ರತನ್ ಟಾಟಾ ಮೇರು ವ್ಯಕ್ತಿತ್ವಕ್ಕೆ ನಿದರ್ಶನಗಳಿವು

10 Oct 2024

Pic: PTI images

Vijayasarathy SN

ಅಪ್ರೆಂಟಿಸ್ ಆದ ಟಾಟಾ

Pic: PTI images

ರತನ್ ಟಾಟಾ ಆಗರ್ಭ ಶ್ರೀಮಂತರಾದರೂ ಪದವಿಗೆ ಮುನ್ನ ಟಾಟಾ ಸ್ಟೀಲ್ ಶಾಪ್ ಫ್ಲೋರ್​ನಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡಿದ್ದರು. ಪದವಿ ಬಳಿಕ ವಿವಿಧ ಗ್ರೂಪ್ ಕಂಪನಿಗಳಲ್ಲಿ ಕೆಲಸ ಮಾಡಿದರು.

ಮಾನ, ಮರ್ಯಾದೆ...

Pic: PTI images

ರತನ್ ಟಾಟಾ ಯಾರಿಗೂ ಅವಮಾನ ಮಾಡುತ್ತಿರಲಿಲ್ಲ, ಅಗೌರವ ತೋರುತ್ತಿರಲಿಲ್ಲ. ಇದು ಅವರ ಅಜ್ಜಿಯಿಂದ ಕಲಿತ ಗುಣ. ಸಂಯಮ, ಘನತೆ ಎಷ್ಟು ಮುಖ್ಯ ಎಂಬುದನ್ನು ಅರಿತಿದ್ದರು.

ಹಾರ್ವರ್ಡ್​ನಲ್ಲಿ ಅವಮಾನ

Pic: PTI images

ಹಾರ್ವರ್ಡ್ ಯೂನಿವರ್ಸಿಟಿಗೆ ರತನ್ ಟಾಟಾ ಸೇರಿದಾಗ ಆರಂಭದ ದಿನಗಳು ಕಠಿಣವಾಗಿದ್ದವು. ಸಹ-ವಿದ್ಯಾರ್ಥಿಗಳು ಇವರ ಮೇಲೆ ದರ್ಪ ತೋರುತ್ತಿದ್ದರು. ಆದರೆ ಈ ಸಂದರ್ಭಗಳೇ ರತನ್ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯವಾದವು.

ಫೋರ್ಡ್ ಮತ್ತು ಟಾಟಾ

Pic: PTI images

ರತನ್ ಟಾಟಾ ತಮ್ಮ ಟಾಟಾ ಮೋಟಾರ್ಸ್ ಕಂಪನಿಯನ್ನು ಅಮೆರಿಕದ ಫೋರ್ಡ್​ಗೆ ಮಾರಲು ಮುಂದಾಗಿದ್ದರು. ಆದರೆ, ಕಾರು ತಯಾರಿಕೆ ಬಗ್ಗೆ ಗಂಧವೇ ಇಲ್ಲದಿದ್ದರೂ ಯಾಕೆ ಈ ಉದ್ಯಮಕ್ಕೆ ಬಂದಿರೆಂದು ಫೋರ್ಡ್ ಸಂಸ್ಥಾಪಕರು ಅವಮಾನಿಸಿದ್ದರು.

ಛಲ ಬಿಡದ ಟಾಟಾ

Pic: PTI images

ಫೋರ್ಡ್​ನಿಂದ ಅಪಮಾನವಾದ ಬಳಿಕ ರತನ್ ಟಾಟಾ ತಮ್ಮ ಸಂಸ್ಥೆಯ ಬೆಳವಣಿಗೆಗೆ ಕಟಿಬದ್ಧರಾದರು. ಮುಂದೆ ಇದೇ ಫೋರ್ಡ್​ನ ಜಾಗ್ವರ್, ಲ್ಯಾಂಡ್ ರೋವರ್ ಎಂಬ ಜನಪ್ರಿಯ ಬ್ರ್ಯಾಂಡ್​ಗಳನ್ನು ಟಾಟಾ ಮೋಟಾರ್ಸ್ ಖರೀದಿಸಿತು.

ಟಾಟಾ ಸರಳತೆ...

Pic: PTI images

ವಿಮಾನವೊಂದರಲ್ಲಿ ಎಕನಾಮಿಕ್ ಕ್ಲಾಸ್​ನಲ್ಲಿ ರತನ್ ಟಾಟಾ ತಮ್ಮ ಡ್ರೈವರ್ ಪಕ್ಕದ ಸೀಟ್​ನಲ್ಲೇ ಕೂತು ಪ್ರಯಾಣಿಸಿದ್ದರು. ಕಂಪನಿಯ ಕ್ಯಾಂಟೀನ್​ನಲ್ಲಿ ಎಲ್ಲರಂತೆ ಊಟಕ್ಕೆ ಕ್ಯೂ ನಿಲ್ಲುತ್ತಿದ್ದರು.

ಜಂಭ ಇಲ್ಲದ ಟಾಟಾ

Pic: PTI images

ಪಿಯೂಶ್ ಗೋಯಲ್ ಮನೆಗೆ ಹೋದಾಗ ರತನ್ ಟಾಟಾಗೆ ಇಡ್ಲಿ, ಸಾಂಬಾರ್, ದೋಸೆ ಬಡಿಸಲಾಗಿತ್ತು. ಐಷಾರಾಮಿ ಹೋಟೆಲ್​ಗಳ ಒಡೆಯರಾದರೂ ಟಾಟಾ ಈ ಸಿಂಪಲ್ ಊಟವನ್ನು ಸವಿದು, ಮೆಚ್ಚಿಕೊಂಡಿದ್ದರಂತೆ.