ಎಚ್ಎಸ್ಆರ್ಪಿ ಎಂದರೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್. ವಾಹನ ಮತ್ತು ರಸ್ತೆ ಸುರಕ್ಷೆ ದೃಷ್ಟಿಯಿಂದ ಅಳವಡಿಸಿರುವ ಪ್ರಬಲ ಸೆಕ್ಯೂರಿಟಿ ಫೀಚರ್ ಇದಾಗಿದೆ.
ಏನಿದು ಎಚ್ಎಸ್ಆರ್ಪಿ?
Pic credit: Google
2019ರ ಏಪ್ರಿಲ್ ಬಳಿಕ ಖರೀದಿಸಿದ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಆಗಿರುತ್ತದೆ. ಅದಕ್ಕೆ ಮುಂಚೆ ಖರೀದಿಸಿದ ವಾಹನಗಳಿಗೆ ಈ ಹೊಸ ಪ್ಲೇಟ್ ಹಾಕಿಸಬೇಕು. 2024ರ ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಯಾವ ವಾಹನಗಳಿಗೆ?
Pic credit: Google
ಎಚ್ಎಸ್ಆರ್ಪಿಯಲ್ಲಿ ಹಳೆಯ ವಾಹನ ನೊಂದಣಿ ನಂಬರ್ ಅನ್ನೇ ಹಾಕಲಾಗುತ್ತದೆ. ಆದರೆ, ವಿಶೇಷ ಐಡಿ ಕೋಡ್ ಮತ್ತು ಹೋಲೋಗ್ರಾಮ್ ಹೆಚ್ಚುವರಿಯಾಗಿರುತ್ತದೆ. ಇದನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ.
ಹೋಲೋಗ್ರಾಂ
Pic credit: Google
ಐಡಿ ಕೋಡ್ ಮತ್ತು ಹೋಲೋಗ್ರಾಮ್ ಇರುವ ವಾಹನವನ್ನು ಲೇಸರ್ ವ್ಯವಸ್ಥೆ ಮೂಲಕ ಸುಲಭವಾಗಿ ಪರಿಶೀಲಿಸಬಹುದು, ಟ್ರ್ಯಾಕ್ ಮಾಡಬಹುದು. ವಾಹನ ದುರುಪಯೋಗಿಸಿಕೊಂಡು ಕ್ರೈಮ್ ನಡೆಸಲು ಆಗೊಲ್ಲ.
ಅಕ್ರಮ ತಡೆ
Pic credit: Google
ಎಚ್ಎಸ್ಆರ್ಪಿಯಲ್ಲಿ ಯೂನಿಕ್ ಐಡಿ ಮತ್ತು ಹೋಲೋಗ್ರಾಂ ಹಾಕಿರುವುದರಿಂದ ವಾಹನ ಕಳುವಾದರೆ ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಹೋಲೋಗ್ರಾಂ ಸಮೇತ ನಂಬರ್ ಪ್ಲೇಟ್ ಬದಲಿಸಲು ಸಾಧ್ಯವಿಲ್ಲ.
ಕಳುವು ತಡೆ
Pic credit: Google
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಜೊತೆಗೆ ವಾಹನಗಳಿಗೆ ಕಲರ್ ಸ್ಟಿಕರ್ ಅಂಟಿಸಬೇಕು. ಪೆಟ್ರೋಲ್ ಮತ್ತು ಸಿಎನ್ಜಿ ವಾಹನಗಳಿಗೆ ಬ್ಲೂ ಸ್ಟಿಕರ್, ಡೀಸಲ್ ವಾಹನಗಳಿಗೆ ಆರೆಂಜ್ ಸ್ಟಿಕರ್, ಮತ್ತು ಇವಿಗಳಿಗೆ ಗ್ರೀನ್ ಸ್ಟಿಕರ್ ಹಾಕಬೇಕು.
ಕಲರ್ ಕೋಡ್
Pic credit: Google
ನೀವು 2024ರ ಸೆಪ್ಟೆಂಬರ್ 15ರೊಳಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದೇ ಹೋದರೆ 5,000ದಿಂದ 10,000ರೂವರೆಗೆ ದಂಡ ತೆರಬೇಕಾದೀತು. ಆನ್ಲೈನ್ನಲ್ಲಿ ಈಗಲೇ ನೀವು ಬುಕ್ ಮಾಡಿರಿ.