ಭಾರತ ಮೂಲದ ವಿವೇಕ್ ರಾಮಸ್ವಾಮಿ ಅಮೆರಿಕದ ಮುಂಬರುವ ಸರ್ಕಾರದಲ್ಲಿ ಸರ್ಕಾರಿ ಕ್ಷಮತಾ ಇಲಾಖೆಯ ಸಹ-ಮುಖ್ಯಸ್ಥ ಆಗಿದ್ದಾರೆ. ಅಲ್ಲಿಯ ಜನಪ್ರಿಯ ರಾಜಕಾರಣಿ.
Pic credit: PTI
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಡೊನಾಲ್ಡ್ ಟ್ರಂಪ್ ಎದುರು ಸ್ಪರ್ಧಿಸಿ, ನಂತರ ರೇಸ್ನಿಂದ ಹೊರಬಂದವರು ಅವರು. ಡೆಮಾಕ್ರಾಟಿಕ್ ಪಕ್ಷದ ಹಲವು ವಿಚಾರಗಳ ವಿರೋಧಿ ಅವರು.
Pic credit: PTI
ಭಾರತದಲ್ಲಿ ಎಡಪಂಥ ಮತ್ತು ಬಲಪಂಥ ವೈಚಾರಿಕ ವೈರುದ್ಧ್ಯ ಇದ್ದಂತೆ ಅಮೆರಿಕದಲ್ಲಿ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಸಿದ್ಧಾಂತ ವೈಭಿನ್ಯತೆ ಇದೆ. ವಿವೇಕ್ ಅವರ ಕೆಲ ವಿಚಾರಗಳು ಮುಂದಿನ ಸ್ಲೈಡ್ಗಳಲ್ಲಿ...
Pic credit: PTI
ದೇವರ ಅಸ್ತಿತ್ವ ನಿಜ... ಮತ್ತು ಜಗತ್ತಿನಲ್ಲಿ ಇರುವುದು ಎರಡೇ ಲಿಂಗ ಎನ್ನುತ್ತಾರೆ ವಿವೇಕ್. ಅಮೆರಿಕದಲ್ಲಿ ನಾಸ್ತಿಕವಾದ ಮತ್ತು ಟ್ರಾನ್ಸ್ಜೆಂಡರ್ ಚಳವಳಿಗೆ ಕೊಟ್ಟ ಟಾಂಟ್ ಇದು.
Pic credit: PTI
ಪಳೆಯುಳಿಕೆ ಇಂಧನ ಇರುವುದೇ ಮನುಕುಲದ ಉಪಯೋಗಕ್ಕಾಗಿ... ಹಾಗೂ ಜನಾಂಗೀಯ ಪ್ರತೀಕಾರವೂ ಜನಾಂಗೀಯ ತಾರತಮ್ಯವೇ ಎಂಬುದು ಅವರ ಅನಿಸಿಕೆ. ರಿವರ್ಸ್ ರೇಸಿಸಂ ಪ್ರವೃತ್ತಿಗೆ ಕೊಟ್ಟ ಟಾಂಟ್ ಇದು.
Pic credit: PTI
ಮುಕ್ತ ಗಡಿ ಎಂಬುದು ಗಡಿಯೇ ಅಲ್ಲ ಎನ್ನುತ್ತಾರೆ ವಿವೇಕ್ ರಾಮಸ್ವಾಮಿ. ಇಲ್ಲಿ ಅಮೆರಿಕಕ್ಕೆ ಮುಕ್ತವಾಗಿ ವಲಸೆಗಾರರು ಹರಿದುಬರುತ್ತಿರುವುದನ್ನು ವಿರೋಧಿಸುವ ಹೇಳಿಕೆ.
Pic credit: PTI
ಬಂಡವಾಳಶಾಹಿ ವ್ಯವಸ್ಥೆಯಿಂದ ಬಡತನ ನಿರ್ಮೂಲನೆ ಆಗುತ್ತೆ ಎನ್ನುವ ಮೂಲಕ ವಿವೇಕ್ ರಾಮಸ್ವಾಮಿ ಅವರು ಅಮೆರಿಕದಲ್ಲಿ ಹೆಚ್ಚುತ್ತಿರುವ ಸೋಷಿಯಲಿಸಂ ವಿಚಾರವನ್ನು ಕುಟುಕಿದ್ದಾರೆ.