ಎನ್ಬಿಎಫ್ಸಿ ಕಂಪನಿಯಾದ ಐಐಎಫ್ಎಲ್ ಫೈನಾನ್ಸ್ ಇಂದಿನಿಂದ 4 ದಿನ ಕಾಲ ಚಿನ್ನ ಸಾಲದ ಮೇಳ ಆಯೋಜಿಸಿದೆ. ಸೆ. 25ರಿಂದ 28ರವರೆಗೆ ದೆಹಲಿ ಗುರುಗ್ರಾಮ್ನಲ್ಲಿ ಈ ಮೇಳ ಆಗುತ್ತಿದೆ.
Pic: Getty images
ಬಡ್ಡಿ ಕಡಿಮೆ
ಐಐಎಫ್ಎಲ್ ಸಂಸ್ಥೆ ಚಿನ್ನದ ಸಾಲಕ್ಕೆ ತಿಂಗಳಿಗೆ ಶೇ. 1 ಬಡ್ಡಿ (ವರ್ಷಕ್ಕೆ ಶೇ. 12) ವಿಧಿಸುತ್ತದೆ. ಪ್ರೋಸಸಿಂಗ್ ಫೀ ಇಲ್ಲದೇ ಬಹಳ ಸುಲಭವಾಗಿ ಸಾಲ ವಿತರಿಸುತ್ತಿದೆ.
Pic: Getty images
ಎಲ್ಲೆಡೆ ಲಭ್ಯ
ದೇಶದ ಎಲ್ಲ ಕಡೆ ಇರುವ ಐಐಎಫ್ಎಲ್ ಶಾಖೆಗಳಲ್ಲಿ ಗೋಲ್ಡ್ ಲೋನ್ ನೀಡಲಾಗುತ್ತಿದೆ. ಅದರ ಗೋಲ್ಡ್ ಲೋನ್ ಬಿಸಿನೆಸ್ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಆರ್ಬಿಐ ತೆರವುಗೊಳಿಸಿದೆ.
Pic: Getty images
ಆನ್ಲೈನ್ನಲ್ಲೂ ಲಭ್ಯ
ಐಐಎಫ್ಎಲ್ನ ವೆಬ್ಸೈಟ್ಗೆ ಹೋಗಿ ಅಲ್ಲಿಂದಲೂ ನೀವು ಚಿನ್ನದ ಮೇಲಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಸ್ಥಳ, ಮೊಬೈಲ್ ನಂಬರ್ ನಮೂದಿಸಿದರೆ ಹೇಗೆ ಸಾಲ ಪಡೆಯಬಹುದು ಎನ್ನುವ ವಿವರ ಸಿಗುತ್ತದೆ.
Pic: Getty images
ಸುಲಭ ಸಾಲ
ಭಾರತದಲ್ಲಿ ಅತೀ ಸುಲಭವಾಗಿ ಸಿಗುವ ಸಾಲಗಳಲ್ಲಿ ಗೋಲ್ಡ್ ಲೋನ್ ಒಂದು. ನಿಮ್ಮ ಬಳಿ ಯಾವುದೇ ಚಿನ್ನದ ವಸ್ತು ಇದ್ದರೂ ಅದನ್ನು ಅಡವಾಗಿ ಇಟ್ಟುಕೊಂಡು ಸಾಲ ಪಡೆಯಬಹುದು.
Pic: Getty images
ಸೆಕ್ಯೂರ್ಡ್ ಲೋನ್
ಗೋಲ್ಡ್ ಲೋನ್ ಅನ್ನು ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಸೆಕ್ಯೂರ್ಡ್ ಲೋನ್ ಆಗಿ ಪರಿಗಣಿಸುವುದರಿಂದ ಬಡ್ಡಿದರ ಬಹಳ ಕಡಿಮೆ ಇರುತ್ತದೆ. ಬ್ಯಾಂಕುಗಳಿಗೂ ರಿಸ್ಕ್ ಇರುವುದಿಲ್ಲ.
Pic: Getty images
ಎಷ್ಟು ಸಿಗುತ್ತೆ?
ಪ್ರಸಕ್ತ ಚಿನ್ನದ ದರದ ಶೇ. 70ರಿಂದ 80ರವರೆಗಿನ ಮೌಲ್ಯದಷ್ಟು ಹಣವನ್ನು ಸಾಮಾನ್ಯವಾಗಿ ಸಾಲವಾಗಿ ನೀಡಲಾಗುತ್ತದೆ. ನಿಮ್ಮ ಬಳಿ 10 ಗ್ರಾಮ್ ಚಿನ್ನ ಇದ್ದರೆ 50,000 ರೂ ಸಾಲ ಸಿಗಬಹುದು.