ಇನ್ಷೂರೆನ್ಸ್ ಲ್ಯಾಪ್ಸ್ ಆದರೆ ಏನು ಮಾಡಬೇಕು?

16 Sep 2024

Pic: Getty images

Vijayasarathy SN

ಬೇರೆ ಬೇರೆ ಕಾರಣಗಳಿಗೆ ಇನ್ಷೂರೆನ್ಸ್ ಪಾಲಿಸಿ ಅಸಿಂಧುಗೊಳ್ಳಬಹುದು. ಸರಿಯಾದ ಕಾಲಕ್ಕೆ ಪ್ರೀಮಿಯಮ್ ಕಟ್ಟದೇ ಹೋದರೆ ದಂಡ ವಿಧಿಸಲಾಗುತ್ತದೆ. ಗ್ರೇಸ್ ಪೀರಿಯಡ್​ನೊಳಗೆಯೂ ಕಟ್ಟದಿದ್ದರೆ ಪಾಲಿಸಿ ಸ್ಥಗಿತಗೊಳ್ಳಬಹುದು.

ಪಾಲಿಸಿ ಸ್ಥಗಿತ

Pic: Getty images

ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆದರೆ ನೀವು ಕಟ್ಟಿರುವ ಆವರೆಗಿನ ಪ್ರೀಮಿಯಮ್ ಹಣವನ್ನು ಪಡೆಯಬಹುದು. ಆದರೆ ಆ ವಿಮೆಯ ವಿಶೇಷ ಪ್ರಯೋಜನಗಳು ಲಭ್ಯ ಇರುವುದಿಲ್ಲ.

ಬೆನಿಫಿಟ್ ಸಿಗಲ್ಲ

Pic: Getty images

ಪಾಲಿಸಿ ಲ್ಯಾಪ್ಸ್ ಆಗಿದ್ದು ಗಮನಕ್ಕೆ ಬಂದ ಬಳಿಕ ಆದಷ್ಟೂ ಬೇಗ ಅದರ ಪುನಶ್ಚೇತನಕ್ಕೆ ಯತ್ನಿಸುವುದು ಬಹಳ ಮುಖ್ಯ. ಯಾಕೆಂದರೆ, ಲ್ಯಾಪ್ಸ್ ಆಗಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ವಿಮಾ ಪ್ರಯೋಜನ ಸಿಗುವುದಿಲ್ಲ.

ತಡ ಬೇಡ

Pic: Getty images

ಪಾಲಿಸಿ ಲ್ಯಾಪ್ಸ್ ಆದ ಬಳಿಕ ಸಾಮಾನ್ಯವಾಗಿ 30 ದಿನಗಳ ಕಾಲ ಗ್ರೇಸ್ ಪೀರಿಯಡ್ ಇರುತ್ತದೆ. ಈ ಸಂದರ್ಭದಲ್ಲಿ ನೀವು ಸುಲಭವಾಗಿ ಪಾಲಿಸಿ ರೀಇನ್ಸ್​ಟೇಟ್ ಮಾಡಬಹುದು.

ಪಾಲಿಸಿ ಪುನಶ್ಚೇತನ ಹೇಗೆ?

Pic: Getty images

ಗ್ರೇಸ್ ಪೀರಿಯಡ್ ಬಳಿಕವೂ ನೀವು ಪಾಲಿಸಿ ಪುನಶ್ಚೇತನ ಮಾಡಬಹುದು. ಇನ್ಷೂರೆನ್ಸ್ ಕಂಪನಿಯಿಂದ ರೀಇನ್ಸ್​ಟೇಟ್ಮೆಂಟ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಕೆ

Pic: Getty images

ನೀವು ಕಟ್ಟದೇ ಬಾಕಿ ಉಳಿಸಿಕೊಂಡಿರುವ ಪ್ರೀಮಿಯಮ್ ಎಲ್ಲವನ್ನೂ ಕಟ್ಟಬೇಕು. ಲೇಟ್ ಫೀ, ಪೆನಾಲ್ಟಿ ಇತ್ಯಾದಿ ಸಮೇತ ಬಾಕಿ ಪ್ರೀಮಿಯಮ್ ಕಟ್ಟಿದರೆ ಮಾತ್ರ ಪಾಲಿಸಿ ರೀಇನ್ಸ್​ಟೇಟ್ ಮಾಡಲು ಸಾಧ್ಯ. ನೀವು ತಡ ಮಾಡಿದಷ್ಟೂ ದಂಡ ಹೆಚ್ಚುತ್ತದೆ.

ಬಾಕಿ ಹಣ ಕಟ್ಟಿ

Pic: Getty images

ನೀವು ಪಾಲಿಸಿ ಪುನಶ್ಚೇತನಗೊಳಿಸಲು ತಡ ಮಾಡಿದಷ್ಟೂ ಇನ್ಷೂರೆನ್ಸ್ ಕಂಪನಿಗಳು ಹಿಂದೆ ಮುಂದೆ ನೋಡಬಹುದು. ಪ್ರೀಮಿಯಮ್ ಮೊತ್ತ ಹೆಚ್ಚಿಸಲೂ ಬಹುದು. ಆದ್ದರಿಂದ ಪಾಲಿಸಿ ರೀಇನ್ಸ್​ಟೇಟ್ ಮಾಡುವುದು ನಿಧಾನಿಸದಿರಿ.

ಪಾಲಿಸಿ ಹೋಗಬಹುದು

Pic: Getty images