ಕೆನಡಾದ ಪ್ರಮುಖ ಆದಾಯ ಮೂಲಗಳಲ್ಲಿ ವಿದೇಶೀ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವೂ ಒಂದು. ಕೆನಡಾದ ವಿವಿಗಳಲ್ಲಿ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ.
Pic credit: Google
ಕೆನಡಾದ ವಿದೇಶೀ ವಿದ್ಯಾರ್ಥಿಗಳ ಸಮೂಹದಲ್ಲಿ ಭಾರತೀಯರ ಸಂಖ್ಯೆ ಅಧಿಕ. ಶೇ. 40ರಷ್ಟು ವಿದೇಶೀಯ ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ.
Pic credit: Google
2023ರಲ್ಲಿ ಕೆನಡಾದಿಂದ ಸ್ಟಡಿ ಪರ್ಮಿಟ್ ಸಿಕ್ಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 5,00,000 ಇತ್ತು. 2024ರಲ್ಲಿ ಇದು 4,85,000ಕ್ಕೆ ಇಳಿದಿದೆ. 2025ರಲ್ಲಿ ಇನ್ನೂ ಶೇ. 10 ಇಳಿಸುತ್ತಿದೆ ಕೆನಡಾ.
Pic credit: Google
ಕೆನಡಾಗೆ ವಲಸೆ ಹೋದ ಭಾರತೀಯರ ಸಂಖ್ಯೆ 2013ರಲ್ಲಿ 32,828 ಇತ್ತು. 2023ರಲ್ಲಿ ಇದು 1,39,715 ಆಗಿದೆ. ಹತ್ತು ವರ್ಷದಲ್ಲಿ ವಲಸೆ ಹೋದವರ ಸಂಖ್ಯೆ ಶೇ. 326ರಷ್ಟು ಹೆಚ್ಚಾಗಿದೆ.
Pic credit: Google
ವಿದೇಶಗಳಿಗೆ ಹೋಗಿ ಓದುತ್ತಿರುವ ಭಾರತೀಯರ ಸಂಖ್ಯೆ 13.35 ಲಕ್ಷ ಇದೆ. ಇದರಲ್ಲಿ ಕೆನಡಾವೊಂದರಲ್ಲೇ 4,27,000 ಭಾರತೀಯರು ಓದುತ್ತಿದ್ದಾರೆ.
Pic credit: Google
ಇದೇ ವೇಳೆ ಭಾರತ ಮತ್ತು ಕೆನಡಾ ಮಧ್ಯೆ ಉನ್ನತ ಮಟ್ಟದಲ್ಲಿ ಸೂಕ್ಷ್ಮ ಪರಿಸ್ಥಿತಿ ನೆಲಸಿದೆ. ತನ್ನ ನೆಲದಲ್ಲಿ ನಡೆದ ಕೆಲ ಹತ್ಯೆಗಳಲ್ಲಿ ಭಾರತದ ಕೈವಾಡ ಇದೆ ಎಂಬುದು ಕೆನಡಾ ಸಂಶಯ.
Pic credit: Google
ಕೆನಡಾದ ನಿಲುವನ್ನು ಭಾರತ ಪ್ರಬಲವಾಗಿ ವಿರೋಧಿಸುತ್ತಿದೆ. ಕೆನಡಾದ ರಾಯಭಾರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳನ್ನು ಭಾರತ ಉಚ್ಚಾಟಿಸಿದೆ. ತನ್ನ ರಾಯಭಾರಿಯನ್ನೂ ವಾಪಸ್ ಕರೆಸಿಕೊಂಡಿದೆ.
Pic credit: Google
ಇದೇ ವೇಳೆ, ಕೆನಡಾದ ಕೆಲವೆಡೆ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಯಾದ ಘಟನೆ ನಡೆದಿದೆಯಾದರೂ ಒಟ್ಟಾರೆಯಾಗಿ ಭಯಪಡುವಂತಹ ವಾತಾವರಣ ಕೆನಡಾದಲ್ಲಿಲ್ಲ.