10 Oct 2023
By: Vijayasarathy SN
ಆಟೊಮೊಬೈಲ್ ಕ್ಷೇತ್ರದಲ್ಲಿರುವ ಬಜಾಜ್ ಕುಟುಂಬದ ನೀರಜ್ ಬಜಾಜ್ ಅವರ ಆಸ್ತಿ ಮೌಲ್ಯ 1,20,700 ಕೋಟಿ ರೂ. ಟಾಪ್ 10 ಶ್ರೀಮಂತರಲ್ಲಿ ಇವರಿದ್ದಾರೆ.
(Hurun India Rich List 2023)
ಖ್ಯಾತ ಬಿರ್ಲಾ ಕುಟುಂಬದ ಕುಮಾರಮಂಗಲಂ ಬಿರ್ಲಾ ಹೊಂದಿರುವ ಆಸ್ತಿಸಂಪತ್ತು 1,25,600 ಕೋಟಿ ರೂ. ಇವರು ಹುರೂನ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
(Hurun India Rich List 2023)
ಅವೆನ್ಯೂ ಸೂಪರ್ಮಾರ್ಟ್ಸ್ ಸಂಸ್ಥೆಯ ಅಧಿಪತಿ ರಾಧಾಕೃಷ್ಣ ದಾಮನಿ ಅವರು ಹೊಂದಿರುವ ಒಟ್ಟು ಆಸ್ತಿ ಮೌಲ್ಯ 1,43,900 ಕೋಟಿ ರೂ.
(Hurun India Rich List 2023)
ಉಕ್ಕು ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಲಕ್ಷ್ಮೀ ಮಿಟ್ಟಲ್ ಮತ್ತು ಕುಟುಂಬವು 1,62,300 ಕೋಟಿ ರೂ ಮೌಲ್ಯದ ಆಸ್ತಿಯೊಂದಿಗೆ 7ನೇ ಸ್ಥಾನದಲ್ಲಿದೆ.
(Hurun India Rich List 2023)
ಸನ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಮುಖ್ಯಸ್ಥ ದಿಲೀಪ್ ಶಾಂಘವಿ ಅವರು ಹೊಂದಿರುವ ಒಟ್ಟು ಆಸ್ತಿ 1,64,300 ಕೋಟಿ ರೂ ಮೌಲ್ಯದ್ದಾಗಿದೆ.
(Hurun India Rich List 2023)
ಹಿಂದೂಜಾ ಗ್ರೂಪ್ನ ಮುಖ್ಯಸ್ಥ ಗೋಪಿಚಂದ್ ಹಿಂದೂಜಾ ಮತ್ತು ಕುಟುಂಬ ಹೊಂದಿರುವ ಆಸ್ತಿ ಒಟ್ಟು 1,76,500 ಕೋಟಿ ರೂನಷ್ಟಿದೆ.
(Hurun India Rich List 2023)
ಐಟಿ ಸಂಸ್ಥೆ ಎಚ್ಸಿಎಲ್ ಟೆಕ್ನಾಲಜೀಸ್ನ ಸಂಸ್ಥಾಪಕ ಶಿವ್ ನಾದರ್ 2,28,900 ಕೋಟಿ ರೂ ಮೊತ್ತದ ಸಂಪತ್ತು ಹೊಂದಿದ್ದಾರೆ.
(Hurun India Rich List 2023)
ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆಯ ಸಂಸ್ಥಾಪಕ ಸೈರಸ್ ಎಸ್ ಪೂನಾವಾಲ ಅವರ ಆಸ್ತಿಮೌಲ್ಯ 2,78,500 ಕೋಟಿ ರೂ. ಇವರು ಭಾರತದ 3ನೇ ಶ್ರೀಮಂತರು.
(Hurun India Rich List 2023)
ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ 4,74,800 ಕೋಟಿ ರೂ ಮೊತ್ತದ ಆಸ್ತಿಯೊಂದಿಗೆ ಹುರೂನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
(Hurun India Rich List 2023)
ರಿಲಾಯನ್ಸ್ ಇಂಡಸ್ಟ್ರೀಸ್ ಒಡೆಯ ಮುಕೇಶ್ ಅಂಬಾನಿ 8,08,700 ಕೋಟಿ ರೂ ಮೊತ್ತದ ಆಸ್ತಿಯೊಂದಿಗೆ ಭಾರತದ ನಂಬರ್ ಒನ್ ಶ್ರೀಮಂತ ಎನಿಸಿದ್ದಾರೆ.
(Hurun India Rich List 2023)