ಷೇರುಪೇಟೆ ಈ ವಾರವಿಡೀ ಪತನ; ಏನು ಕಾರಣ?

25 Oct 2024

Pic: Getty images

Vijayasarathy SN

ಷೇರು ಮಾರುಕಟ್ಟೆ ಈ ವಾರದ ಐದೂ ದಿನ ಹಿನ್ನಡೆ ಕಂಡಿದೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ತರಗೆಲೆಗಳಂತೆ ಅಲುಗಾಡಿವೆ. ಸೆನ್ಸೆಕ್ಸ್ 5 ದಿನದಲ್ಲಿ 1,823 ಅಂಕ ಕುಸಿದಿದೆ. ಈ ಕುಸಿತಕ್ಕೆ ಸಂಭಾವ್ಯ ಕಾರಣ ನೋಡುವುದಾದರೆ...

ಕಾರಣಗಳೇನು?

Pic: Getty images

ಈ ವಾರ ವಿದೇಶೀ ಹೂಡಿಕೆದಾರರು ಹತ್ತಿರಹತ್ತಿರ 1 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಚೀನಾ ಮಾರುಕಟ್ಟೆಯತ್ತ ಈ ಹೂಡಿಕೆಗಳು ಹೋಗುತ್ತಿರಬಹುದು.

ಎಫ್​ಐಐ ಹೂಡಿಕೆ

Pic: Getty images

ಷೇರುಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಮಾತ್ರವಲ್ಲ, ವಿಸ್ತೃತ ಮಾರುಕಟ್ಟೆ ಪ್ರತಿನಿಧಿಸುವ ಸೂಚ್ಯಂಕಗಳೂ ಕುಸಿತ ಕಂಡಿವೆ. ಎಲ್ಲೆಡೆ ಇದ್ದ ಎಫ್​ಪಿಐ ಹೂಡಿಕೆಗಳು ಹೊರಹೋಗುತ್ತಿವೆ.

ಸಮಗ್ರ ಮಾರುಕಟ್ಟೆ

Pic: Getty images

ವಿವಿಧ ಕಂಪನಿಗಳ ತ್ರೈಮಾಸಿಕ ವರದಿ ಬಿಡುಗಡೆ ಆಗುತ್ತಲೇ ಇವೆ. ಹೆಚ್ಚಿನ ಕಂಪನಿಗಳು ನಿರೀಕ್ಷಿಸಿದ ರೀತಿಯಲ್ಲಿ ಲಾಭ ಅಥವಾ ಆದಾಯ ತೋರಿಲ್ಲ. ಈ ಮಂದಗತಿ ಆದಾಯ ಹೆಚ್ಚಳವು ಹೂಡಿಕೆದಾರರನ್ನು ನಿರಾಸೆಗೊಳಿಸಿರಬಹುದು.

ಹಣಕಾಸು ವರದಿ

Pic: Getty images

ಭಾರತದಲ್ಲಿ ಹಣದುಬ್ಬರ ಸದ್ಯಕ್ಕೆ ಪೂರ್ಣ ಹತೋಟಿಗೆ ಬರುವ ಲಕ್ಷಣ ಇಲ್ಲ. ಅತಿವೃಷ್ಟಿ ಮತ್ತು ಪ್ರವಾಹ ಭೀತಿ ಇದೆ. ಇದರಿಂದ ಬೆಲೆ ಏರಿಕೆ ಆಗಬಹುದು. ಆರ್​ಬಿಐ ಬಡ್ಡಿದರ ಇಳಿಸದೇ ಹೋಗಬಹುದು ಎನ್ನುವ ಭೀತಿ ಆವರಿಸಿದೆ.

ಹಣದುಬ್ಬರ

Pic: Getty images

ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯಮಾಪನ ಅಸಹಜ ಮಟ್ಟದಲ್ಲಿದೆ ಎನ್ನಲಾಗಿದೆ. ಪ್ರಮುಖ ಷೇರುಗಳ ಮೌಲ್ಯ ಮಿತಿಮೀರಿದೆ. ಹೀಗಾಗಿ, ಮಾರ್ಕೆಟ್ ಕರೆಕ್ಷನ್ ಸಹಜವಾಗಿ ಆಗಬೇಕಿತ್ತು. ಅದು ಆಗುತ್ತಿದೆ ಎನ್ನುತ್ತಾರೆ ತಜ್ಞರು.

ವ್ಯಾಲ್ಯುಯೇಶನ್

Pic: Getty images

ಇಸ್ರೇಲ್ ಸಂಘರ್ಷ, ಅಮೆರಿಕ ಚುನಾವಣೆ ಇತ್ಯಾದಿ ಕಾರಣಗಳಿಂದ ಜಾಗತಿಕವಾಗಿ ಅನಿಶ್ಚಿತತೆ ಮತ್ತು ಸಂದಿಗ್ದತೆಯ ಸ್ಥಿತಿ ಇದೆ. ಇದು ಹೂಡಿಕೆದಾರರನ್ನು ತುಸು ಭೀತಿಗೊಳಿಸಿರಬಹುದು.

ಅನಿಶ್ಚಿತತೆ

Pic: Getty images