16 Aug 2024

Pic credit: Google

ಚೀನಾಗೆ ನೆಹರೂ ಕೊಟ್ಟ ಮ್ಯಾಂಗೋ ಗಿಫ್ಟ್ ಭಾರತಕ್ಕೆ ತಿರುಗುಬಾಣ

Vijayasarathy SN

ಜಾಗತಿಕವಾಗಿ ಅತಿಹೆಚ್ಚು ಮಾವಿನ ಹಣ್ಣು ಬೆಳೆಯುವುದು ಭಾರತದಲ್ಲಿ. ಶೇ. 40ರಷ್ಟು ಮಾವು ಇಲ್ಲಿ ಬೆಳೆಯಲಾಗುತ್ತದೆ. ಮಾವಿನ ಹಣ್ಣಿನ ರಫ್ತಿನಲ್ಲಿ ಭಾರತ ನಂ. 1 ಅಲ್ಲ.

Pic credit: Google

1950ರ ದಶಕದವರೆಗೂ ತೀರಾ ವಿರಳವಾಗಿ ಚೀನಾದಲ್ಲಿ ಮಾವಿನ ಹಣ್ಣು ಬೆಳೆಯಲಾಗುತ್ತಿತ್ತು. ಈಗ್ಗೆ ಎರಡು ವರ್ಷಗಳಿಂದ ಮಾವಿನ ರಫ್ತಿನಲ್ಲಿ ಭಾರತವನ್ನು ಚೀನಾ ಹಿಂದಿಕ್ಕಿದೆ.

Pic credit: Google

ಭಾರತೀಯ ತಳಿಯ ಮಾವಿನ ಹಣ್ಣುಗಳನ್ನು ಚೀನಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಭಾರತಕ್ಕಿದ್ದ ಮಾರುಕಟ್ಟೆಯನ್ನು ಚೀನಾದ ಹಣ್ಣುಗಳು ಆಕ್ರಮಿಸಿಕೊಂಡಿವೆ. ಹೀಗಾಗಿ, ರಫ್ತು ಪೈಪೋಟಿಯಲ್ಲಿ ಚೀನಾ ಮೇಲುಗೈ ಸಾಧಿಸಿದೆ.

Pic credit: Google

ಐವತ್ತರದ ದಶಕದ ಆರಂಭದಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಚೀನಾ ಪ್ರಧಾನಿ ಝೋ ಎನ್​ಲಾಯ್ ಅವರಿಗೆ ಎಂಟು ಮಾವಿನ ಗಿಡಗಳನ್ನು ಉಡುಗೊರೆಯಾಗಿ ಕಳುಹಿಸಿದ್ದರು.

Pic credit: Google

ನೆಹರೂ ಗಿಫ್ಟ್ ಆಗಿ ಕಳುಹಿಸಿದ ಮಾವಿನ ಗಿಡಗಳು ಚೀನಾದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯಬಲ್ಲಂಥವು. ಹೈನನ್, ಗ್ವಾಂಗ್​ಡೋಂಗ್ ಮೊದಲಾದ ಚೀನೀ ಪ್ರಾಂತ್ಯಗಳಲ್ಲಿ ಈ ತಳಿಯ ಮಾವಿನ ಮರಗಳು ಚೆನ್ನಾಗಿ ಬೆಳೆಯುತ್ತಿವೆ.

Pic credit: Google

2022ರಲ್ಲಿ ಚೀನಾದಿಂದ ಆದ ಮಾವಿನ ರಫ್ತು 61.91 ಮಿಲಿಯನ್ ಡಾಲರ್. ಭಾರತದ್ದು 45.76 ಮಿಲಿಯನ್ ಡಾಲರ್. 2023ರಲ್ಲಿ ಅದು ಕ್ರಮವಾಗಿ 59.43 ಮತ್ತು 55.94 ಮಿಲಿಯನ್ ಡಾಲರ್ ಮೊತ್ತದ ರಫ್ತು. 

Pic credit: Google

ದಶೇರಿ, ಆಲ್ಫೋನ್ಸೋ, ಕೇಸರ್, ಲಾಂಗ್ರ ಮೊದಲಾದ ಭಾರತೀಯ ತಳಿಗಳ ಮಾವಿನ ಹಣ್ಣನ್ನು ಚೀನಾದಲ್ಲಿ ಬೆಳೆಯಲಾಗುತ್ತಿದೆ. ಇವುಗಳು ಭಾರತಕ್ಕೂ ರಫ್ತಾಗುತ್ತವೆ ಎಂಬುದು ಸೋಜಿಗ.

Pic credit: Google