ಹಾಲು ಉತ್ಪಾದನೆಯಲ್ಲಿ ಭಾರತ ನಂ. 1; ಕರ್ನಾಟಕದ ಕೊಡುಗೆ ಎಷ್ಟು?

11 Dec 2023

By: Vijayasarathy SN

ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ ಭಾರತದ ಪಾಲು 24% ಇದೆ. ಇಲ್ಲಿ 2021-22ರಲ್ಲಿ 210 ಎಂಎಂಟಿಗೂ ಹೆಚ್ಚು ಹಾಲು ಉತ್ಪಾದನೆ ಆಗಿದೆ.

ಭಾರತದಲ್ಲಿ 210 MMT

(Pic credit: Google)

ಭಾರತಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಆಗುವುದು ರಾಜಸ್ಥಾನದಲ್ಲಿ. ಇಲ್ಲಿ ವರ್ಷಕ್ಕೆ 33.3 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದನೆ ಆಗುತ್ತದೆ.

1. ರಾಜಸ್ಥಾನ

(Pic credit: Google)

ಭಾರತದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ 2021-22ರಲ್ಲಿ ಒಂದು ವರ್ಷದಲ್ಲಿ 33.01 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದನೆ ಆಗಿದೆ.

2. ಉತ್ತರಪ್ರದೇಶ

(Pic credit: Google)

ಮತ್ತೊಂದು ಬೃಹತ್ ರಾಜ್ಯ ಮಧ್ಯಪ್ರದೇಶದಲ್ಲಿ 19 ಮಿಲಿಯನ್ ಮೆಟ್ರಿಲ್ ಟನ್ ಹಾಲು ಉತ್ಪಾದನೆ ಆಗುತ್ತದೆ. ಇತ್ತೀಚಿನ ವರ್ಷದಲ್ಲಿ ಇಲ್ಲಿ ಹೆಚ್ಚಳ ಆಗಿದೆ.

3. ಮಧ್ಯಪ್ರದೇಶ

(Pic credit: Google)

ಪ್ರತಿಕೂಲ ಹವಾಮಾನದಲ್ಲೂ ಗುಜರಾತ್ ಉತ್ತಮ ಪಶುಸಂಗೋಪನೆ ವ್ಯವಸ್ಥೆ ಹೊಂದಿದೆ. ಇಲ್ಲಿ ಉತ್ಪಾದನೆ ಆಗುವ ಹಾಲಿನ ಪ್ರಮಾಣ 16.72 ಎಂಎಂಟಿ.

4. ಗುಜರಾತ್

(Pic credit: Google)

ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಆಗುವುದು ಆಂಧ್ರದಲ್ಲಿ. 2021-22ರಲ್ಲಿ ಇಲ್ಲಿ 15.40 ಎಂಎಂಟಿಯಷ್ಟು ಹಾಲು ಉತ್ಪಾದನೆ ಆಗಿದೆ.

5. ಆಂಧ್ರಪ್ರದೇಶ

(Pic credit: Google)

ಮಹಾರಾಷ್ಟ್ರದಲ್ಲಿ 2021-22ರಲ್ಲಿ ಆದ ಹಾಲಿನ ಉತ್ಪಾದನೆ 14.31 ಎಂಎಂಟಿ. ರಾಜ್ಯದ ಗಾತ್ರಕ್ಕೆ ಹೋಲಿಸಿದರೆ ಹಾಲಿನ ಉತ್ಪಾದನೆ ತುಸು ಕಡಿಮೆಯೇ.

6. ಮಹಾರಾಷ್ಟ್ರ

(Pic credit: Google)

ಕೃಷಿಗಾರಿಕೆಯಲ್ಲಿ ಸಾಕಷ್ಟು ಮುಂದುವರಿದಿರುವ ಪಂಜಾಬ್ ರಾಜ್ಯದಲ್ಲಿ ಒಂದು ವರ್ಷದಲ್ಲಿ 14.08 ಎಂಎಂಟಿಯಷ್ಟು ಹಾಲಿನ ಉತ್ಪಾದನೆ ಆಗಿದೆ.

7. ಪಂಜಾಬ್

(Pic credit: Google)

ಒಂದು ಕಾಲದಲ್ಲಿ ಕೃಷಿಯಲ್ಲಿ ಸಾಕಷ್ಟು ಹಿಂದುಳಿದಿದ್ದ ಬಿಹಾರದಲ್ಲಿ ಈಗ ಒಂದು ವರ್ಷದಲ್ಲಿ 12.12 ಎಂಎಂಟಿ ಹಾಲಿನ ಉತ್ಪಾದನೆ ಆಗುತ್ತದೆ.

8. ಬಿಹಾರ

(Pic credit: Google)

ದೇಶದ ಅತ್ಯಂತ ಸುಧಾರಿತ ರಾಜ್ಯಗಳಲ್ಲಿ ಒಂದೆನಿಸಿರುವ ಕರ್ನಾಟಕದಲ್ಲಿ 2021-22ರ ವರ್ಷದಲ್ಲಿ ಆದ ಹಾಲಿನ ಉತ್ಪಾದನೆ 11.80 ಎಂಎಂಟಿಯಷ್ಟು.

9. ಕರ್ನಾಟಕ

(Pic credit: Google)

ಪುಟ್ಟ ರಾಜ್ಯವಾದ ಹರ್ಯಾಣ ಭಾರತದ ಅತಿದೊಡ್ಡ ಹಾಲು ಉತ್ಪಾದಕ ನಾಡೆನಿಸಿದೆ. ಇಲ್ಲಿ 11.63 ಎಂಎಂಟಿ ಹಾಲು ಉತ್ಪಾದನೆ ಆಗುತ್ತದೆ.

10. ಹರ್ಯಾಣ

(Pic credit: Google)