ ಇದೆ.
(Pic credit: Google)
6. ಅಜೇಯ್ ಗೋಪಾಲ್
ಅಮೆರಿಕದ ANSYS ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಅಜೇಯ್ ಎಸ್ ಗೋಪಾಲ್ (Ajei S Gopal) ಅವರ ವಾರ್ಷಿಕ ಸಂಬಳ 175 ಕೋಟಿ ರೂ ಇದೆ.
(Pic credit: Google)
7. ಅರವಿಂದ್ ಕೃಷ್ಣ
ಐಬಿಎಂ ಸಂಸ್ಥೆಯ ಸಿಇಒ ಅರವಿಂದ್ ಕೃಷ್ಣ ಒಂದು ವರ್ಷದಲ್ಲಿ ಪಡೆಯುವ ಸಂಬಳ 137 ಕೋಟಿ ರೂನಷ್ಟಿದೆ. ಇವರು ಆಂಧ್ರ ಮೂಲದವರು.
(Pic credit: Google)
ಟಾಟಾ ಸಂಬಳ
ಭಾರತೀಯ ಕಂಪನಿಗಳ ಪೈಕಿ ಟಾಟಾ ಗ್ರೂಪ್ ಸಂಸ್ಥೆಯ ಛೇರ್ಮನ್ಗೆ ಅತಿಹೆಚ್ಚು ಸಂಬಳ ಸಿಗುತ್ತದೆ. ಎನ್ ಚಂದ್ರಶೇಖರನ್ ಸಂಬಳ 113 ಕೋಟಿ ರೂ.
(Pic credit: Google)
Next: ನಾಡಿನ ಪ್ರಗತಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆಗಳಿವು
ಇನ್ನಷ್ಟು ನೋಡಿ