ಭಾರತದ ಬಾಹ್ಯಾಕಾಶ ಕ್ಷೇತ್ರದ ಉದ್ಯಮ ಮುಂಬರುವ ಬಜೆಟ್ನಿಂದ (2025-26) ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ತನ್ನ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.
Pic credit: Google
ಭಾರತದ ಬಾಹ್ಯಾಕಾಶ ಉದ್ಯಮದ ಆರ್ಥಿಕತೆಯ ಗಾತ್ರ ಸದ್ಯ 8.4 ಬಿಲಿಯನ್ ಡಾಲರ್ ಇದೆ. ಅಂದರೆ, ಸುಮಾರು 72,000 ಕೋಟಿ ರೂ ಗಾತ್ರದ ಉದ್ಯಮ ಅದು. ಖಾಸಗಿ ಕಂಪನಿಗಳೂ ಬೆಳೆಯತೊಡಗಿವೆ.
Pic credit: Google
ಖಾಸಗಿ ಕಂಪನಿಗಳು ಸೆಟಿಲೈಟ್ಗಳನ್ನು ನಿರ್ಮಿಸುತ್ತಿವೆ, ರಾಕೆಟ್ನಂತಹ ಲಾಂಚ್ ಸಿಸ್ಟಂಗಳನ್ನು ನಿರ್ಮಿಸುತ್ತಿವೆ. ಮುಂಬರುವ ದಶಕದಲ್ಲಿ ದೊಡ್ಡ ಬಿಸಿನೆಸ್ ಹೊಂದುವ ಸಾಧ್ಯತೆ ಇದೆ.
Pic credit: Google
ಒಟ್ಟಾರೆ ಮ್ಯಾನುಫ್ಯಾಕ್ಚರಿಂಗ್ಗೆ ಪುಷ್ಟಿ ನೀಡಲು ಸರ್ಕಾರ ನಡೆಸುತ್ತಿರುವ ಪಿಎಲ್ಐ ಸ್ಕೀಮ್ ಅನ್ನು ಸ್ಪೇಸ್ ಸೆಕ್ಟರ್ಗೂ ವಿಸ್ತರಿಸಬೇಕು ಎನ್ನುವುದು ಈ ಉದ್ಯಮದ ಪ್ರಮುಖ ಬೇಡಿಕೆ ಆಗಿದೆ.
Pic credit: Google
2025ರ ಬಜೆಟ್ನಲ್ಲಿ ಸ್ಪೇಸ್ ಸೆಕ್ಟರ್ನಲ್ಲಿ ಆಮದು ವಿನಾಯಿತಿ ನೀಡಬೇಕು; ಜಿಎಸ್ಟಿ ದರ ಕಡಿಮೆ ಮಾಡಬೇಕು; ನಿರ್ದಿಷ್ಟ ಅವಧಿಗೆ ಟ್ಯಾಕ್ಸ್ ಹಾಲಿಡೇ ಸೌಲಭ್ಯ ನೀಡಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ.
Pic credit: Google
30 ವರ್ಷದ ಬೆಳವಣಿಗೆಯ ದೃಷ್ಟಿ ಇಟ್ಟುಕೊಂಡು ಅದಕ್ಕೆ ಪೂರಕವಾದ ಹಣಕಾಸು ಅಗತ್ಯತೆಗಳನ್ನು ಹೊಂದಿಸಲು ಸ್ಪೇಸ್ ಎಕನಾಮಿ ಟ್ಯಾಸ್ಕ್ ಫೋರ್ಸ್ ರಚನೆ ಆಗಬೇಕು ಎನ್ನುವ ಕೂಗು ಇದೆ.
Pic credit: Google
ಚೀನಾ, ಜಪಾನ್ ಮೊದಲಾದ ದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಫಂಡಿಂಗ್ ನೀಡುತ್ತಿವೆ. ಭಾರತವೂ ಬಜೆಟ್ ಹೆಚ್ಚಿಸಬೇಕು. ಸ್ಪೆಸ್ ಬಜೆಟ್ ಗಾತ್ರವನ್ನು 50,000 ಕೋಟಿ ರೂಗೆ ಹೆಚ್ಚಿಸಬೇಕೆಂದು ಮನವಿ ಮಾಡಲಾಗಿದೆ.