ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ನಿಂತು ತಮ್ಮ 11ನೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹುತಾತ್ಮರನ್ನು ಸ್ಮರಿಸಿದರು.
ವಿಕಸಿತ ಭಾರತದ ಗುರಿ
Pic credit: PTI
ಸ್ಕಿಲ್ ಇಂಡಿಯಾದಿಂದ ಹಿಡಿದು ಭ್ರಷ್ಟಾಚಾರ ನಿಗ್ರಹದವರೆಗೆ ವಿವಿಧ ವಿಚಾರಗಳ ಬಗ್ಗೆ ಮೋದಿ ಮಾತನಾಡಿದರು. 2047ರ ವಿಕಸಿತ ಭಾರತದ ಗುರಿ ಸಾಧನೆಗೆ ಜನಸಾಮಾನ್ಯರು ನೀಡಿದ ಸಲಹೆಗಳನ್ನು ಉಲ್ಲೇಖಿಸಿದರು.
ಜನಸಾಮಾನ್ಯರ ನಿರೀಕ್ಷೆಗಳು
Pic credit: PTI
ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿಗಳು ವಿಕಸಿತ ಭಾರತಕ್ಕೆ ಜನಸಾಮಾನ್ಯರು ತಿಳಿಸಿದ ಕೆಲ ಪ್ರಮುಖ ನಿರೀಕ್ಷೆಗಳು ಮತ್ತು ಸಲಹೆಗಳೇನು ಎಂಬ ವಿವರ ಮುಂದಿನ 3 ಸ್ಲೈಡ್ಗಳಲ್ಲಿವೆ.
ಜನಸಾಮಾನ್ಯರ ನಿರೀಕ್ಷೆ 1
Pic credit: PTI
ಭಾರತವು ವಿಶ್ವದ ಕೌಶಲ್ಯ ಕೇಂದ್ರ ಆಗಬೇಕು. ವಿಶ್ವದ ಶಿಕ್ಷಣ ಕೇಂದ್ರವಾಗಬೇಕು. ಜಾಗತಿಕ ಮಾಧ್ಯಮ ಕೇಂದ್ರವಾಗಬೇಕು. ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗಬೇಕು.
ಜನಸಾಮಾನ್ಯರ ನಿರೀಕ್ಷೆ 2
Pic credit: PTI
ಭಾರತ ಆತ್ಮನಿರ್ಭರತೆ ಅಥವಾ ಸ್ವಾವಲಂಬನೆ ಸಾಧಿಸಬೇಕು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬೇಕು. ಆರೋಗ್ಯಕಾಳಜಿಯಲ್ಲಿ ಉನ್ನತಿ ಸಾಧಿಸಬೇಕು.
ಜನಸಾಮಾನ್ಯರ ನಿರೀಕ್ಷೆ 3
Pic credit: PTI
ಆಡಳಿತ ಮತ್ತು ನ್ಯಾಯಾಂಗ ಸುಧಾರಣೆಗಳಾಗಬೇಕು. ಸ್ವಂತ ಬಾಹ್ಯಾಕಾಶ ಕೇಂದ್ರ ಹೊಂದಿರಬೇಕು. ಹಸಿರುಹೊದಿಕೆಯ ನಗರಗಳ ಸಂಖ್ಯೆ ಹೆಚ್ಚಾಗಬೇಕು. ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಕ್ಷಮತೆ ಹೆಚ್ಚಬೇಕು.
ಮೋದಿ ಭಾಷಣ
Pic credit: PTI
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ವಿಕಸಿತ ಭಾರತದ ಗುರಿಸಾಧನೆ ಈಡೇರಿಕೆಗೆ ಮೇಲಿನ ಜನಸಾಮಾನ್ಯರ ಸಲಹೆಗಳನ್ನು ವ್ಯಕ್ತಪಡಿಸಿದರು.